ಬಿಬಿಎಂಪಿ ಚುನಾವಣೆ: ಮತದಾರರಿಂದ ದೊರೆಯಲಿಲ್ಲ ಸ್ಪಂದನೆ
ರಾಜಧಾನಿ ಬೆಂಗಳೂರಿನ ಮತದಾರರು ಬಿಬಿಎಂಪಿ ಚುನಾವಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಕಳೆದ ಸಲಕ್ಕಿಂತ ಶೇಕಡವಾರು ಮತದಾನ ಪ್ರಮಾಣ ತುಸು ಹೆಚ್ಚಳವಾದರೂ ಒಟ್ಟಾರೆ ಪ್ರಮಾಣ ಶೇ.50 ದಾಟಬಹುದು...

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮತದಾರರು ಬಿಬಿಎಂಪಿ ಚುನಾವಣೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಿಲ್ಲ. ಕಳೆದ ಸಲಕ್ಕಿಂತ ಶೇಕಡವಾರು ಮತದಾನ ಪ್ರಮಾಣ ತುಸು ಹೆಚ್ಚಳವಾದರೂ ಒಟ್ಟಾರೆ ಪ್ರಮಾಣ ಶೇ.50 ದಾಟಬಹುದು. ಚುನಾವಣಾ ಆಯೋಗದಿಂದ ತಡರಾತ್ರಿ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಶೇ.49.25ರಷ್ಟು ಮತದಾನ
ನಡೆದಿದೆ.
ಒಟ್ಟಾರೆ ಸುಶಿಕ್ಷಿತ ಮತದಾರರಿಂದ ನೀರಸ ಪ್ರತಿಕ್ರಿಯೆದೊರೆತಿದೆ. ನಿರ್ಲಕ್ಷ್ಯ, ನಿರ್ಲಿಪ್ತತೆ: ಸಿಲಿಕಾನ್ ಸಿಟಿ, ಬುದ್ಧಿವಂತರ ನಗರ, ಸುಶಿಕ್ಷಿತರ ರಾಜಧಾನಿ ಎಂಬ ಖ್ಯಾತಿಗಳ ಬೆಂಗಳೂರಿನಲ್ಲಿ ಬಿಬಿಎಂಪಿ ಚುನಾವಣೆಗೆ ನಿರ್ಲಿಪ್ತ ಭಾವನೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಹಾನಗರದ ಭವಿಷ್ಯವೆಂದೇ ಬಿಂಬಿಸಲಾಗಿ ದ್ದ ಬಹುನಿರೀಕ್ಷಿತ ಈ ಚುನಾವಣೆಯಲ್ಲಿ ಶೇ.48ರಷ್ಟು ಮತದಾನ ಮಾತ್ರ ಮತದಾನ ನಡೆದಿದೆ. ಬಹುತೇಕ ಮತದಾರರು ಹಿಂದಿನ ಚಾಳಿಯಂತೆ ದೂರ ಸರಿದಿದ್ದಾರೆ. ಮತದಾನ ಪ್ರಮಾಣದ ಲೆಕ್ಕಾಚಾರ ತಡರಾತ್ರಿಯವರೆಗೂ ನಡೆದಿದ್ದು, ಅದರ ಸ್ಪಷ್ಟ ಚಿತ್ರಣ ಭಾನುವಾರ ಲಭ್ಯವಾಗಲಿದೆ. ಹೀಗಾಗಿ ಮತದಾನ ಪ್ರಮಾಣ ಶೇ.50 ದಾಟಿದರೂ ಅಚ್ಚರಿ ಇಲ್ಲ.
