ಪ್ರಧಾನ ಸುದ್ದಿ

ಕಪ್ಪು ಕಲಾಪ

ಅದೇನು ಬಂತೇ ಅಥವಾ ಬರಲಿಲ್ಲವೇಯ ಉತ್ತರ ಕೊಡಿ... ಇದು ಸಂಸತ್‌ನ ಉಭಯ ಸದನಗಳಲ್ಲೂ...

ಕಪ್ಪು ಕಲಾಪ
ಇನ್ನೂ ಏಕೆ ಕಪ್ಪುಹಣ ತರಲಿಲ್ಲ ಎಂದು ಆರೋಪಿಸಿ ಸಂಸತ್‌ನ ಪ್ರವೇಶ ದ್ವಾರದಲ್ಲಿ ಕಪ್ಪುಕೊಡೆ ಹಿಡಿದು ಪ್ರತಿಭಟನೆ ನಡೆಸುತ್ತಿರುವ ಟಿಎಂಸಿ ಸಂಸದರು.
Published On :

ನವದೆಹಲಿ: ದಿನ ನೂರಾಯ್ತು, ತಿಂಗಳು ಆರಾಯ್ತು, ಎಲ್ಲಿ ಹೋಯ್ತು ಕಪ್ಪುಹಣ?

ಅದೇನು ಬಂತೇ ಅಥವಾ ಬರಲಿಲ್ಲವೇಯ ಉತ್ತರ ಕೊಡಿ... ಇದು ಸಂಸತ್‌ನ ಉಭಯ ಸದನಗಳಲ್ಲೂ ಮಂಗಳವಾರ ಕಂಡು ಬಂದ ದೃಶ್ಯ. ಕಪ್ಪುಹಣಕ್ಕೆ ಸಾಂಕೇತಿಕವಾಗಿ ಜತೆಗೊಂಡು ಕಪ್ಪು ಛತ್ರಿಯನ್ನೂ ಹೊತ್ತು ತಂದಿದ್ದ ಪ್ರತಿಪಕ್ಷಗಳ ಸದಸ್ಯರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದೇ ಮೊದಲ ಬಾರಿಗೆ ಆಕ್ರೋಶದಲ್ಲೂ ಒಗ್ಗಟ್ಟು ಪ್ರದರ್ಶಿಸಿದ್ದು ಪ್ರತಿಪಕ್ಷಗಳು.

ಮಂಗಳವಾರ ಸಂಸತ್‌ನ ಉಭಯ ಸದನಗಳೂ ಅಧಿಕೃತವಾಗಿ ಆರಂಭಗೊಂಡವು. ಕಪ್ಪುಗದ್ದಲ, ಸಿಬಿಐ ಮುಖ್ಯಸ್ಥರ ನೇಮಕ ಸಮಿತಿ ವಿವಾದ ಮತ್ತು ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಮಿತಿ ಹೆಚ್ಚಳ ಸಂಬಂಧ ಗದ್ದಲ ಮಾಡಬೇಕು ಎಂದು ಉದ್ದೇಶದೊಂದಿಗೇ ಸದನಕ್ಕೆ ಬಂದಿದ್ದ ಪ್ರತಿಪಕ್ಷಗಳ ಸದಸ್ಯರು ಸಮಯ ವ್ಯರ್ಥಗೊಳಿಸಲಿಲ್ಲ. ಅಷ್ಟೇನೂ ಬಿಸಿ ಏರದು ಎಂದು ಚಳಿಗಾಲದ ಅಧಿವೇಶನ ಆರಂಭಿಸಿದ್ದ ನರೇಂದ್ರ ಮೋದಿ ಸರ್ಕಾರಕ್ಕೆ ಸರಿಯಾಗಿಯೇ ಬಿಸಿ ಮುಟ್ಟಿಸಿದವು.

ಸಭಾತ್ಯಾಗ
ಮತ್ತೆ ಕಲಾಪ ಆರಂಭವಾದಾಗ ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್(ತಿದ್ದುಪಡಿ) ವಿಧೇಯಕದ ಕುರಿತು ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಪ್ರತಿಪಕ್ಷ ನಾಯಕನನ್ನು ಸಂಪೂರ್ಣ ಮೂಲೆಗುಂಪು ಮಾಡಲಾಗುತ್ತದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿ ಬಹುತೇಕ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.