ತಬಲ ಸಾಧಕರು!
ಪುಟ್ಟ ಕಲಾವಿದರ ಉತ್ಸಾಹ ಅಂದು ಇಮ್ಮಡಿಯಾಗಿತ್ತು. ತಾವು ಕಲಿತದ್ದನ್ನು ಸ್ವಲ್ಪವೂ ತಪ್ಪದಂತೆ ಪ್ರದರ್ಶಿಸಬೇಕೆಂಬ ಛಲ, ಆಶಯ ...

ಪುಟ್ಟ ಕಲಾವಿದರ ಉತ್ಸಾಹ ಅಂದು ಇಮ್ಮಡಿಯಾಗಿತ್ತು. ತಾವು ಕಲಿತದ್ದನ್ನು ಸ್ವಲ್ಪವೂ ತಪ್ಪದಂತೆ ಪ್ರದರ್ಶಿಸಬೇಕೆಂಬ ಛಲ, ಆಶಯ ಅವರದ್ದಾಗಿತ್ತು. ಆ 'ಸಂಗೀತ ಸುಧೆ' ಕಾರ್ಯಕ್ರಮದಲ್ಲಿ ಅವರು ಅದನ್ನೆಲ್ಲ ಸಾಧಿಸಿದ್ದರು.
ಪಂಡಿತ್ ರವೀಂದ್ರ ಯಾವಗಲ್ ಅವರ ಶ್ರೀರಾಮ ಕಲಾ ವೇದಿಕೆಯು ಜಕ್ಕೂರಿನ ಭಾರತ್ ಸೇವಾ ಆಶ್ರಮ ಸಂಘದ ಸಭಾಂಗಣದಲ್ಲಿ ಹಿಂದೂಸ್ತಾನಿ ಸಂಗೀತ ಏರ್ಪಡಿಸಿತ್ತು. ತಬಲ ವಾದನದಲ್ಲಿ ಕಿರಣ್ ಯಾವಗಲ್ ಅವರ ಶಿಷ್ಯರಾದ ಶನೈ ಅರಸ್ (ಸೈಂಟ್ ಜೊಸೆಫ್ ಕಾಲೇಜು), ಅಚಿಂತ್ಯ ಕೃಷ್ಣ (ಕೆನ್ಶ್ರೀ ಸ್ಕೂಲ್), ಉತ್ತಮ್ ಅಪ್ಪಯ್ಯ (ವಿದ್ಯಾಶಿಲ್ಪ ಅಕಾಡೆಮಿ) ಮತ್ತು ಕೇದಾರ್ ಅಮ್ಮಾಂಜಿ (ರಾಷ್ಟ್ರೋತ್ಥಾನ ವಿದ್ಯಾಕೇಂದ್ರ) ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಉಠಾನ್, ಪೇಶ್ಕಾರ್, ಠೇಕಾ, ಗತ್, ಮುಖಡಾ, ಚಕ್ರಧಾರ್ ಹಾಗೂ ಕೆಲವು ಖಾಯ್ದಾಗಳನ್ನು ಅಚ್ಚುಕಟ್ಟಾಗಿ ನುಡಿಸಿದ ಪುಟಾಣಿಗಳು ಚಪ್ಪಾಳೆ ಗಿಟ್ಟಿಸುವಲ್ಲಿ ಯಶಸ್ವಿಯಾದರು. ವಿಜಯ್ ಗೋನಹಾಳು ಅವರ ಶಿಷ್ಯೆ ಪ್ರತೀಕ್ಷಾ ಹೂಗಾರ್ (9ನೇ ತರಗತಿ) ಸಿತಾರ್ನ ಅರಳು ಪ್ರತಿಭೆ. ಪೂರಿಯಾ ಧನಶ್ರೀ ರಾಗವನ್ನು ಸುಮಧುರವಾಗಿ ನುಡಿಸಿ ಎಲ್ಲರ ಪ್ರಶಂಸೆಗೆ ಪಾತ್ರಳಾದಳು. ತಬಲಾದಲ್ಲಿ ದೀಪಕ್ ದೇಸಾಯಿ ಉತ್ತಮ ಸಹಕಾರ ನೀಡಿದರು.
'ಇಂದಿರಾ ತಾಳ'ದ ಮೋಡಿ!
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಮಧು ಮಲೈ, ತಮ್ಮ ಗುರು ಪಂ. ಶೇಷಗಿರಿ ಹಾನಗಲ್ ಸಂಯೋಜಿಸಿದ ಅಪರೂಪದ ಹಾಗೂ ಕ್ಲಿಷ್ಟಕರವಾದ 'ಇಂದಿರಾ ತಾಳ' (ಒಂಬತ್ತೂವರೆ ಅಕ್ಷರದ ತಾಳ)ವನ್ನು ಸುಲಲಿತವಾಗಿ ನುಡಿಸಿ ಮೋಡಿ ಮಾಡಿದರು. ಹಿಂದಿನ ಪ್ರಧಾನಿ ದಿ. ಇಂದಿರಾ ಗಾಂಧಿಯವರು ಸಂಗೀತ ಕಲಾವಿದರನ್ನು ಪ್ರೋತ್ಸಾಹಿಸಿದ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ರಚಿತವಾದದ್ದು 'ಇಂದಿರಾ ತಾಳ'. ಪಂ. ವಿನಾಯಕ ತೊರವಿ ಶಿಷ್ಯರಾದ ದತ್ತಾತ್ರೇಯ ವೇಲಂಕರ್ ಅವರ ಗಾಯನ ಕಾರ್ಯಕ್ರಮಕ್ಕೆ ಸಂಪೂರ್ಣ ಮೆರಗು ನೀಡಿತು. ಹಾರ್ಮೋನಿಯಂನಲ್ಲಿ ಸತೀಶ್ ಕೊಳ್ಳಿ ಹಾಗೂ ತಬಲ ವಾದನದಲ್ಲಿ ಕಿರಣ್ ಯಾವಗಲ್ರ ಸಾಥ್ ಗಾಯನಕ್ಕೆ ಪೂರಕವಾಗಿತ್ತು.
- ಚಿತ್ರಾ ಶಿವಪ್ರಸಾದ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


