ಕಪ್ಪುಹಣ ಮಾಹಿತಿ ಇದ್ದರೆ ನಮಗೆ ದಯವಿಟ್ಟು ಕೊಡಿ!

ನವದೆಹಲಿ: ಕಪ್ಪುಹಣ ಖಾತೆದಾರರ ಬಗ್ಗೆ ನಿಮ್ಮಲ್ಲೇನಾದರೂ ಮಾಹಿತಿಯಿದೆಯೇ? ಹಾಗಿದ್ದರೆ ನಮಗೆ ಕೊಟ್ಟುಬಿಡಿ.
ಇದು ಕಪ್ಪುಹಣದ ತನಿಖೆಗಾಗಿ ನೇಮಕಗೊಂಡಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಹೊರಡಿಸಿದ ಸಾರ್ವಜನಿಕ ಪ್ರಕಟಣೆ. ತೆರಿಗೆ ತಪ್ಪಿಸಿ ವಿದೇಶಿ ಬ್ಯಾಂಕುಗಳಲ್ಲಿ ಇಡಲಾಗಿರುವ ಕಪ್ಪುಹಣವನ್ನು ವಾಪಸ್ ತರಲು ಕಸರತ್ತು ನಡೆಸುತ್ತಿರುವ ಎಸ್‌ಐಟಿ ಈಗ ತನ್ನ ಕಾರ್ಯಕ್ಕೆ ಸಾರ್ವಜನಿಕರ ನೆರವನ್ನೂ ಯಾಚಿಸಿದೆ.
ಯಾವುದೇ ಭಾರತೀಯ ವ್ಯಕ್ತಿ ಅಥವಾ ಸಂಸ್ಥೆಗಳು ವಿದೇಶಿ ಬ್ಯಾಂಕುಗಳಲ್ಲಿ ಕಪ್ಪುಹಣ ಇಟ್ಟಿರುವ ಬಗ್ಗೆ, ಅಕ್ರಮ ಆಸ್ತಿ, ಬ್ಯಾಂಕ್ ಖಾತೆ ಹೊಂದಿರುವ ಬಗ್ಗೆ ಯಾರಿಗಾದರೂ ನಿಖರ ಮಾಹಿತಿಯಿದ್ದರೆ ತಕ್ಷಣ ಅದನ್ನು ನಮಗೆ ತಿಳಿಸಿ. ನಿಮ್ಮ ಹೆರಸನ್ನು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಿಗೆ ಎಸ್‌ಐಟಿ ಮನವಿ ಮಾಡಿದೆ.
ಸಾರ್ವಜನಿಕರು ಕಪ್ಪುಹಣದ ಮಾಹಿತಿಯನ್ನು ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ, ನಾರ್ತ್ ಬ್ಲಾಕ್ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು ಅಥವಾ "sit-rev@nic.in' ಎಂಬ ಇ-ಮೇಲ್ ವಿಳಾಸಕ್ಕೆ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಪಾಸ್‌ಪೋರ್ಟ್ ವಿವರ, ಶಂಕಿತ ವ್ಯಕ್ತಿಯ ಅಕ್ರಮ ಆಸ್ತಿಯ ವಿವರ ಮತ್ತು ದಾಖಲೆಗಳನ್ನು ಕಳುಹಿಸಬಹುದು ಎಂದೂ ತನಿಖಾ ತಂಡ ತಿಳಿಸಿದೆ. ವಿದೇಶಗಳಲ್ಲಿ ಅಕ್ರಮ ಆಸ್ತಿ ಇಟ್ಟಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಲಭ್ಯವಾದರೆ ಕೂಡಲೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಉಪಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಈ ಹಿಂದೆಯೇ ತಿಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


