ಪ್ರಧಾನ ಸುದ್ದಿ

ಮದುರೈ ಕಸದ ಡಬ್ಬಿಯಲ್ಲಿ ೧೧ ನಾಡ ಬಾಂಬ್ ಪತ್ತೆ

ತಮಿಳುನಾಡಿನ, ಮದುರೈನ ಅಣ್ಣಾ ನಗರ್ ಪೂರ್ವ ಮುಖ್ಯ ರಸ್ತೆಯ ಒಂದು ಕಸದ ಡಬ್ಬದಲ್ಲಿ ...

ಮದುರೈ ಕಸದ ಡಬ್ಬಿಯಲ್ಲಿ ೧೧ ನಾಡ ಬಾಂಬ್ ಪತ್ತೆ
ನಾಡ ಬಾಂಬ್ (ಸಾಂದರ್ಭಿಕ ಚಿತ್ರ)
Published On :

ಮದುರೈ: ತಮಿಳುನಾಡಿನ, ಮದುರೈನ ಅಣ್ಣಾ ನಗರ್ ಪೂರ್ವ ಮುಖ್ಯ ರಸ್ತೆಯ ಒಂದು ಕಸದ ಡಬ್ಬದಲ್ಲಿ ಸುಮಾರು ೧೧ ನಾಡ ಬಾಂಬುಗಳನ್ನು ಸೋಮವಾರ ಸಂಜೆ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.

ಸುಮಾರು ೪ ಘಂಟೆಗೆ ಕಸದ ಗುಂಡಿಗೆ ಕಸ ಎಸೆಯಲು ಬಂದ ಓರ್ವ ಮಹಿಳೆ ಅಲ್ಲಿ ಕೆಂಪು ಬಣ್ಣದ ಒಂದು ಚೀಲವನ್ನು ಕಂಡು ತೆರೆದು ನೋಡಿದಾಗ ಅದರಲ್ಲಿ ಬಾಂಬ್ ಗಳು ಪತ್ತೆಯಾಗಿವೆ.

ಮದುರೈ ನಗರ ಪೊಲೀಸರಿಗೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂಡಾಕಾರ ಮತ್ತು ಉರುಳೆಯಾಕಾರದಲ್ಲಿದ್ದ ಬಾಂಬುಗಳ ಸುತ್ತ ದಾರದಿಂದ ಬಿಗಿಯಾಗಿ ಸುತ್ತಲ್ಪಟ್ಟಿತ್ತು ಎಂದು ತಿಳಿದು ಬಂದಿದೆ.

ಉಪ ಪೋಲೀಸ್ ಸಮಂತ್ ರೋಹನ್ ನೇತೃತ್ವದಲ್ಲಿ ಪೋಲೀಸ್ ತಂಡ ಸ್ಥಳ ಪರೀಕ್ಷೆ ನಡೆಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಆ ಡಬ್ಬಿಗೆ ಬಾಂಬುಗಳನ್ನು ಎಸೆದವರು ಯಾರೆಂದೂ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.