ರಾಜ್ಯ ಸರ್ಕಾರದ ಆಡಳಿತ ಕುರಿತ ಜನಾದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದ ಈ ಚುನಾವಣೆಯಲ್ಲಿ ಮತದಾರರು ನಿರೀಕ್ಷಿತ ರೀತಿಯಲ್ಲಿ ಹಕ್ಕು ಚಲಾಯಿಸಿಲ್ಲ. ಇದರಿಂದಾಗಿ ಮತದಾನದ ಈ ಪ್ರಮಾಣ ಆಡಳಿತ ವ್ಯವಸ್ಥೆ ವಿರುದಟಛಿದ ಬೇಸರವೋ? ಅಥವಾ ಮತದಾರರ ನಿರ್ಲಕ್ಷ್ಯದ ಆಟವೋ ಎನ್ನುವ ಗೊಂದಲ ಮೂಡಿಸಿದೆ. ಶೇ.4 ಹೆಚ್ಚಳ: ಬೃಹತ್ ಬೆಂಗಳೂರಿನಲ್ಲಿ 73,88,256 ಮತದಾರರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಇತರ ಪಕ್ಷ ಹಾಗೂ ಪಕ್ಷೇತರರೂ ಸೇರಿದಂತೆ 1,121 ಅಭ್ಯರ್ಥಿಗಳ ಹಣೆ ಬರಹ ಬರೆಯಬೇಕಿತ್ತು. ಇವರಲ್ಲಿ ಶೇ.60ರಷ್ಟು ಮತದಾರರು ಮತದಾನ ಮಾಡಿ ದಾಖಲೆಗಳನ್ನು ಮುರಿಯುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಶೇ.49.25 ಮತದಾರರು ಹಕ್ಕುಚಲಾಯಿಸಿ ಹಿಂದಿನ ಚುನಾವಣೆಗಿಂತ ಶೇ.6ರಷ್ಟು ಮಾತ್ರ ಹೆಚ್ಚಾಗುವಂತೆ ಮಾಡಿದ್ದಾರೆ.
ಮತದಾರರನ್ನು ಮನವೊಲಿಸಲು ಎಲ್ಲಾ ಪಕ್ಷಗಳು ನಡೆಸಿದ ತೀವ್ರ ಕಸರತ್ತು ಹಾಗೂ ಚುನಾವಣಾ ಆಯೋಗದ ಸರ್ವ ರೀತಿಯ ಸರ್ಕಸ್‍ಗಳ ನಡುವೆಯೂ ಮತದಾರರು ಮತಗಟ್ಟೆ
ಬಳಿ ಬರುವುದರಕ್ಕೆ ಅಷ್ಟಾಗಿ ಆಸಕ್ತಿ ತೋರಿಸಿಲ್ಲ. ಹೀಗಾಗಿ ರಾಜಧಾನಿಯಲ್ಲಿ ಕಡಿಮೆ ಮತದಾನ ಆಗಿದೆ.
ಕೊಂಚ ಏರಿದ್ದೂ ದಾಖಲೆಯೇ
2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.44ರಷ್ಟಿತ್ತು. ಅದೇ ರೀತಿ 2013ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ನಗರದ ಮತದಾನದ ಪ್ರಮಾಣ
ಶೇ.53ಕ್ಕೇ ಏರಿಕೆಯಾಗಿತ್ತು. ಅಂದು ಚುನಾವಣಾ ಆಯೋಗದ ಅನುಷ್ಠಾನ ಅಧಿಕಾರಿಯಾಗಿದ್ದ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರು ಸತತ ಜಾಗೃತಿ ಕಾರ್ಯಕ್ರಮಗಳ ಮೂಲಕ
ಮತದಾನ ಪ್ರಮಾಣದಲ್ಲಿ ಶೇ.8ರಷ್ಟು ಹೆಚ್ಚಾಗುವಂತೆ ಮಾಡಿದ್ದರು. ಆದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣದಲ್ಲಿ ಶೇ. 50ಕ್ಕೇ ಇಳಿಯಿತು. ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಶೇ.60ಕ್ಕೆ ಏರಿಸಬೇಕೆಂದು ಬಿಬಿಎಂಪಿ ಹಾಗೂ ಚುನಾವಣಾ ಆಯೋಗ ತೀವ್ರ ಪ್ರಯತ್ನ ನಡೆಸಿತ್ತು.
ಆಯೋಗ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳೂ ಸೇರಿದಂತೆ ವಿವಿಧ ರೂಪದಲ್ಲಿ ಮತದಾನ ಉತ್ತೇಜನ ಸಂದೇಶಗಳನ್ನೂ ರವಾನಿಸಲಾಗಿತ್ತು. ಆದರೆ, ಮತದಾರರು
ಜಾಗೃತಿಗೆ ಅಷ್ಟಾಗಿ ಸ್ಪಂದಿಸದೆ ಎಂದಿನಂತೆ ವಾರಾಂತ್ಯದ ಪ್ರವಾಸ, ಪ್ರಯಾಣಗಳಿಗೆ ಒತ್ತು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


