ಪ್ರಧಾನ ಸುದ್ದಿ

ಇಂದೋರ್ ವಿಮಾನನಿಲ್ದಾಣದ ರನ್ ವೇ ನಲ್ಲಿ ನರಿ ಸೆರೆ

ಇಂದೋರಿನ ದೇವಿ ಅಹಿಲ್ಯಾಬಾಯಿ ವಿಮಾನನಿಲ್ದಾಣದ ರನ್ ವೇ ನಲ್ಲಿ ಓಡಾಡುತ್ತಿದ್ದ ನರಿಯೊಂದನ್ನು...

ಇಂದೋರ್ ವಿಮಾನನಿಲ್ದಾಣದ ರನ್ ವೇ ನಲ್ಲಿ ನರಿ ಸೆರೆ
ಭಾರತೀಯ ನರಿ (ಸಂಗ್ರಹ ಚಿತ್ರ)
Published On :

ಇಂದೋರ್: ಇಂದೋರಿನ ದೇವಿ ಅಹಿಲ್ಯಾಬಾಯಿ ವಿಮಾನನಿಲ್ದಾಣದ ರನ್ ವೇ ನಲ್ಲಿ ಓಡಾಡುತ್ತಿದ್ದ ನರಿಯೊಂದನ್ನು ಶುಕ್ರವಾರ ಸೆರೆ ಹಿಡಿಯಲಾಗಿದೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನರಿಗಳನ್ನು ಹಿಡಿಯಲು ೮ ಬೋನುಗಳನ್ನು ರನ್ ವೇ ಅಕ್ಕಪಕ್ಕ ಇಡಲಾಗಿದ್ದು ಅದರಲ್ಲಿ ಒಂದು ನರಿ ಇಂದು ಬೋನಿಗೆ ಬಿದ್ದಿದೆ ಎಂದು ಅರಣ್ಯ ವಿಭಾಗಾಧಿಕಾರಿ ಎ ಕೆ ಜೋಶಿ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಸುಳಿದಾಡುತ್ತಿದ್ದ ೧೫-೨೦ ನರಿಗಳನ್ನು ಹಿಡಿಯಲು ಬೋನುಗಳನ್ನು ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕನಿಷ್ಟ ಎರಡು ಬಾರಿಯಾದರೂ ನಾವು ರನ್ ವೇ ನಲ್ಲಿ ನರಿಗಳು ಸುಳಿದಾಡುವುದನ್ನು ಕಂಡಿದ್ದೇವೆ ಎನ್ನುವ ವಿಮಾನ ನಿಲ್ದಾಣದ ಅಧಿಕಾರಿ ಬೋನುಗಳನ್ನು ಇಡಲು ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿದ್ದೆವು ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.