ಸಾಪ್ತಾಹಿಕಪ್ರಭ

ಕತ್ತೆ ಮತ್ತು ಕುದುರೆ (ಮಕ್ಕಳ ರಾಜ್ಯ)

ಒಂದೂರಲ್ಲಿ ಬೋರಣ್ಣನೆಂಬ ರೈತನಿದ್ದ. ಆತ ಒಂದು ಕುದುರೆ ಹಾಗೂ ಒಂದು ಕತ್ತೆಯನ್ನು ಸಾಕಿಕೊಂಡಿದ್ದ. ಅವೆರಡನ್ನೂ ತುಂಬಾ..

Published On :

 ಒಂದೂರಲ್ಲಿ ಬೋರಣ್ಣನೆಂಬ ರೈತನಿದ್ದ. ಆತ ಒಂದು ಕುದುರೆ ಹಾಗೂ ಒಂದು ಕತ್ತೆಯನ್ನು ಸಾಕಿಕೊಂಡಿದ್ದ. ಅವೆರಡನ್ನೂ ತುಂಬಾ ಚೆನ್ನಾಗಿಯೇ ಆರೈಕೆ ಮಾಡುತ್ತಿದ್ದ. ಒಮ್ಮೆ ಯಾವುದೋ ಕಾರ್ಯನಿಮಿತ್ತ ದೂರದ ಪಟ್ಟಣಕ್ಕೆ ಹೋದಾಗ... ಕತ್ತೆ, ಕುದುರೆ ಹತ್ತಿರ ಬಂದು- 'ಕುದುರೆಯಣ್ಣಾ... ಚೆನ್ನಾಗಿರುವೆಯಾ?' ಎಂದು ಮಾತಿಗಾರಂಭಿಸಿತು. ಕುದುರೆ ತಲೆ ಅಲ್ಲಾಡಿಸುತ್ತಾ- 'ಹುಂ... ನಾನು ಚೆನ್ನಾಗಿರುವೆ! ಮಾಲೀಕ ನಮ್ಮನ್ನು ಅಕ್ಕರೆಯಿಂದ ನೋಡಿಕೊಳ್ತಿರುವಾಗ ಯಾವ ಚಿಂತೆ ನಮ್ಗೆ...?' ಎಂದು ಪ್ರಶ್ನಿಸಿತು. ಆದರೆ ಕತ್ತೆ ಮಾತ್ರ ಸಪ್ಪೆಮೋರೆ ಮಾಡಿಕೊಂಡು 'ಎಂಥಾ ಜೀವನಾನೋ ನಮ್ದು? ನನ್ನನ್ನು ಬರೀ ಭಾರದ ವಸ್ತುಗಳನ್ನು ಸಾಗಿಸಲು ಬಳಸ್ತಾನೆ... ಆದ್ರೆ ನಿಂಗೆ ಹಾಗಿಲ್ಲವಲ್ಲಾ! ಬೇರೆ ಬೇರೆ ಊರುಗಳಿಗೆ ಹೋಗಲು ಮೀಸಲಾಗಿಟ್ಟಿದ್ದಾನೆ. ಇದು ಬಹಳ ಅನ್ಯಾಯವಲ್ಲವಾ? ನಂಗೂ ನಿನ್ನ ಹಾಗೇ ಊರೂರು ಸುತ್ತೊವಾಸೆ' ಎಂದು ಮನದಾಸೆಯನ್ನು ತಿಳಿಸಿತು. 'ಅದ್ಕೆ ನಾನೇನು ಮಾಡ್ಬೇಕೂ...' ಕುದುರೆ ಪ್ರಶ್ನಿಸಿತು. 'ಕತ್ತೆ ಮೆಲ್ಲನೆ ಕುದುರೆ ಕಿವಿ ಹತ್ತಿರ ಹೀಗೆ ಉಸುರಿತು- 'ಕುದುರೆಯಣ್ಣಾ, ಇನ್ನು ಮುಂದೆ ನಾವು ಅನಾರೋಗ್ಯಪೀಡಿತರಂತೆ ಮಲಗಿಕೊಂಡುಬೀಡೋಣ. ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ಮುಷ್ಕರ ಹೂಡೋಣ... ಆಗ ಯಜಮಾನನಿಗೆ ನಮ್ಮ ಮೇಲೆ ಅನುಕಂಪವುಂಟಾಗಿ ಹೆಚ್ಚಿನ ಕೆಲಸ ವಹಿಸದೇ ಹಾಯಾಗಿರಲು ಬಿಡ್ತಾನೆ...' ಎಂದು ಕುಟಿಲೋಪಾಯವನ್ನು ಸೂಚಿಸಿತು. ಕುದುರೆ ಸರಿ-ತಪ್ಪು ಯೋಚಿಸದೇ ಕತ್ತೆಯ ಮಾತಿಗೆ ಒಪ್ಪಿಕೊಂಡಿತು.
ಅಂದಿನಿಂದಲೇ ಅವೆರಡೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಮರೆತು, ಕೆಲಸ ಮಾಡದೇ ಸೋಮಾರಿಗಳಾಗಿ ರೋಗಪೀಡಿತರಂತೆ ಮಲಗಿಕೊಂಡವು. ಬೋರಣ್ಣನಿಗೆ ಅವುಗಳ ನಡತೆ ಕಂಡು ತುಂಬಾ ಕೋಪ ಬಂತು. ಬೆತ್ತದಿಂದ ಅವೆರಡನ್ನೂ ಚೆನ್ನಾಗಿ ಬಾರಿಸಿ ದೂರ ಅಟ್ಟಿಬಿಟ್ಟ. ಇವು ಬಿಟ್ಟ ಬಾಣ ಇವಕ್ಕೇ ತಿರುಗುಬಾಣವಾಯಿತು. ಏನೋ ಮಾಡಲು ಹೋಗಿ, ಇನ್ನೇನೋ ಆಯಿತು. ಪಾಪ! ಅವೆರಡೂ ಆತನ ಆಶ್ರಯ ಕಳೆದುಕೊಂಡು ಅನಾಥವಾದವು.
ನೀತಿ: ದೂರಾಲೋಚನೆಯಿಂದ ಕೇಡು ತಪ್ಪದು.

- ಶಿವುಕುಮಾರ ಪತ್ರಿಮಠ, ಸುರಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.