ಮೀಸಲಾತಿಗಾಗಿ ಗುಜರಾತಿ ಪಟೇಲರ ಮೆಗಾ ರ್ಯಾಲಿ; ಸ್ಥಗಿತಗೊಂಡ ಅಹಮದಾಬಾದ್
ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.
ಅಹಮದಾಬಾದ್: ಇತರೆ ಹಿಂದುಳಿದ ವರ್ಗದಡಿ ಮೀಸಲಾತಿ ಕೋರಿ ಅಹಮದಾಬಾದಿನಲ್ಲಿ ಪಟೇಲ್ ಸಮುದಾಯ ಬೃಹತ್ ರ್ಯಾಲಿ ನಡೆಸಿದೆ.
ಪಟೇಲ್ ಮುಖಂಡರು ಬಂಧ್ ಕರೆದಿರುವುದರಿಮ್ದ ಅಲ್ಲದೆ ಪೊಲೀಸರು ಕೆಲವು ಮುಖ್ಯ ರಸ್ತೆಗಳಿಗೆ ಯಾರೂ ಬರದಂತೆ ನಿರ್ಬಂಧ ಹೇರಿರುವುದರಿಂದ ಹಾಗು ಜನಕ್ಕೆ ಅಗತ್ಯ ಇರದ ಹೊರತು ಮನೆಯಿಂದ ಹೊರಬೀಳದಂತೆ ಸೂಚಿಸಿರುವುದು ಗುಜರಾತಿನ ವಾಣಿಜ್ಯ ರಾಜಧಾನಿ ಅಹಮದಾಬದನ್ನು ಸ್ತಬ್ಧಗೊಳಿಸಿದೆ.
'ಪಾಟಿದಾರ್ ಅನಾಮತ್ ಆಂದೋಲನ ಸಮಿತಿ'ಯ ಸಂಚಾಲಕ ಹಾರ್ದಿಕ್ ಪಟೇಲ್ ಅವರು ತಿಳಿಸಿರುವಂತೆ ಜಿ ಎಂ ಡಿ ಸಿ ಮೈದಾನದಲ್ಲಿ 'ಮಾಹಾ ಕ್ರಾಂತಿ ರ್ಯಾಲಿ' ನಡೆಯಲಿದೆ ಎಂದಿದ್ದಾರೆ.
"ಇಲ್ಲಿನ ಪ್ರದೇಶಿಕ ನಿವಾಸಿಗಳಿಗೆ ತೊಂದರೆಯಾಗದಂತೆ ನಗರದಲ್ಲಿ ಹಾಗೂ ಇಡೀ ಗುಜರಾತಿನಲ್ಲಿ ಸಂಪೂರ್ಣ ಬಂಧ್ ಗೆ ಕರೆ ನೀಡಿದ್ದೇವೆ. ನಾಳೆ ಕೂಡ ಶಾಲೆ ಕಾಲೇಜು ಮತ್ತು ಅಂಗಡಿಗಳನ್ನು ತೆರೆಯದಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಹಿಂದುಳಿದ ವರ್ಗದಡಿ ಪಟೇಲ್ ಸಮುದಾಯವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಅವರು ತಿಳಿಸಿ ಮಾತುಕತೆಗೆ ಬರುವಂತೆ ಮುಖಂಡರಿಗೆ ಮನವಿ ಮಾಡಿದ್ದರೂ ಕೂಡ ಪಟೇಲ್ ಸಮುದಾಯ ಪಟ್ಟು ಸಡಿಲಿಸಲು ನಿರಾಕರಿಸಿದೆ.
ರಾಜ್ಯದಾದ್ಯಂತ ಪೊಲೀಸರು ಬಿಗಿ ಭದ್ರತೆಗೆ ಮುಂದಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

