'ಹಣ ತೆಗೆದುಕೊಂಡು ಹೋಗಿ ಗರ್ಭಪಾತ ಮಾಡಿಸಿ'
ಬಿಹಾರದ ಕೃಷ್ಣಗಂಜ್ ಜಿಲ್ಲೆಯಲ್ಲಿನ ಪಂಚಾಯತ್ ಒಂದರಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಗೆ...

ಪಾಟ್ನಾ: ಬಿಹಾರದ ಕೃಷ್ಣಗಂಜ್ ಜಿಲ್ಲೆಯಲ್ಲಿನ ಪಂಚಾಯತ್ ಒಂದರಲ್ಲಿ ಅತ್ಯಾಚಾರಕ್ಕೊಳಗಾದ ಬಾಲಕಿಗೆ 50,000 ರು. ಹಣ ತೆಗೆದುಕೊಂಡು ಹೋಗಿ, ಗರ್ಭಪಾತ ಮಾಡಿಸಿ ಎಂದು ಗ್ರಾಮದ ಕಾರ್ಯನಿರ್ವಹಣಾಧಿಕಾರಿ ಆದೇಶಿಸಿರುವ ಬಗ್ಗೆ ವರದಿಯಾಗಿದೆ.
ತಿಂಗಳುಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ಬಾಲಕಿಯೊಬ್ಬಳು ನ್ಯಾಯಕ್ಕಾಗಿ ಪಂಚಾಯತ್ನ ಮೊರೆ ಹೋಗಿದ್ದಳು. ಈ ಬಗ್ಗೆ ವಿಚಾರಿಸಲು ಪಂಚಾಯತ್ ಕರೆದ ಸಭೆಯಲ್ಲಿ ಎಂಟು ಮಂದಿ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಅತ್ಯಾಚಾರ ಸಂತ್ರಸ್ತೆ ತನ್ನ ಅಳಲು ತೋಡಿಕೊಂಡಾಗ, 50,000 ರು. ನೀಡುತ್ತೇವೆ, ಹೋಗಿ ಗರ್ಭಪಾತ ಮಾಡಿಸಿ ಎಂದು ಪಂಚಾಯತ್ನ ಅಧಿಕಾರಿಗಳು ಹೇಳಿದ್ದಾರೆ. ಈ ರೀತಿ ಅಮಾನವೀಯವಾಗಿ ವರ್ತಿಸಿದ ಎಂಟು ಪಂಚಾಯತ್ ಸದಸ್ಯರ ವಿರುದ್ಧ ಬಹದ್ದೂರ್ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಠಾಣೆಯ ಪೊಲೀಸ್ ಅಧಿಕಾರಿ ಮಹ್ಫೂಜ್ ಆಲಂ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅತ್ಯಾಚಾರವೆಸಗಿದ ಪ್ರಮುಖ ಆರೋಪಿ ಮತ್ತು ಆತನ ಅಪ್ಪನನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಇವರಿಬ್ಬರನ್ನೂ ನ್ಯಾಯಾಲಯ ಬಂಧನದಲ್ಲಿರಿಸಲಾಗಿದೆ. ಶೀಘ್ರದಲ್ಲೇ ಇನ್ನಿತರ ಆರೋಪಿಗಳನ್ನೂ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವಾರ ಇಲ್ಲಿನ ಕಿಶನ್ಗಂಜ್ ಪೊಲೀಸ್ ಠಾಣೆಗೆ 16 ವರ್ಷದ ಬಾಲಕಿ ಅಮ್ಮನೊಂದಿಗೆ ಬಂದಿದ್ದು, ತನ್ನನ್ನು ತನ್ನ ಗ್ರಾಮದಲ್ಲಿ ನಾಲ್ಕು ಅಣ್ಣಂದಿರು ಅತ್ಯಾಚಾರಗೈದಿದ್ದಾರೆ ಎಂದು ದೂರಿದ್ದಳು. ಏಳು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತಾನೀಗ ಗರ್ಭಿಣಿ ಎಂಬ ವಿಷಯವನ್ನು ಆ ಹುಡುಗಿ ಹೇಳಿದ್ದಳು.
ಈ ಬಗ್ಗೆ ತನಗೆ ನ್ಯಾಯ ಒದಗಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಆ ಹುಡುಗಿ ಪಂಚಾಯತ್ ಮೊರೆ ಹೋಗಿದ್ದಳು. ಆದರೆ ಪಂಚಾಯತ್ ಸದಸ್ಯರು 50,000 ರು ಕೊಡ್ತೀವಿ, ಗರ್ಭಪಾತ ಮಾಡಿಸು ಎಂದು ಹೇಳಿದ್ದರು. ಆದಾಗ್ಯೂ, ಹಣ ಸ್ವೀಕರಿಸುವುದಕ್ಕೆ ಹುಡುಗಿ ನಿರಾಕರಿಸಿದ್ದಳು ಎಂದು ಠಾಣೆಯ ಆಫೀಸ್ ಇನ್ ಚಾರ್ಜ್ ಶ್ವೇತಾ ಗುಪ್ತಾ ಹೇಳಿದ್ದಾರೆ.
ಪಂಚಾಯತ್ ಸದಸ್ಯರು ಕೊಲೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಬಾಲಕಿ ಪೊಲೀಸ್ನ ಸಹಾಯ ಕೋರಿದ್ದಳು ಎಂದು ಶ್ವೇತಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


