ಪ್ರಧಾನ ಸುದ್ದಿ

ಬಿಬಿಎಂಪಿ ತೀರ್ಪು: ಬಿಜೆಪಿಗೆ ಬೃಹತ್ ಮುನ್ನಡೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗುತ್ತಿದ್ದು, ಬಿಜೆಪಿ ಪಕ್ಷ ಬೃಹತ್ ಮುನ್ನಡೆ ಪಡೆದಿದೆ

ಬಿಬಿಎಂಪಿ ತೀರ್ಪು: ಬಿಜೆಪಿಗೆ ಬೃಹತ್ ಮುನ್ನಡೆ
ಬಿಬಿಎಂಪಿ ಚುನಾವಣಾ ಫಲಿತಾಂಶ-2015
Published On :

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗುತ್ತಿದ್ದು, ಬಿಜೆಪಿ ಪಕ್ಷ ಬೃಹತ್ ಮುನ್ನಡೆ ಪಡೆದಿದೆ.

ಒಟ್ಟು 198 ಕ್ಷೇತ್ರಗಳ ಪೈಕಿ 51 ಕ್ಷೇತ್ರಗಳ ಫಲಿತಾಂಶ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಈ ಪೈಕಿ ಕಾಂಗ್ರೆಸ್ ಪಕ್ಷ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಜೆಪಿ ಪಕ್ಷ 25, ಜೆಡಿಎಸ್ 10 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದರೆ, 3 ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.  ಹೊಂಗಸಂದ್ರದಲ್ಲಿ ಬಿಜೆಪಿಯ ರಾಮಚಂದ್ರ ಅವರು ಗೆಲುವು ಸಾಧಿಸಿದ್ದರೆ, ಸಿಂಗಸಂಧ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಶಾಂತಾಬಾಬು ಅವರು ಜಯ ಸಾಧಿಸಿದ್ದಾರೆ.

ಇನ್ನು ಬಾಣಸವಾಡಿಯಲ್ಲಿ ಬಿಜೆಪಿಯ ಎ ಕೋದಂಡ ರೆಡ್ಡಿ, ದೇವರ ಜೀವನಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಪತ್ ರಾಜ್, ರಾಮಸ್ವಾಮಿ ಪಾಳ್ಯದಲ್ಲಿ ಕಾಂಗ್ರೆಸ್ ನ ನೇತ್ರಾವತಿ ಕೃಷ್ಣೇಗೌಡ, ಲಗ್ಗೆರೆಯಲ್ಲಿ ಜೆಡಿಎಸ್ ನ ಮಂಜುಳ ನಾರಾಯಣ ಸ್ವಾಮಿ, ಜೋಗುಪಾಳ್ಯದಲ್ಲಿ ಬಿಜೆಪಿಯ ಗೌತಮ್ ಕುಮಾರ್, ಶಾಂತಲಾನಗದಲ್ಲಿ ಬಿಜೆಪಿಯ ಎಂಬಿ ದ್ವಾರಕನಾಥ್, ಕೆಂಪಾಪುರ ಅಗ್ರಹಾರ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಇನ್ನು ಲಕ್ಕ ಸಂದ್ರ ದಲ್ಲಿ ಬಿಜೆಪಿಯ ಮಹೇಶ್ ಬಾಬು, ಆಡುಗೋಡಿಯಲ್ಲಿ ಕಾಂಗ್ರೆಸ್ ಪಕ್ಷದ ಮಂಜುಳ ಮತ್ತು ಶೆಟ್ಟಿ ಹಳ್ಳಿಯಲ್ಲಿ  ಕಾಂಗ್ರೆಸ್ ನ ನಾಗಭೂಷಣ್ ಅವರು ಜಯ ಸಾಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.