ಶಿವನೇ ಕೊಟ್ಟುಬಿಡು ವಿಮುಕ್ತಿಯ...

ಇವರೆಲ್ಲ ಸಾವಿನ ಆಹ್ವಾನಕ್ಕೆ ಕಾದು ಕುಳಿತಿದ್ದಾರೆ. ಆ ಕಾಯುವಿಕೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಆಂಗ್ಲ ಛಾಯಾಗ್ರಾಹಕ 'ಹ್ಯುಗೋ ಗೈ'
ಅದು ನೂರಾರು ನೆರಿಗೆಗಳ ಸೂರು. ಆ ಬೊಚ್ಚು ಬಾಯಿಗಳನ್ನು ಮಾತನಾಡಿಸಿದರೆ ಅಲ್ಲಿ ಹಲವು ಕಥೆಗಳು ಬಿಚ್ಚಿಕೊಳ್ಳುತ್ತವೆ. ಊರೂರು ಬಿಟ್ಟು ಕಾಶಿಯ ಟ್ರೈನೇರಿದ ಕ್ಷಣ, ಜನ್ಮಜನ್ಮಕೂ ನೆರಳಾಗಿರುತ್ತೇನೆಂದ ಪತಿ ನರಳುತ್ತಾ ಸತ್ತಾಗ ಉಕ್ಕಿದ ಕಣ್ಣೀರು, ತಾಳಿಯಿಲ್ಲದ ಖಾಲಿ ಕುತ್ತಿಗೆಯನ್ನು ಹೆತ್ತಮಗ ಕೈಹಾಕಿ ಹೊರದಬ್ಬಿದ ದುಃಖದ ದಿನ... ಎಲ್ಲವೂ ಅಲ್ಲಿ ಮಾತಿಗೆ ವಸ್ತು.
ಅವರೆಲ್ಲ ಇಲ್ಲೇಕೆ ಬಂದಿದ್ದಾರೆಂದರೆ, ವಿಶ್ವನಾಥನೆದುರು ಹೃದಯ ಹಗುರ ಮಾಡಿಕೊಳ್ಳಲಷ್ಟೇ. ಬದುಕುಳಿಯುವ ನಾಲ್ಕು ನಿಮಿಷಗಳಲ್ಲಾದರೂ ಶಿವನ ಧ್ಯಾನ ಮಾಡಿ, ಶವಸಿಂಹಾಸನ ಏರುವ ಸಣ್ಣ ಆಸೆಯಷ್ಟೇ. ಕಾಶಿಯ 'ಡೆತ್ ಹಾಸ್ಟೆಲ್'ನಲ್ಲಿ ಇಂಥ ಸಾವಿರ ವೃದ್ಧೆ ವಿಧವೆಯರನ್ನು ಕಾಣಬಹುದು. ಅವರೆಲ್ಲ ಹಳೇ ದುಃಖಗಳನ್ನು ಮರೆಯಲೆತ್ನಿಸಲು ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿದ್ದಾರೆ. ಸಾವಿನ ಆಹ್ವಾನಕ್ಕೆ ಕಾದು ಕುಳಿತಿದ್ದಾರೆ. ಆ ಕಾಯುವಿಕೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದದ್ದು ಆಂಗ್ಲ ಛಾಯಾಗ್ರಾಹಕ 'ಹ್ಯುಗೋ ಗೈ'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


