ಕ್ರಿಮಿನಲ್ ಹಿನ್ನಲೆಯಿರುವವರಿಗೆ ಟಿಕೆಟ್ ಇಲ್ಲ: ಮುಲಾಯಂ
ಉತ್ತರಪ್ರದೇಶದ ೨೦೧೭ರ ವಿಧಾನಸಭಾ ಚುನಾವಣೆಗಳಿಗೆ ಕ್ರಿಮಿನಲ್ ಹಿನ್ನಲೆಯಿರುವವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ

ಲಕನೌ: ಉತ್ತರಪ್ರದೇಶದ ೨೦೧೭ರ ವಿಧಾನಸಭಾ ಚುನಾವಣೆಗಳಿಗೆ ಕ್ರಿಮಿನಲ್ ಹಿನ್ನಲೆಯಿರುವವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ತಿಳಿಸಿದ್ದಾರೆ.
ಸಮಾಜವಾದಿ ನಾಯಕ ಜ್ಞಾನೇಶ್ವರ್ ಮಿತ್ರ ಅವರ ೮೩ನೆ ಜನ್ಮ ವರ್ಷದ ಆಚರಣೆ ವೇಳೆಯಲ್ಲಿ ಅವರು ಮಾತನಾಡುತ್ತಿದ್ದರು.
ಪಂಚಾಯತಿ ಚುನಾವಣೆಗಳು ೨೦೧೭ರ ವಿಧಾನಸಭಾ ಚುನಾವಣೆಗಳಿಗೆ ತಾಲೀಮು ಇದ್ದಂತೆ ಎಂದಿರುವ ಅವರು ಲೋಕಸಭಾ ಚುನಾವಣೆಯಲ್ಲಿ ೮೦ ಸ್ಥಾನಗಳಲ್ಲಿ ಕೇವಲ ೫ ಸ್ಥಾನ ಗೆದ್ದಿರುವುದರಿಂದ ಆತ್ಮಶೋಧನೆ ಮಾಡಿಕೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಯಾರದೋ ಅನಾಗರಿಕ ವರ್ತನೆಯಿಂದ ಪಕ್ಷದ ಘನತೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಉತ್ತರಪ್ರದೇಶದ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಅವರು ಸೈಕಲ್ ಯಾತ್ರೆಯನ್ನು ಉದ್ಘಾಟನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


