ಸಾಪ್ತಾಹಿಕಪ್ರಭ

ಚಳಿಗಾಲ ಬಂದರೆ

Published On :

'ಚಳಿಗಾಲ ಬಂದರೆ, ವಸಂತ ತುಂಬಾ ದೂರ ಇದ್ದೀತೆ?' ಎಂಬ ಮಾತು ಪಿ.ಬಿ.ಶೆಲ್ಲಿ ಎಂಬ ಕವಿಯದು. ಚಳಿಗಾಲದಲ್ಲಿ ಮಾಡುವುದಕ್ಕೇನೂ ಇಲ್ಲ, ವಸಂತಕ್ಕೆ ಕಾಯುವುದೊಂದೇ ಕೆಲಸ ಎಂಬುದು ಆತನ ಧ್ವನಿ ಇದ್ದೀತು. ಅಥವಾ, ವಸಂತ ಬಂದ ಮೇಲೆ ಖುಷಿಪಡುವುದು ಇದ್ದದ್ದೇ, ಕಾಯುವಿಕೆಯ ಖುಷಿಯನ್ನು ಚಳಿಗಾಲದಲ್ಲಿ ಏಕೆ ಪಡೆಯಬಾರದು ಎಂಬ ಅರ್ಥವನ್ನೂ ಮಾಡಿಕೊಳ್ಳಬಹುದು. ಚಳಿಗಾಲ ಕಾಯುವುದಕ್ಕಾಗಿಯೇ ಇರುವುದು ಎಂಬುದು ಒಟ್ಟಾರೆ ಧ್ವನಿ.
ಯಾವುದಕ್ಕೆ ಕಾಯುವುದು? ಅದನ್ನು ವಿವರಿಸುವುದೀಗ ಜಟಿಲ. ಬೇಸಿಗೆಗಾಗಿ? ಸುಗ್ಗಿಗಾಗಿ? ಹೊಸ ಫಸಲಿಗಾಗಿ? ಹೊಸ ಪುಸ್ತಕಗಳಿಗಾಗಿ? ಹೊಸ ಸಂಗಾತಿಗಳಿಗಾಗಿ? ಹಳೆಯ ಸಂಗಾತಿಗಳ ಪುನರಾಗಮನಕ್ಕಾಗಿ? ಕಳೆದುಹೋದ ಖುಷಿಗಳನ್ನು ಮತ್ತೆ ಪಡೆಯುವುದಕ್ಕಾಗಿ? ಚಳಿಗಾಲದಲ್ಲಿ ಕಾಯುತ್ತಿರುವವರು ಇರುವಂತೆ, ಚಳಿಗಾಲಕ್ಕಾಗಿ ಕಾಯುತ್ತಿರುವವರೂ ಇರಬಹುದಲ್ಲವೆ?
ಕನ್ನಡ ಸಾಹಿತ್ಯದಲ್ಲಿ ಚಳಿಗಾಲ ಬಂದದ್ದೇ ಕಡಿಮೆ. ಮಂಜು ಸುರಿದು ಮುಚ್ಚಿಹೋಗುವ ವಾತಾವರಣದಲ್ಲಿರುವ ಯುರೋಪಿಯನ್ನರು, ಅಮೆರಿಕನ್ನರ ಸಾಹಿತ್ಯದಲ್ಲಿ ಅದು ಸಾಕಷ್ಟಿದೆ. ಅಲ್ಲಿಯೂ ಚಳಿಗಾಲ ಸಾಂಕೇತಿಕವಾಗಿ, ಮನೋರೋಗ, ಸಾವು ಮುಂತಾದವುಗಳನ್ನು ಬಿಂಬಿಸುತ್ತ ಬಂದದ್ದೇ ಹೆಚ್ಚು. ಚಳಿಗಾಲದ ಬಗ್ಗೆ ಕೆಲ ಸಾಹಿತಿಗಳ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

  •     ಚಳಿಗಾಲದ ಗಾಢತೆಯ ನಟ್ಟ ನಡುವೆ ನಾನು ಕಂಡುಕೊಂಡೆ- ನನ್ನೊಳಗೆ ಅದಮ್ಯವಾದ ಬೇಸಿಗೆಯೊಂದಿತ್ತು ಎಂಬುದನ್ನು. (ಆಲ್ಬರ್ಟ್ ಕಾಮು)
  •     ನಾಟಿಯ ಕಾಲದಲ್ಲಿ ಕಲಿ, ಸುಗ್ಗಿಯ ವೇಳೆ ಬೋಧಿಸು, ಚಳಿಗಾಲದಲ್ಲಿ ಖುಷಿಪಡು. (ವಿಲಿಯಂ ಬ್ಲೇಕ್)
  •     ತಾವು ಖುಷಿಯಾಗಿದ್ದಾಗ ಜನರು ಅದು ಚಳಿಗಾಲವೋ ಮಳೆಗಾಲವೋ ಗಮನಿಸುವುದಿಲ್ಲ. (ಆಂಟನ್ ಚೆಕಾವ್)
  •     ಚಳಿಗಾಲ ಸುಖಪಡಲು, ಒಳ್ಳೆ ಆಹಾರ ಮತ್ತು ಬೆಚ್ಚನೆಯನ್ನು ಅನುಭವಿಸಲು, ಸ್ನೇಹದ ಮೃದು ಸ್ಪರ್ಶ ಪಡೆಯಲು ಮತ್ತು ಬೆಂಕಿಯ ಪಕ್ಕ ಕೂತು ಹರಟಲು ಹೇಳಿ ಮಾಡಿಸಿದ ಕಾಲ; ಅದು ಮನೆಯಲ್ಲಿರುವ ಕಾಲ.(ಎಡಿತ್ ಸಿಟ್ವೆಲ್)
ಸುಮ್ಮನೆ ಓದುವುದು
ಹಾಯಿಕು
- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.