C Plus Plus ಗೌರಮ್ಮ
ಕಾಲವಿ ಎಂಬ ಕಾವ್ಯನಾಮದಿಂದ c++ ಗೌರಮ್ಮ ಸಂಕಲನದಲ್ಲಿ ಕವಿತೆಗಳನ್ನು ಬರೆದಿರುವ ವಿ. ಲಕ್ಷ್ಮೀಕಾಂತ್ ಅವರು
ಕಾಲವಿ ಎಂಬ ಕಾವ್ಯನಾಮದಿಂದ 'c++ ಗೌರಮ್ಮ' ಸಂಕಲನದಲ್ಲಿ ಕವಿತೆಗಳನ್ನು ಬರೆದಿರುವ ವಿ. ಲಕ್ಷ್ಮೀಕಾಂತ್ ಅವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಅವರಲ್ಲೊಬ್ಬ ಕವಿ ಕೀಬೋರ್ಡ್ ಕೀಗಳ ಸದ್ದಿನಂತೆ ಸದ್ದುಮಾಡುತ್ತಲೇ ಇದ್ದ. ಅವರೊಳಗಿನ ಕವಿ ಜಾಗೃತನಾದದ್ದು ಹಂಸಲೇಖ ಅವರ ಪ್ರಚೋದನೆಯಿಂದ. 'ಹಂಸಲೇಖರವರೇ ನನ್ನ ಕವನಗಳಿಗೆ ಮಾರ್ಗ/ ಏಕೆಂದರೆ ಅವರದು ಸಾಹಿತ್ಯದಲ್ಲಿ ಪ್ರತ್ಯೇಕ ವರ್ಗ/ ನನ್ನ ಕವನಗಳೆಲ್ಲಾ ಅವರಿಗೆ ಅರ್ಪಣೆ' ಎಂದು ಕಾಲವಿಯವರೇ ಹೇಳಿಕೊಂಡಿದ್ದಾರೆ. ಕೃತಿಯಲ್ಲಿ ಸ್ಮಾಲ್ ಸಾಂಗ್ಸ್ ಮತ್ತು ಲಾಂಗ್ ಸಾಂಗ್ಸ್ ಎಂಬ ಎರಡು ಭಾಗಗಳಿವೆ. 'ತಪಸ್ಸಿಗೆ ಕುಳಿತನು/ ವಿಶ್ವಾಮಿತ್ರ/ ಮೇನಕೆ ಬಂದು ನಲಿದಾಗ/ ಆದನು ಆಕೆಯ ಮಿತ್ರ!/'- ಇದು ಅವರ ಸ್ಮಾಲ್ ಸಾಂಗ್ಸ್‌ನ ಒಂದು ಉದಾಹರಣೆ. ಅವರ ಲಾಂಗ್ ಸಾಂಗ್ಸ್‌ನ 'C++ ಗೌರಮ್ಮ' ಕವಿತೆಯಲ್ಲಿ ಬೇರು ಗಟ್ಟಿಯಿಲ್ಲದೆ ಕಂಪ್ಯೂಟರ್ ವಿಜ್ಞಾನ ಕಲಿಯಲು ಬರುವವರನ್ನು ಅವರು ವಿಡಂಬನೆ ಮಾಡಿದ್ದಾರೆ. ಕಾಲವಿಯವರ ಆಲೋಚನೆಗಳು ಪದ್ಯದ ಹಿಡಿತದಿಂದ ತಪ್ಪಿಸಿಕೊಂಡು ಗದ್ಯವಾಗಲು ಹಟಮಾಡುತ್ತಿರುವಂತೆ ಕಂಡರೂ ಅವುಗಳ ಸಂದೇಶದಲ್ಲಿ ಕವಿತ್ವವಿದೆ.
ಕೃತಿ: c++ ಗೌರಮ್ಮ,
ಪ್ರಕಾರ: ಕವಿತೆ,
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಟೋಟಲ್‌ಕನ್ನಡ, ಬೆಂಗಳೂರು,
ಪುಟಗಳು 103, ಬೆಲೆ ರು. 80
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

