ರಂಗ ಸಾಂತ್ವನ

ಇದು ಕಲೆಯ ಮೂಲಕ ಕಣ್ಣೀರು ಒರೆಸುವ ಕ್ರಿಯೆ! ಸಾಣೇಹಳ್ಳಿಯ ಶಿವಕುಮಾರ ಕಲಾಸಂಘ ಉತ್ತರಾಖಂಡದ ಜಲಪ್ರಳಯದಲ್ಲಿ ಅಸುನೀಗಿದವರಿಗೆ ಶ್ರದ್ಧಾಂಜಲಿ ಹಾಗೂ ಸಂತ್ರಸ್ತರ ನೆರವಿಗೆ ರಂಗಯಾತ್ರೆ ಕೈಗೊಂಡಿದೆ. ಭಾರತದಾದ್ಯಂತ ಶಿವ ದೇಶ ಸಂಚಾರ. ಅ.10 ಮತ್ತು 11ರಂದು ಬೆಂಗಳೂರಿನ ತರಳಬಾಳು ಕಲಾಭವನದಲ್ಲಿ ಉದ್ಘಾಟನೆಗೊಂಡ ರಂಗಯಾತ್ರೆಯು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ತಿರುಗಾಟದ ಮೂಲಕ ನೀಡಲಿದೆ.
ಸಿರಿಗೆರೆಯ ಸ್ವಾಮೀಜಿ ರಚಿತ 'ಮರಣವೇ ಮಹಾನವಮಿ'ಯನ್ನು ಡಾ. ಪ್ರಭಾಶಂಕರ ಪ್ರೇಮಿಯವರು 'ಮರಣ್ ಹಿ ಮಹಾನವಮಿ' ಎಂದು ಹಾಗೂ 'ಶರಣಸತಿ ಲಿಂಗಪತಿ' ನಾಟಕವನ್ನು ಡಾ. ಅಬ್ದುಲ್ ಹಮೀದ್ ಅವರು 'ಮೈ ಬಾವರಿ ಚೆನ್ನಾ ಕಿ' ಎಂದು ಹಿಂದಿಯಲ್ಲಿ ಅನುವಾದಿಸಿದ್ದಾರೆ. ಎನ್‌ಎಸ್‌ಡಿ ಪದವೀಧರರಾದ ತ್ರೀಶ್ ಡೋಭಾಲ್ ಅವರು ಅದ್ಭುತವಾಗಿ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಎರಡು ನಾಟಕಗಳಲ್ಲಿ ಹಿನ್ನೆಲೆ ಸಂಗೀತವನ್ನು ಕಿಶ್ಲೇ ಷಾ, ಕೈಲಾಸ್ ಪಾಂಡೆ, ದಾಕ್ಷಾಯಿಣಿ ಕೆ., ಜ್ಯೋತಿ ಅವರು ಹಿಂದಿಯಲ್ಲಿ ಸುಶ್ರಾವ್ಯವಾಗಿ ವಚನಗಳನ್ನು ಹಾಡಿದ್ದಾರೆ. ಕನ್ನಡದ ವಚನಗಳ ಭಾವಾನುವಾದವನ್ನು ತ್ರೀಶ್ ಡೋಭಾಲ್ ಮಾಡಿದ್ದಾರೆ. ರಾಜು ಅವರದು ಬೆಳಕು. ಅಂದಹಾಗೆ, ಈ ರಂಗಯಾತ್ರೆಯ ಅಭಿನಂದನಾರ್ಹರು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು. ಎಚ್.ಎಸ್. ದ್ಯಾಮೇಶ್ ಸಂಚಾರದ ವ್ಯವಸ್ಥಾಪಕರು. ಕಲಾ ತಂಡದಲ್ಲಿ ಇಪ್ಪತ್ತು ಮಂದಿಯಿದ್ದಾರೆ. ಉತ್ತರಾಖಂಡದ ಕಲಾವಿದರೂ ಇಲ್ಲಿದ್ದಾರೆ.
- ರುದ್ರೇಶ್ ಬಿ. ಅದರಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


