ಸಾಪ್ತಾಹಿಕಪ್ರಭ

ಸಂಭ್ರಮದ ಸಂಗೀತಧಾಮ

ಸಂಭ್ರಮದ ಸಂಗೀತಧಾಮ
Published On :

ಇತ್ತೀಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಗೀತಧಾಮ ಸಂಭ್ರಮ 2013 ಕಾರ್ಯಕ್ರಮ ನಡೆಯಿತು. ಸಂಗೀತ ಧಾಮ ಮ್ಯೂಸಿಕ್ ಅಕಾಡೆಮಿ ತನ್ನ ದಶಮಾನೋತ್ಸವದ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಗೀತಧಾಮದ ಶಿಕ್ಷಣಾರ್ಥಿಗಳನ್ನು ಒಳಗೊಂಡಂತೆ ರಾಜ್ಯದ ಇತರೆ ಜಿಲ್ಲೆಗಳ ಗಾಯಕರು ಭಾಗವಹಿಸಿದ್ದರು.
'ಭರವಸೆಯ ಕೊರಳುಗಳು' ಎಂಬ ಕಾರ್ಯಕ್ರಮದ ಹೆಸರಿನಲ್ಲಿ ಗಾಯನ ಹಾಗೂ ವಾದನ ನಡೆಯಿತು.
ಗೊ.ರು. ಚೆನ್ನಬಸಪ್ಪ ಕಾರ್ಯಕ್ರಮ ಉದ್ಘಾಟಿಸಿದರೆ ಕವಿ ಲಕ್ಷ್ಮಿನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜರಗನಹಳ್ಳಿ ಶಿವಶಂಕರ್ ಅತಿಥಿಗಳಾಗಿ ಚುಟುಕು ಕವಿತೆಗಳ ಸಾಲುಗಳನ್ನು ಹೇಳಿದರಲ್ಲದೆ ಮೃತ್ಯುಂಜಯ ದೊಡ್ಡವಾಡ ಅವರನ್ನು ಅಭಿನಂದಿಸಿದರು. ಡಾ.ಸಿದ್ದಲಿಂಗಯ್ಯ, ಶಿವಮೊಗ್ಗ ಸುಬ್ಬಣ್ಣ ಕಾರ್ಯಕ್ರಮದಲ್ಲಿದ್ದು ಮಕ್ಕಳಿಗೆ ಪ್ರೇರಣೆ ನೀಡಿದರು. ಸಭಾಕಾರ್ಯಕ್ರಮದ ನಂತರ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ನಿರ್ದೇಶನದಲ್ಲಿ ಗಾಯನ ಹಾಗೂ ವಾದನ ಕಾರ್ಯಕ್ರಮ ಜರುಗಿತು. 40 ಕ್ಕೂ ಹೆಚ್ಚು ಮಕ್ಕಳು ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿತ್ತು.

ಕರಾವಳಿ ಕಲರವ
ಬೆಂಗಳೂರಿನ ಕರ್ನಾಟಕ ಕರಾವಳಿ ಮಿತ್ರ ಮಂಡಳಿ ಅವರು ನವೆಂಬರ್ 24 ರಂದು ಕರಾವಳಿ ಕಲರವ 2013 ಕಾರ್ಯಕ್ರಮ ಹಮ್ಮಿಕೊಂಡಿದೆ. ಹೆಸರು ಘಟ್ಟ ರಸ್ತೆಯಲ್ಲಿ ಹಾವನೂರು ಬಡಾವಣೆಯ ಸೌಂದರ್ಯ ಶಾಲಾ ಮೈದಾನದಲ್ಲಿ ಈ ಕಲರವ ಮೊಳಗಲಿದೆ. ಇದರ ಪ್ರಯುಕ್ತ ಕ್ರೀಡೆ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಸಂಜೆ 6-30 ಕ್ಕೆ ಕುಲಾಯಿಯ ರಾಜ್ಯಪ್ರಶಸ್ತಿ ವಿಜೇತ ಕಲಾಕುಂಭ ಸಾಂಸ್ಕೃತಿಕ ವೇದಿಕೆಯವರಿಂದ 'ತುಳುನಾಡ ಸಂಸ್ಕೃತಿ'  ಎಂಬ ನೃತ್ಯ ನಾಟಕವನ್ನು ಪ್ರದರ್ಶಿಸಲಿದ್ದಾರೆ. ನಾಗೇಶ್ ಕುಲಾಲ್ ನಿರ್ದೇಶನವಿರುವ ಈ ನಾಟಕದ ನಿರೂಪಣೆಯನ್ನು ದಯಾನಂದ.ಜಿ.ಕತ್ತಲ್‌ಸರ್ ಮಾಡುತ್ತಿದ್ದಾರೆ. ತುಳುನಾಡ ಕನ್ನಡಿಗರಿಗಲ್ಲದೇ ತುಳುನಾಡ ಬಗ್ಗೆ ತಿಳಿದುಕೊಳ್ಳಲು ಉತ್ಸಹವಿರುವವರಿಗೂ ಕೂಡ ಇದೊಂದು ಉತ್ತಮ ಅವಕಾಶ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.