ಸಾಪ್ತಾಹಿಕಪ್ರಭ

ತಿಲಕರು ತೋರಿಸಿದ ಹಾದಿ

ತಿಲಕರು ತೋರಿಸಿದ ಹಾದಿ
Published On :

ನಾಳೆಯೇ ಗಣೇಶ ಚತುರ್ಥಿ. ಬೀದಿ ಬೀದಿಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಯುವಕರ ತನಕ ಎಲ್ಲರೂ ಗಣೇಶೋತ್ಸವದ ಪೆಂಡಾಲು ಹಾಕುತ್ತಿದ್ದಾರೆ. ಯಾವುದೇ ಚಿಕ್ಕ ಬೀದಿಯಲ್ಲಿ ಕಾಲಿಟ್ಟರೂ ಪುಟಾಣಿಗಳು ಗೋಲಕ ಕುಲುಕುತ್ತ ಹಿಂಬಾಲಿಸುತ್ತಾರೆ.

ಭಾರತೀಯರಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಇಂದಿಗೂ ಅದೇ ಸೌಹಾರ್ದತೆ, ಸಮನ್ವಯತೆಯಿಂದ ಈ ಉತ್ಸವನ್ನು ಆಚರಿಸಲಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಜನಜಾಗೃತಿಗಾಗಿ ದೇಶದ ಹಳ್ಳಿಹಳ್ಳಿ ತಿರುಗಿದ ತಿಲಕರು ಮನಗಂಡ ಕೆಲ ವಿಚಾರಗಳೆಂದರೆ, ಜನ ಒಂದೆಡೆ ಸೇರುವುದೇ ಕಷ್ಟ. ಹಾಗೊಮ್ಮೆ ಒಂದೆಡೆ ಸೇರಿಸಿದರೆ, ಅಂಥ ಕಡೆ ಸ್ವಾತಂತ್ರ್ಯ ಹೋರಾಟದ ಉದ್ದೇಶ ಮತ್ತು ಅಗತ್ಯತೆಯನ್ನು ಜನರಿಗೆ ಮನವರಿಕೆ ಮಾಡಬಹುದು. ಹೀಗೆ ವಿಚಾರ ಮಾಡಿದ ತಿಲಕರಿಗೆ ಕಂಡದ್ದು ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳು. ಊರೂರು ಸುತ್ತುತ್ತಾ ಅಲ್ಲಿನ ಯುವಕರನ್ನು ಸಂಘಟಿಸಿ, ಸಾರ್ವಜನಿಕ ಗಣೇಶೋತ್ಸವ ಪ್ರಾರಂಭಿಸಿ, ಆ ಮೂಲಕ ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ವಿವರಿಸುತ್ತಿದ್ದರು. ನಂತರ ಆ ಹೋರಾಟಕ್ಕೆ ಗಾಂಧೀಜಿಯವರನ್ನು ನೇತಾರರನ್ನಾಗಿ ಮಾಡಿದವರೂ ತಿಲಕರೇ.

ತಿಲಕರು ಪತ್ರಿಕೆಯನ್ನು ಹೋರಾಟದ ಅಸ್ತ್ರದಂತೆ ಬಳಸಿಕೊಂಡರು. ಅವರ ಲೇಖನಿಯಿಂದ ಪ್ರಖರ ಲೇಖನಗಳು ಮೂಡಿಬಂದವು. ಅದೇ ಕಾರಣಕ್ಕೆ ತಿಲಕರನ್ನು ಬಂಧಿಸಲಾಯಿತು. ಹಾಗಂತ ತಿಲಕರು ಜೈಲಿನಲ್ಲಿ ಸುಮ್ಮನೆ ಕುಳಿತರಾ? ಸುಮ್ಮನೆ ಕುಳಿತುಕೊಳ್ಳುವ ಜಾಯಮಾನವೇ ತಿಲಕರದ್ದಲ್ಲ. ಜೈಲಿನಲ್ಲೇ ಭಗವದ್ಗೀತೆಗೆ ವ್ಯಾಖ್ಯಾನ ಬರೆದರು. ಅದು 'ದಿ ಸಿಕ್ರೇಟ್ ಆಫ್ ಗೀತಾ' ಎಂಬ ಉದ್ಗ್ರಂಥವಾಯಿತು.

ಒಟ್ಟಿನಲ್ಲಿ ಭಾರತ ಹೆಮ್ಮೆಪಡಬೇಕಾದ ದೇಶಭಕ್ತ ಹೋರಾಟಗಾರ, ಪತ್ರಕರ್ತ ಮತ್ತು ರಾಜಕೀಯ ಮುತ್ಸದ್ದಿ ಬಾಲಗಂಗಾಧರ ತಿಲಕ್. ಇಂದು ಅವರು ಹುಟ್ಟುಹಾಕಿದ ಸಾರ್ವಜನಿಕ ಗಣೇಶೋತ್ಸವ ಇಡೀ ದೇಶದ ಗಲ್ಲಿಗಲ್ಲಿಗಳಲ್ಲಿ ನಡೆಯುತ್ತಿದೆ. ತಿಲಕರು ನೆನಪಿದ್ದರೆ ತಾನೇ ಗಣೇಶೋತ್ಸವದ ಉದ್ದೇಶ ಅರ್ಥವಾಗುವುದು. ಕನಿಷ್ಠ ಗಣೇಶೋತ್ಸವದ ಸಂದರ್ಭದಲ್ಲಾದರೂ ತಿಲಕರನ್ನು ನೆನೆದು ಧನ್ಯರಾಗೋಣ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.