ಪ್ರಧಾನ ಸುದ್ದಿ

ಹೈದ್ರಾಬಾದ್‍ನಲ್ಲಿ ಅಶ್ವಿನ್ ತೀವ್ರ ವಿಚಾರಣೆ

ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‍ನನ್ನು ಹೈದ್ರಾಬಾದ್‍ಗೆ ಕರೆದೊಯ್ದಿರುವ ಎಸ್‍ಐಟಿ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದ ಪಂಚನಾಮೆ ಮಾಡಿದ್ದಾರೆ.

ಹೈದ್ರಾಬಾದ್‍ನಲ್ಲಿ ಅಶ್ವಿನ್ ತೀವ್ರ ವಿಚಾರಣೆ
ಆರೋಪಿ ಅಶ್ವಿನ್ ರಾವ್
Published On :

ಬೆಂಗಳೂರು: ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಅಶ್ವಿನ್ ರಾವ್‍ನನ್ನು ಹೈದ್ರಾಬಾದ್‍ಗೆ ಕರೆದೊಯ್ದಿರುವ ಎಸ್‍ಐಟಿ ಪೊಲೀಸರು ಆತನನ್ನು ತೀವ್ರ  ವಿಚಾರಣೆಗೊಳಪಡಿಸಿ ಹಲವು ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳದ ಪಂಚನಾಮೆ ಮಾಡಿದ್ದಾರೆ.

ಅಲ್ಲಿಯೇ ಎರಡು ದಿನ ವಿಚಾರಣೆ ನಡೆಸಿ ಭಾನುವಾರ ಬೆಂಗಳೂರಿಗೆ ಕರೆದುಕೊಂಡು ಬರುವ ಸಾಧ್ಯತೆ ಇದೆ. ಹೈದ್ರಾಬಾದ್‍ನ ಕುಕ್ಕಟಪಲ್ಲಿಯ ರೈನ್‍ಬೋ ಅಪಾರ್ಟ್ ಮೆಂಟ್‍ಗೆ ಕರೆದೊಯ್ದು ಸ್ಥಳ  ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಂತರ ಲೋಕಾಯುಕ್ತ ಡೀಲ್‍ನ ಕಾರ್ಯಾಚರಣೆ ಕುರಿತು ಅಗತ್ಯ ಮಾಹಿತಿ ಪಡೆದು, ಅಲ್ಲಿನ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬಂಧಿತ ಶ್ರೀನಿವಾಸಗೌಡ, ಶಂಕರೇಗೌಡ ಹಾಗೂ ಅನಿಲ್‍ಕುಮಾರ್ ಅವರ ಹೇಳಿಕೆ ಆಧರಿಸಿ ಅಶ್ವಿನ್‍ರಾವ್ ರನ್ನು ಹೈದರಾಬಾದ್‍ಗೆ ಕರೆದೊಯ್ದು ಪಂಚನಾಮೆ ನಡೆಸಲಾಗುತ್ತಿದೆ.  ಹೈದ್ರಾಬಾದ್‍ನಿಂದ ಯಾರ ಜತೆ ಸಂಪರ್ಕ ಹೊಂದಿದ್ದ, ಅಲ್ಲಿಗೆ ಯಾರನ್ನು ಕರೆಸಿದ್ದ ಎಂಬೆಲ್ಲ ಮಾಹಿತಿ ಕಲೆ ಹಾಕುತ್ತಿರುವುದಾಗಿ ಮೂಲಗಳು ತಿಳಿಸಿವೆ.

ನುಣುಚುವ ಯತ್ನ
ಸೈಯದ್ ರಿಯಾಜ್ ಕಚೇರಿ ಪರಿಶೀಲನೆ ನಡೆಸಿ ಹಲವು ಕಡತಗಳನ್ನು ವಶ ಪಡಿಸಿಕೊಂಡಿರುವ ಎಸ್‍ಐಟಿ ಅಧಿಕಾರಿಗಳು ಅವುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ತನಿಖಾಧಿಕಾರಿ ಕಚೇರಿಯಲ್ಲಿ  ಇರಬೇಕಾದ ಕಡತಗಳು ಪಿಆರ್‍ಒ ಕಚೇರಿಯಲ್ಲೇಕಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ, ಸರಿಯಾದ ಉತ್ತರ ನೀಡದ ರಿಯಾಜ್ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಸಂಸ್ಥೆಯ  ಸ್ಥಿರ ದೂರವಾಣಿಯನ್ನು ಖಾಸಗಿ ಕೆಲಸಗಳಿಗೆ ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಸರಿಯಾದ ಉತ್ತರ ನೀಡದ ಅವರು, ಆ ಕರೆಗಳನ್ನು ಮಾಡಿರುವುದು ಅಶ್ವಿನ್ ರಾವ್ ಎಂದು ತಿಳಿಸಿದ್ದಾರೆ. ಆತ  ಯಾರ ಜತೆ ಏನೆಲ್ಲಾ ಮಾತನಾಡಿದ್ದಾನೆ ಎಂಬ ಬಗ್ಗೆ ರಿಯಾಜ್‍ಗೆ ಮಾಹಿತಿ ಇದ್ದು, ತೀವ್ರ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.