ಕಾಣೆಯಾಗಿದ್ದ ೨೦೦ ಮಿಲಿಯನ್ ಡಾಲರ್ ಸಂಪತ್ತುಳ್ಳ ನಾಜಿ ರೈಲು ಪತ್ತೆ?
೨೦೦ ಮಿಲಿಯನ್ ಡಾಲರ್ ಮೌಲ್ಯದ ಬಂಧೂಕುಗಳು, ಮುತ್ತು ರತ್ನ, ಕಲಾತ್ಮಕ ವಸ್ತುಗಳು, ಇನ್ನಿತರ ಬೆಲೆಬಾಳುವ ವಸ್ತುಗಳನ್ನೊತ್ತು ಜರ್ಮನಿಯಿಂದ ಹಂಗೆರಿಗೆ ಹೊರಟಿದ್ದ

ಲಂಡನ್: ೨೦೦ ಮಿಲಿಯನ್ ಡಾಲರ್ ಮೌಲ್ಯದ ಬಂಧೂಕುಗಳು, ಮುತ್ತು ರತ್ನ, ಕಲಾತ್ಮಕ ವಸ್ತುಗಳು, ಇನ್ನಿತರ ಬೆಲೆಬಾಳುವ ವಸ್ತುಗಳನ್ನೊತ್ತು ಜರ್ಮನಿಯಿಂದ ಹಂಗೆರಿಗೆ ಹೊರಟಿದ್ದ ನಾಜಿ ರೈಲೊಂದು ೧೯೪೫ರಲ್ಲಿ ಕಾಣೆಯಾಗಿತ್ತು . ಈಗ ಇಬ್ಬರು ನಿಧಿ ಪತ್ತೆದಾರರು ಆ ರೈಲನ್ನು ಪತ್ತೆ ಹಚ್ಚಿರುವುದಾಗಿ ಹೇಳಿಕೊಂಡಿದ್ದಾರೆ.
ಈ ರೈಲಿನ ಸ್ಥಳವನ್ನು ಪತ್ತೆ ಹಚ್ಚಿರುವ ಪೋಲೆಂಡ್ ಮತ್ತು ಜರ್ಮನಿ ನಾಗರಿಕರಿಬ್ಬರು, ಆ ರೈಲಿನ ಮೌಲ್ಯದ ೧೦% ಅವರಿಗೆ ನೀಡುವುದಾದರೆ ವಿಷಯ ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.
ಈ ರೈಲು ೧೯೪೫ ರಲ್ಲಿ ಸೈಜ್ ಕ್ಯಾಸಲ್ ಸುರಂಗಮಾರ್ಗವನ್ನು ಹೊಕ್ಕಿತ್ತು ಆದರೆ ಅಲ್ಲಿಂದ ಹೊರಬಂದಿರಲಿಲ್ಲ. ಹಲವಾರು ವರ್ಷಗಳ ನಂತರ ಆ ಸುರಂಗವನ್ನು ಮುಚ್ಚಲಾಗಿತ್ತು. ಈ ಸ್ಥಳವನ್ನು ಈಗ ಪೋಲೆಂಡಿನ ವ್ರೋಕ್ಲಾದಲ್ಲಿದೆ ಎನ್ನಲಾಗಿದೆ.
೧೯೪೫ರ ಎರಡನೆ ವಿಶ್ವ ಯುದ್ಧದ ಸಮಯದಲ್ಲಿ ಅಮೇರಿಕಾ ಮುಂದಾಳತ್ವದ ಮಿತ್ರ ರಾಷ್ಟ್ರಗಳ ಸೇನೆ ಜರ್ಮನಿಯ ಒಳಹೊಕ್ಕಿದಾಗ, ಅಲ್ಲಿನ ಅಪೂರ್ವ ನಿಧಿಯನ್ನು ಉಳಿಸಲು ೨೪ ಭೋಗಿಗಳ ರೈಲಿನಲ್ಲಿ ನಿಧಿಯನ್ನು ತುಂಬಿ ಕಳುಹಿಸಲಾಗಿತ್ತು ಎನ್ನಲಾಗಿದೆ. ಇದನ್ನು 'ಚಿನ್ನದ ರೈಲು' ಎಂದೆ ನಂತರ ಬಣ್ಣಿಸಲಾಗಿತ್ತು. ಇದನ್ನು ಅಮೇರಿಕಾ ಸೈನಿಕರು ತಡೆದು ಲೂಟಿ ಮಾಡಿದ್ದರು ಎಂದು ಕೂಡ ಊಹಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


