ಪ್ರಧಾನ ಸುದ್ದಿ

ವೈಮಾನಿಕ ದಾಳಿ; ಇಸಿಸ್ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸ್ಥಿತಿ ಗಂಭೀರ?

ಕಳೆದ ಮಾರ್ಚ್ ತಿಂಗಳಲ್ಲಿ ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇಸಿಸ್ ಸಂಘಟನೆಯ ನಾಯಕ ಅಬು ಬಕರ್...

ವೈಮಾನಿಕ ದಾಳಿ; ಇಸಿಸ್ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಸ್ಥಿತಿ ಗಂಭೀರ?
ಅಬು ಬಕರ್ ಅಲ್ ಬಾಗ್ದಾದಿ (ಸಂಗ್ರಹ ಚಿತ್ರ -ಕೃಪೆ: ಎಪಿ)
Published On :

ಬಾಗ್ದಾದ್‌: ಕಳೆದ ಮಾರ್ಚ್ ತಿಂಗಳಲ್ಲಿ  ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇಸಿಸ್ ಸಂಘಟನೆಯ ನಾಯಕ ಅಬು ಬಕರ್ ಅಲ್ ಬಾಗ್ದಾದಿ
ಗಂಭೀರ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಇಸಿಸ್‌ ಉಗ್ರರ ಸದ್ದಡಗಿಸಲು ಅಮೆರಿಕ ನಡೆಸಿದ  ವೈಮಾನಿಕ ದಾಳಿಯಲ್ಲಿ ಇಸಿಸ್‌ ಉಗ್ರ ಸಂಘಟನೆಯ ಪ್ರಮುಖ ನಾಯಕ ಅಬು ಬಕರ್ ಅಲ್ ಬಾಗ್ದಾದಿ ಗಂಭೀರ
ಗಾಯಗೊಂಡಿರುವುದಾಗಿ 'ದಿ ಗಾರ್ಡಿಯನ್ ' ಪತ್ರಿಕೆ ವರದಿ ಮಾಡಿದೆ.

ಅಬು ಬಕರ್ ಅಲ್ ಬಾಗ್ದಾದಿ ಪಶ್ಚಿಮ ಇರಾಕಿನ ಪ್ರದೇಶದಲ್ಲಿದ್ದ  ವೇಳೆ ಅಮೆರಿಕ ನೇತೃತ್ವದ ವಾಯುದಾಳಿಗೆ ತುತ್ತಾಗಿದ್ದಾನೆ ಎಂದು ಹೇಳಲಾಗುತ್ತಿದೆ.  ಬಾಗ್ಧಾದಿ ಇಸಿಸ್‌ನ ದೈನಂದಿನ ಚಟುವಟಿಕೆಯನ್ನೂ ಸಹ ನಿರ್ವಹಿಸದ ಸ್ಥಿತಿ ತಲುಪಿದ್ದು, ಆತನೀಗ ಕೊಂಚ
ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೆಲವೊಂದು ಸುದ್ದಿ ಮೂಲಗಳ ಪ್ರಕಾರ  ಅಬು ಬಕರ್ ಅಲ್ ಬಾಗ್ದಾದಿ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

ಅಮೇರಿಕ ಮಾರ್ಚ್ 18ರಂದು ಅಲ್ ಬಾಜ್ ನಲ್ಲಿ 3 ಕಾರುಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ 3 ಮಂದಿ ಸಾವನ್ನಪ್ಪಿದ್ದರು. ಆದರೆ ಅದರಲ್ಲಿ ಅಬು ಬಕರ್ ಅಲ್ ಬಾಗ್ದಾದಿ ಕೂಡಾ ಸೇರಿದ್ದಾನೆಯೇ ಎಂಬುದು ಮಾತ್ರ ಖಚಿತವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.