ಸಾಪ್ತಾಹಿಕಪ್ರಭ

ಎಲ್ಲೆಲ್ಲೂ ಯೆಲ್ಲೋ

ಎಲ್ಲೆಲ್ಲೂ ಯೆಲ್ಲೋ
Published On :

-ಹಳದಿರಾಣಿಯ ಹೊಳಪು
ಚಿನ್ನದ ಬೆಲೆ ಗಗನಕ್ಕೇರಿದೆ. ಆದರೆ, ಇಲ್ಲೊಬ್ಬಳು ಹೊನ್ನಿನ ರಾಣಿ ಬಂದುಬಿಟ್ಟಿದ್ದಾಳೆ. ಮಾರ್ಚ್ ಬಂತೆಂದು ನೆನಪಿಸುತ್ತಿದ್ದಾಳೆ. ಅವಳೇ ಹಳದಿರಾಣಿ.
'ತಬುಬುಯ', 'ಟೆಕೊಮಾ', 'ಎಲ್ಲೋ ತಬುಬುಯ', 'ಕ್ಯಾರಿಬೀನ್ ಟ್ರಂಪೆಟ್ ಟ್ರೀ' ಎಂಬ ಹೆಸರುಗಳೂ ಇವೆ ಆಕೆಗೆ. ಪರೀಕ್ಷೆಗಳು ಆರಂಭವಾಗುವ ಸಮಯದಲ್ಲಿ ಅರಳುವುದರಿಂದ 'ಎಕ್ಸಾಮ್ ಫ್ಲವರ್‌' ಅಂತನೂ ಅಡ್ಡಹೆಸರಿದೆ ಈಕೆಗೆ.
ಸಸ್ಯಶಾಸ್ತ್ರದ ಬಿಗ್‌ನೊನಿಯಾಸಿ ಕುಟುಂಬಕ್ಕೆ ಸೇರಿದ ಈ ಮರ ಸುಮಾರು 15-25 ಅಡಿ ಎತ್ತರ ಬೆಳೆಯುತ್ತದೆ. ಹೂ ಬಿಡುವ ಸಮಯ ಫೆಬ್ರವರಿಯಿಂದ ಮಾರ್ಚ್. ಈ ವೇಳೆ ಎಲೆಗಳೆಲ್ಲ ಉದುರಿ ಉದುರಿ ಮರದ ತುಂಬಾ ಹೂಗಳು ತುಂಬಿಬಿಡುತ್ತವೆ. ಇಡೀ ಮರವೇ ಹಳದಿಯಾಗಿ ತುಂಬಾ ಸುಂದರವಾಗಿ ಕಾಣುತ್ತದೆ. ಮಕರಂದ ಹೀರಲು ಬರುವ ದುಂಬಿಗಳು, ಮರದ ಕೆಳಗೆ ಹಳದಿ ಹೂ ಹಾಸಿಗೆ ಇವೂ ಈ ವೃಕ್ಷಕ್ಕೆ ಇನ್ನೆರಡು ಆಕರ್ಷಣೆಗಳು.  ಈ ಮರದ ಮೂಲ ದಕ್ಷಿಣ ಅಮೆರಿಕ. ಅಲ್ಲಿ 'ಟ್ರೀ ಆಫ್ ಗೋಲ್ಡ್ ಅಂತಲೇ ಪ್ರಸಿದ್ಧಿ. ಇದು ಮುಖ್ಯವಾಗಿ ಅಲಂಕಾರಿಕ ಮರ. ರಸ್ತೆ ಬದಿಗೆ ಇದು ಅದ್ಭುತ ಆಕರ್ಷಣೆ. ಬೆಂಗಳೂರಲ್ಲಿ ನಗರ ