ಲೋಕಾಯುಕ್ತರಿಗೆ ದೂರು ಕೊಡಿ
ಸಹಕಾರ ಸಂಘವೊಂದರಲ್ಲಿ ಅಟೆಂಡರ್ ಆಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿದ್ದೇನೆ. ನನಗೆ...
ಲೋಕಾಯುಕ್ತರಿಗೆ ದೂರು ಕೊಡಿ
ಕೃಷ್ಣಶೆಟ್ಟಿ ಅಬ್ಬಿನಕುಪ್ಪೆ, ಬಿಡದಿ ತಾ.
ಸಹಕಾರ ಸಂಘವೊಂದರಲ್ಲಿ ಅಟೆಂಡರ್ ಆಗಿ ಇಪ್ಪತ್ತು ವರ್ಷ ಸೇವೆ ಸಲ್ಲಿಸಿದ್ದೇನೆ. ನನಗೆ ರಜೆ ಕೊಡಲಿಲ್ಲ. ಖಾಲಿ ಕಾಗದದ ಮೇಲೆ ಸಹಿ ಹಾಕಿಸಿಕೊಂಡು ರಾಜೀನಾಮೆ ಪತ್ರ ಬರೆದುಕೊಂಡರು. ಪಿ.ಎಫ್, ಗ್ರ್ಯಾಚುಯಿಟಿ ಇತ್ಯಾದಿಗಳನ್ನು ಸಹ ಕೊಟ್ಟಿರುವುದಿಲ್ಲ. ಏನು ಮಾಡಬೇಕು?
- ಈ ಹಿಂದೆ ಅನೇಕ ಬಾರಿ ಪತ್ರ ಬರೆದಿರುತ್ತೀರಿ. ಈಗಲೂ ಒಂದೇ ವಿಷಯದ ಮೇಲೆ ನಾಲ್ಕು ಪತ್ರ ಬರೆದಿದ್ದೀರಿ. ಹೀಗೆ ಪದೇ ಪದೆ ಒಂದೇ ವಿಷಯದ ಮೇಲೆ ಪತ್ರ ಬರೆಯುತ್ತಿದ್ದರೆ ಉಳಿದವರ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗುತ್ತದೆ. ಹಿಂದೆ ನಿಮ್ಮ ಇದೇ ಪ್ರಶ್ನೆಗೆ ಜವಾಬು ನೀಡಿಯಾಗಿದೆ. ಆತುರವಿದ್ದವರಿಗೆ ಪತ್ರ ವ್ಯವಹಾರದಿಂದ ಪರಿಹಾರ ಸಿಗಲಾರದು. ಅಂತಹವರು ಒಬ್ಬ ವಕೀಲರ ಬಳಿ ಸಲಹೆ ಕೇಳಬೇಕು.
ನಿಮ್ಮ ಸಮಸ್ಯೆಯನ್ನು ಲೋಕಾಯುಕ್ತರಿಗೆ ದೂರಿನ ಮೂಲಕ ತಿಳಿಸಿ. ಪರಿಹಾರ ಕಾಣಬಹುದು.
ಮಗನ ಪೆನ್ಷನ್ಗೆ ನೀವು ಅರ್ಹರಲ್ಲ
ಸುಜಾತಾ ಆಚಾರಿ, ನವಲಗುಂದ
ನನ್ನ ಗಂಡ ಸರ್ಕಾರಿ ನೌಕರಿಯಲ್ಲಿದ್ದರು. ನಿವೃತ್ತಿಯ ನಂತರ ಅವರು ಮರಣ ಹೊಂದಿರುತ್ತಾರೆ. ನನ್ನ ಮಗನೂ ಸರ್ಕಾರಿ ನೌಕರಿಯಲ್ಲಿದ್ದ. ಆದರೆ ಆತ ಸೇವೆಯಲ್ಲಿರುವಾಗಲೇ ಮರಣ ಹೊಂದಿರುತ್ತಾನೆ. ಆತ ಅವಿವಾಹಿತನಾಗಿದ್ದರಿಂದ ಅವನ ಎಲ್ಲ ನಿವೃತ್ತಿಯ ಸವಲತ್ತುಗಳನ್ನೂ ನಾನೇ ಪಡೆದಿದ್ದೇನೆ. ಸರ್ಕಾರಿ ಸೇವೆಯಲ್ಲಿರುವವರಿಗೆ ಕುಟುಂಬ ವೇತನ ದೊರೆಯುತ್ತದೆ. ಈಗ ನನ್ನ ಮಗ ಮರಣ ಹೊಂದಿರುವುದರಿಂದ ಆತನ ಕುಟುಂಬವೇತನವನ್ನು ನಾನು ಪಡೆಯಬಹುದೇ?
- ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿವೇತನ) 2002ರ ನಿಯಮ 8ರಂತೆ ಕುಟುಂಬವೆಂದರೆ ಗಂಡ ಹೆಂಡತಿ ಮಕ್ಕಳು ಮಾತ್ರ. ಆದ್ದರಿಂದ ನಿಮಗೆ ಮಗನ ಕುಟುಂಬ ವೇತನ ಪಡೆಯಲು ಸಾಧ್ಯವಿಲ್ಲ. ನಿಮಗೆ ಆ ಅರ್ಹತೆ ಇಲ್ಲ.
ಈಗಿನ ಹುದ್ದೆ ನಮೂದಿಸಿ
ಎಂ.ಎನ್. ಛಪ್ಪರಬಂದ್, ಮಸೀದಿ ಹತ್ತಿರ, ವಿಜಾಪುರ
ಸಹಕಾರ ಸಂಘವೊಂದರಲ್ಲಿ ಸಹಾಯಕ ಕಾರ್ಯದರ್ಶಿಯಾಗಿದ್ದು ಲೆಟರ್ಹೆಡ್ನಲ್ಲಿ ನನ್ನ ಮೊದಲಿನ ಹುದ್ದೆ ಮಾತ್ರ ಬರೆಯುವ ವಿಚಾರ. ಹಾಗೇನಾದರೂ ಬರೆದರೆ ತಪ್ಪೇ? ಅಥವಾ ಬರೆಯಬಹುದೇ?
- ನೀವು ಈಗಿರುವ ಸಂಘಕ್ಕೂ, ನಿಮ್ಮ ಹಳೆಯ ಹುದ್ದೆಗೂ ಸಂಬಂಧವೇ ಇಲ್ಲ. ಆದ್ದರಿಂದ ನೀವು ಈಗಿನ ಹುದ್ದೆಯನ್ನೇ ನಿಮ್ಮ ಪತ್ರ ವ್ಯವಹಾರದಲ್ಲಿ ನಮೂದಿಸಬೇಕು. ಹಳೆಯ ಹುದ್ದೆ ನಮೂದಿಸಿದರೆ ಸಮಸ್ಯೆಯಾಗುವುದು ಖಂಡಿತ.
ಕೆಎಟಿಗೂ ಅರ್ಜಿ ಕೊಡಿ
ಮಲ್ಲಿಕಾರ್ಜುನ, ಬೆಂಗಳೂರು-76
ನಿವೃತ್ತ ಪ್ರೌಢಶಾಲಾ ಶಿಕ್ಷಕ. ಪಿಂಚಣಿ ಕುರಿತು ಕರ್ನಾಟಕ ಆಡಳಿತ ಮಂಡಳಿಯಿಂದ ಆದೇಶ ಪಡೆದು ಶಿಕ್ಷಣ ಆಯುಕ್ತರು ಪಿಂಚಣಿ ದಾಖಲೆಗಳನ್ನು ಮಹಾಲೇಖಪಾಲರಿಗೆ ಕಳುಹಿಸಿ ಆರು ತಿಂಗಳಾದರೂ ಪಿಂಚಣಿ ಬಿಡುಗಡೆ ಮಾಡಿಲ್ಲ. ಇದಕ್ಕೆ ಪರಿಹಾರವೇನು?
-ಜಿಲ್ಲಾ ಗ್ರಾಹಕರ ಸಂಘದಲ್ಲಿ ಅರ್ಜಿ ಕೊಡಿ. ಪರಿಹಾರ ಸಿಗಬಹುದು ಅಥವಾ ಜತೆಗೆ ಕೆಎಟಿಯಲ್ಲೂ ನ್ಯಾಯಾಲಯ ನಿಂದನಾ ಅರ್ಜಿ ಕೊಡಿ. ನಿಮಗೆ ಸಹಾಯವಾಗಬಹುದು.
ದಾವಾ ಹಾಕಬಹುದು
ಮಹಂತಪ್ಪ, ಚಿಕ್ಕಕೊಂಡನ ಹಳ್ಳಿ
ನಿವೃತ್ತಿಯಿಂದ ಬಂದ ಹಣವನ್ನು ಪ್ರೋನೋಟ್ ಮೂಲಕ ಒಬ್ಬರಿಗೆ ನೀಡಿದ್ದೆ. ಆತ ಈಗ ತೀರಿಕೊಂಡಿದ್ದಾನೆ. ಆತನಿಗೆ ಆಸ್ತಿಯಿದ್ದು ಹೆಂಡತಿ ಮಕ್ಕಳಿದ್ದಾರೆ. ಈಗ ಅವರಿಂದ ಹಣ ಪಡೆಯುವ ಬಗೆ ಹೇಗೆ?
- ನ್ಯಾಯಾಲಯದಲ್ಲಿ ದಾವಾ ಹಾಕಬಹುದು. ಹಣ ವಾಪಸ್ ಸಿಗಲೂಬಹುದು.
- ಎಚ್.ಆರ್. ಕಸ್ತೂರಿರಂಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

