ರೇಖಾ ಗಣಪ

ಗಣಪತಿ, ಕಲಾವಿದರಿಗೆ ನಿತ್ಯ ಸ್ಫೂರ್ತಿ. ಅಕ್ಷರ, ರೇಖೆ, ನಾದ, ರೂಪ, ದೃಶ್ಯ... ಎಲ್ಲೆಡೆಯೂ ಆತ ಪ್ರಥಮ ವಂದ್ಯ. ಹೀಗೆ ಕಲೆಗಾರರ ಕಣ್ಣಲ್ಲೂ ಆಸ್ತಿಕರ ಕಣ್ಣಲ್ಲೂ ಮಹಾನಾಯಕನಾದ ಈತನ ಸ್ಫೂರ್ತಿಯಿಂದ ಮಿಂಚಿದ ಕೆಲ ಕಲಾಕೃತಿಗಳು ಇಲ್ಲಿವೆ.
ಗುಲ್ಬರ್ಗದ ಸೃಜನಶೀಲ ಕಲಾವಿದ ಬಸವರಾಜ ಕಲೆಗಾರ್ ಅವರೂ ತಮ್ಮ ರೇಖೆಗಳಲ್ಲಿ ವಿಭಿನ್ನ ರೂಪಗಳ ಗಣೇಶನನ್ನು ಸೆರೆಹಿಡಿದಿದ್ದಾರೆ. ಗಣಪ ಇಲ್ಲಿ ಸಾಂಕೇತಿಕ, ಪ್ರತಿ ರೇಖೆಯಲ್ಲೂ ಸಮಾಜಕ್ಕೊಂದು ಸಂದೇಶ ಸಾರುವ ಜಾಣ್ಮೆ. ತುಂಬ ಸರಳವೆನಿಸಿದರೂ ಭಾವನಾತ್ಮಕ.
ಟ್ರೇಸಿಂಗ್ ಹಾಳೆಯಲ್ಲಿ ಮಾರ್ಕರ್, ಸಿಡಿ ಬಳಸಿ ರೇಖಾ ಗಣಪನ ಸೃಷ್ಟಿ. ವಕ್ರ, ಸರಳ, ನೇರ, ವೃತ್ತ, ಚಲನಾತ್ಮಕ ಹೀಗೆ ಹತ್ತು ಹಲವು ರೇಖೆಗಳಲ್ಲೇ ಗಣಪ ಮೈದಳೆದ ಪರಿಯನ್ನು ನೋಡಿಯೇ ಆನಂದಿಸಬೇಕು. ತಲೆ ಮೇಲೆ ಹ್ಯಾಟ್ ತೊಟ್ಟ ಮಾಡರ್ನ್ ಗಣಪ, ಕೈಯಲ್ಲಿ ಡಮರು ಹಿಡಿದ ನೃತ್ಯ ಗಣಪ... ಹೀಗೆ ವೈವಿಧ್ಯ.
ಶಹಾಪುರ ತಾಲೂಕಿನ ಕೊಂಕಲ್ ಗ್ರಾಮದ ಬಸವರಾಜ ಕಲೇಗಾರ್ ಹಂಪಿ ಕನ್ನಡ ವಿವಿಯಲ್ಲಿ ಚಿತ್ರಕಲೆ ಎಂಎ ಪದವೀಧರ. ಪ್ರಸ್ತುತ ಗುಲ್ಬರ್ಗ ವಿವಿ ದೃಶ್ಯಕಲಾ ವಿಭಾಗದಲ್ಲಿ ಪಿಎಚ್‌ಡಿ ಸಂಶೋಧನೆ. ರಾಜ್ಯದೆಲ್ಲೆಡೆ 20ಕ್ಕೂ ಹೆಚ್ಚು ಕಲಾ ಪ್ರದರ್ಶನ. ಸಂಪರ್ಕ: 9980780144.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


