ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರ ದಾಖಲೆ ಬೆಲೆಗೆ ಮಾರಾಟ
ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ದಾಖಲೆಯ ಆರು ಮಿಲಿಯನ್ ಪೌಂಡ್ ಗೆ ಮಾರಾಟ....

ನವದೆಹಲಿ: ಮೈಸೂರು ಹುಲಿ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯ ಕಾಲದಲ್ಲಿ ಬಳಸುತ್ತಿದ್ದ ಶಸ್ತ್ರಾಸ್ತ್ರಗಳು ದಾಖಲೆಯ ಆರು ಮಿಲಿಯನ್ ಪೌಂಡ್ ಗೆ ಮಾರಾಟವಾಗಿವೆ.
ಏಪ್ರಿಲ್ 21 ರಂದು ಲಂಡನ್ ನ ಬೋನ್ ಹ್ಯಾಮ್ಸ್ ನ ಇಸ್ಲಾಮಿಕ್ ಅಂಡ್ ಇಂಡಿಯನ್ ಆರ್ಟ್ ಸೇಲ್ ನಲ್ಲಿ ಟಿಪ್ಪುವಿನ ಕಾಲದ 30 ಆಯುಧಗಳನ್ನು ಮಾರಾಟಕ್ಕೆ ಇಡಲಾಗಿತ್ತು.
ಟಿಪ್ಪು ಉಪಯೋಗಿಸುತ್ತಿದ್ದ ಅತ್ಯಮೂಲ್ಯ ಹರಳುಗಳಿಂದ ತಯಾರಿಸಲ್ಪಟ್ಟ ರತ್ನಖಚಿತ, ಹುಲಿ ತಲೆಯ ಹಿಡಿ ಹೊಂದಿರುವ ಖಡ್ಗ 2. 154,500 ಪೌಂಡ್ ಗಳ ಬೆಲೆಗೆ ಮಾರಾಟವಾಗಿದೆ.
60 ಸಾವಿರದಿಂದ 80 ಸಾವಿರ ಪೌಂಡ್ ಗಳಿಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿದ್ದ ಆಯೋಜಕರಿಗೆ ಹೆಚ್ಚು ಬೆಲೆಗೆ ಮಾರಾಟವಾಗಿದ್ದು ಸಂತೋಷವಾಗಿದೆ. ಇನ್ನು ಟಿಪ್ಪು ಸುಲ್ತಾನ್ ಬಳಸುತ್ತಿದ್ದ ಫ್ಲಿಂಟ್ ಲಾಕ್ ಗನ್ 722,500 ಪೌಂಡ್ ಗಳಿಗೆ ಮಾರಾಟವಾಗಿದೆ. ಟಿಪ್ಪುವಿನ ಖಡ್ಗ ಸೇರಿದಂತೆ ಹಲವು ವಸ್ತುಗಳ ಮಾರಾಟದಿಂದ 7.4 ಪೌಂಡ್ ಮಿಲಿಯನ್ ಹಣ ಸಂಗ್ರಹವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೈಸೂರು ಸುಲ್ತಾನರ ಕೊನೆಯ ರಾಜನಾಗಿದ್ದ ಟಿಪ್ಪು ವಿಶೇಷ ಅಭಿರುಚಿ ಹೊಂದಿದವನಾಗಿದ್ದು, ತನ್ನ ಶಸ್ತ್ರಗಾರದ ಆಯುಧಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತಿದ್ದದ್ದು ಎಲ್ಲರನ್ನು ಆಶ್ಚರ್ಯಗೊಳಿಸಿದೆ. ಯುದ್ಧೋಪಕರಣಗಳಿಗೆ ಹುಲಿ ಚಿತ್ರವನ್ನು ವಿನ್ಯಾಸ ಮಾಡಿಸುತ್ತಿದ್ದ ಟಿಪ್ಪುವಿಗೆ ಮೈಸೂರು ಹುಲಿ ಎಂಬ ಬಿರುದು ಸಹ ಇತ್ತು.
ಯುದ್ಧ ಕಾಲದಲ್ಲಿ ಬಳಸುತ್ತಿದ್ದ ಲೋಹದ ಫಿರಂಗಿಗಳು, ಅಪರೂಪದ ಹರಳುಗಳಿಂದ ವಿನ್ಯಾಸಗೊಳಿಸಿದ ಖಡ್ದ, ಬಂದೂಕು, ಹಾಗೂ ಪಿಸ್ತೂಲು ಸೇರಿದಂತೆ ಹಲವು ಯುದ್ದೋಪಕರಣಗಳನ್ನು ಪ್ರಪಂಚದ ವಿವಿಧ ದೇಶಗಳಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


