ಸಾಪ್ತಾಹಿಕಪ್ರಭ

ಸ್ಪೀಡೋ ಸ್ಪೀಡು! (ಪ್ರಕೃತಿ)

ಸ್ಪೀಡೋ ಸ್ಪೀಡು! (ಪ್ರಕೃತಿ)
Published On :

ಈ ಜೀರುಂಡೆಗಳು ಕ್ಯಾರಬಿಡೆ ಜಾತಿಗೆ ಸೇರಿದ್ದು, 40 ಸಾವಿರ ಪ್ರಭೇದಗಳನ್ನು ಹೊಂದಿದೆ. ಮರದ ತೊಗಟೆ, ದಿಮ್ಮಿಗಳ ಕೆಳಗೆ, ನದಿ ಮತ್ತು ಕೆರೆ ದಡದಲ್ಲಿನ ಮರಳಿನಲ್ಲಿ ವಾಸಿಸುತ್ತವೆ. ಶುದ್ಧ ಮಾಂಸಾಹಾರಿಗಳು. ಅಕಶೇರುಕಗಳನ್ನು ಬೇಟೆಯಾಡುತ್ತವೆ. ಚಲನೆಯೂ ಬಹಳ ಚುರುಕು. ಗಂಟೆಗೆ 8 ಕಿ.ಮೀ. ವೇಗದಲ್ಲಿ ಓಡಿ, ಶಿಕಾರಿ ಮಾಡುತ್ತವೆ. ಭೂಮಿಯ ಮೇಲೆ ಅತ್ಯಂತ ವೇಗವಾಗಿ ಚಲಿಸುವ ಜೀವಿಗಳಲ್ಲಿ ಇವೂ ಒಂದು. ದೊಡ್ಡ ಕಣ್ಣುಗಳು ಇವುಗಳ ಪ್ರಮುಖ ಆಕರ್ಷಣೆ. ಕಣ್ಣಿನ ದೃಷ್ಟಿಯೇ ಇವಕ್ಕೆ ಶ್ರೀರಕ್ಷೆ. ಇವುಗಳು ಗಿಡಗಳಿಗೆ ಹಾನಿ ಮಾಡುವಂಥ ಕೀಟಗಳನ್ನು ತಿನ್ನುತ್ತವೆ. ಹೀಗಾಗಿ, ಇವು ಪರಿಸರ ಸಂರಕ್ಷಕ. ನಗರ ಪ್ರದೇಶಗಳಲ್ಲಿ ಇವು ತೀರಾ ಅಪರೂಪ.
ವಿಶೇಷ ಮಾಹಿತಿ: ಇವುಗಳಿಗೆ ವಿಷಪೂರಿತವಾದ ಸೈನೈಡ್ ಸಹಸ್ರಪದಿಗಳನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇದೆ.

= -ಆನಂದ್ ಎಸ್. ಜೋಶಿ    
  ananda.s.joshi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.