ಪ್ರಧಾನ ಸುದ್ದಿ

ಕಾಂಗ್ರೆಸ್, ಜೆಡಿಎಸ್‍ಗೆ ಆರಂಭದಲ್ಲೇ ವಿಘ್ನ

ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‍ನ ಇಬ್ಬರು ಹಾಗೂ ಜೆಡಿಎಸ್‍ನ ಮೂವರು ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವುದರೊಂದಿಗೆ ಈ ಪಕ್ಷಗಳಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ...

ಕಾಂಗ್ರೆಸ್, ಜೆಡಿಎಸ್‍ಗೆ ಆರಂಭದಲ್ಲೇ ವಿಘ್ನ
ಆತ್ಮಹತ್ಯೆಗೆ ಯತ್ನಿಸಿದ ಜೆಡಿಎಸ್‍ನ ಅಭ್ಯರ್ಥಿ ರಾಕೇಶ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು
Published On :

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‍ನ ಇಬ್ಬರು ಹಾಗೂ ಜೆಡಿಎಸ್‍ನ ಮೂವರು ಅಧಿಕೃತ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಳ್ಳುವು
ದರೊಂದಿಗೆ ಈ ಪಕ್ಷಗಳಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ನಾಮಪತ್ರ ತಿರಸ್ಕೃತಗೊಂಡ ಆಘಾತದಿಂದ ಜೆಡಿಎಸ್ ಅಭ್ಯರ್ಥಿಯೊಬ್ಬರು ಆತ್ಮಹತ್ಯೆಗೂ ಯತ್ನಿಸಿದ ಘಟನೆಯೂ ನಡೆದಿದೆ. ಬಿಜೆಪಿಯಿಂದ ಯಾವುದೇ ನಾಮಪತ್ರ ತಿರಸ್ಕೃತಗೊಂಡ ಬಗ್ಗೆ ವರದಿಯಾಗಿಲ್ಲ. ಸೋಮವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಉಮೇದುವಾರರ ನಾಮಪತ್ರ ಪರಿಶೀಲನೆ ನಡೆಯಿತು. 5 ನಾಮಪತ್ರಗಳು ಮಾತ್ರ ತಿರಸ್ಕೃತವಾಗಿವೆ. 198 ವಾರ್ಡ್‍ಗಳಿಂದ 1,765 ಅಭ್ಯರ್ಥಿಗಳು 2,037 ನಾಮಪತ್ರಗಳನ್ನು ಸಲ್ಲಿಸಿದ್ದರು.

ಒಟ್ಟು 54 ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆ ಆರಂಬಿsಸಿದರು. ಪರಿಶೀಲನಾ ಕಾರ್ಯದಲ್ಲಿ ತೀರಾ ವಿಳಂಬ ಆಗಿದ್ದರಿಂದ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದರೆ, ಪಕ್ಷಗಳ ಮೂಲಗಳ ಪ್ರಕಾರ ಜೆಡಿಎಸ್‍ನ 3, ಕಾಂಗ್ರೆಸ್‍ನ 2 ನಾಮಪತ್ರಗಳು ತಿರಸ್ಕೃತವಾಗಿವೆ. ಆತ್ಮಹತ್ಯೆಗೆ ಯತ್ನ: ತಮ್ಮ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬೇಸರಗೊಂಡ ಜೆಡಿಎಸ್‍ನ ಅಭ್ಯರ್ಥಿ ರಾಕೇಶ್ ಜೈನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ದ್ದರೆ, ಎರಡು ಬಿಫಾರಂ ನೀಡುವ ಮೂಲಕ ತಮ್ಮ ನಾಮಪತ್ರ ತಿರಸ್ಕಾರ ಆಗುವುದಕ್ಕೆ ಕಾರಣವಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ರುಕ್ಸಾರ್ ಬಾನು ಮಾಜಿ ಪ್ರಧಾನಿ ದೇವೇಗೌಡರ ನಿವಾಸದ ಮುಂದೆ ಪ್ರತಿಭಟಿಸಿದರು.

ಕಾಚರಕನಹಳ್ಳಿಯ ಜೆಡಿಎಸ್ ಅಭ್ಯರ್ಥಿ ರಾಕೇಶ್ ಜೈನ್ ನಾಮಪತ್ರದ ಜತೆ ಜಾತಿ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ. ಇದರಿಂದ ನಾಮಪತ್ರ ತಿರಸ್ಕಾರವಾಗಿದೆ. ವಿಷಯ ತಿಳಿಯುತ್ತಿದ್ದಂತೆ  ಕೇಶ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬನಶಂಕರಿ ದೇವಸ್ಥಾನ ವಾರ್ಡ್‍ನಲ್ಲಿ ಪಾಲಿಕೆ ಮಾಜಿ ಸದಸ್ಯ ದಿವಾನ್ ಅಲಿ ಪತ್ನಿ ರುಕ್ಸಾರ್ ಬಾನು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಟಿ. ಶ್ರೀನಿವಾಸಮೂರ್ತಿ ಅವರಿಗೂ ಜೆಡಿಎಸ್ ಬಿಫಾರಂ ನೀಡಿದ್ದರಿಂದ ರುಕ್ಸಾರ್ ಬಾನು ನಾಮಪತ್ರ ತಿರಸ್ಕೃತವಾಗಿದೆ. ಇದೇ ರೀತಿ ಹೆಮ್ಮಿಗೆಪುರದಲ್ಲಿ ಪಾಲಿಕೆ ಮಾಜಿ ಸದಸ್ಯ ಹನುಮಂತೇಗೌಡ ತಮ್ಮ ಪತ್ನಿಯನ್ನು ಜೆಡಿಎಸ್‍ನಿಂದ ಕಣಕ್ಕಿಳಿಸಿದ್ದರು. ಆದರೆ, ಬಿ ಫಾರಂ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಿಲಿಲ್ಲ. ಹೀಗಾಗಿ ಅವರ ನಾಮಪತ್ರವೂ ತಿರಸ್ಕೃತವಾಗಿದೆ.

