ನಸೀಮ್ ಜೈಯ್ದಿ ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ
ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ನವದೆಹಲಿ: ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ನೇಮಕಕ್ಕೆ ಸಹಿ ಹಾಕಿದ್ದಾರೆ ಎಂದು ಕಾನೂನು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಈ ನೇಮಕ ಏಪ್ರಿಲ್ ೧೯ ನೆ ತಾರೀಖಿನಿಂದ ಜಾರಿಗೆ ಬರಲಿದ್ದು ಇವರು ಹರಿ ಶಂಕರ್ ಬ್ರಹ್ಮ ಅವರನ್ನು ಬದಲಾಯಿಸಲಿದ್ದಾರೆ,
ಜುಲೈ ೨೦೧೭ ರವರೆಗೆ ಅವರ ಅವಧಿ ಮುಂದುವರೆಯಲಿದೆ.
ಈಗ ಸದ್ಯದ ಮೂರು ಸದಸ್ಯರ ಸಾಂವಿಧಾನಕ ಸಮಿತಿ ಚುನಾವಣಾ ಆಯೋಗಯಲ್ಲಿ ಇವರೊಬ್ಬರೇ ಉಳಿಯುವುದು. ವಿ ಸಂಪತ್ ಆಗಲೇ ನಿವೃತ್ತಿಯಾಗಿದ್ದು, ಹರಿ ಶಂಕರ್ ಬ್ರಹ್ಮ ಕೂಡ ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ.
೧೯೭೬ ಬ್ಯಾಚಿನ ಐ ಎ ಎಸ್ ಅಧಿಕಾರಿ ಜೈಯ್ದಿ, ನಾಗರಿಕ ವಿಮಾನಯಾನ ಇಲಾಖೆಯಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