ಕಾಂಗ್ರೆಸ್‍ಗೆ ತೊಂದರೆ: ಕಾಂಗ್ರೆಸ್‍ನಲ್ಲಿ ಈಜಿಪುರ ವಾರ್ಡ್‍ನ ಪಿ. ರಾಮಚಂದ್ರಪ್ಪ ಅವರ ನಾಮಪತ್ರ ತಿರಸ್ಕೃತವಾಗಿದೆ ಎಂದು ಹೇಳಲಾಗಿತ್ತು. ರಾಮಚಂದ್ರಪ್ಪ ಜಾತಿ ಪ್ರಮಾಣ ಪತ್ರ ಸಲ್ಲಿಸದಿದ್ದರೂ ಅವರ ನಾಮಪತ್ರ ಸ್ವೀಕರಿಸಲಾಗಿದೆ. ಇದರಲ್ಲಿ ಅಧಿಕಾರಿಗಳ ಕೈವಾಡವಿದೆ. ಆದ್ದರಿಂದ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು. ಅಭ್ಯರ್ಥಿಯ ನಾಮಪತ್ರ ತಿರಸ್ಕರಿಸಬೇಕೆಂದು ಆಗ್ರಹಿಸಿ ಬಿಜೆಪಿ ಮುಖಂಡರು ಆಯೋಗಕ್ಕೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಆದರೆ, ರಾಮಚಂದ್ರಪ್ಪ ಅವರ ನಾಮಪತ್ರ ತಿರಸ್ಕೃತವಾಗಿರುವ ಬಗ್ಗೆ ಆಯೋಗ ದೃಢಪಡಿಸಲಿಲ್ಲ. ಹೊಂಗಸಂದ್ರದಲ್ಲಿ ನಾಮಪತ್ರದ ಜತೆ ಜಾತಿ ಪ್ರಮಾಣ ಪತ್ರ ಸಲ್ಲಿಸದೇ ಇರುವುದಕ್ಕೆ ಕಾಂಗ್ರೆಸ್‍ನ ಕೆ. ಮಹೇಶ್ವರಿ ನಾಮಪತ್ರ ತಿರಸ್ಕೃತವಾಗಿದೆ. ಇಲ್ಲಿ ಅಭ್ಯರ್ಥಿಗಳ ಕೊರತೆ ಮತ್ತು ಸಿಕ್ಕ ಅಭ್ಯರ್ಥಿಗಳಲ್ಲಿ ಯಾರನ್ನು ಆಯ್ಕೆಮಾಡಬೇಕೆನ್ನುವ ಗೊಂದಲದಿಂದ ಜೆಡಿಎಸ್ ಅಭ್ಯರ್ಥಿಯನ್ನೇ ಹಾಕಿಲ್ಲ. ಈಗ ಬಿಜೆಪಿಯ ಟಿ.ಭಾರತಿ ಬಿಟ್ಟರೆ ಅಧಿಕೃತ ಪಕ್ಷದ ಯಾವುದೇ ಅಭ್ಯರ್ಥಿಗಳಿಲ್ಲ. ಕಣದಲ್ಲಿರುವ ಇಬ್ಬರು ಪಕ್ಷೇತರ ಅಭ್ಯರ್ಥಿಗಳಿಗೆ ಕಾಂಗ್ರೆಸ್/ ಜೆಡಿಎಸ್ ಬೆಂಬಲ ಸಿಕ್ಕರೆ ಕಣ ರಂಗೇರಬಹುದು. ಕೆ.ಆರ್. ಮಾರುಕಟ್ಟೆ ವಾರ್ಡ್‍ನಲ್ಲಿ ಕಾಂಗ್ರೆಸ್‍ನ ಅಂಜುಮï ಅವರ ನಾಮಪತ್ರವೂ ತಿರಸ್ಕೃತವಾಗಿರುವ ಬಗ್ಗೆ ಪಕ್ಷದೊಳಗೆ ಗೊಂದಲ ಉಂಟಾಗಿತ್ತು. ಆದರೆ, ರಾತ್ರಿಯಾದರೂ ಅದು ದೃಢವಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.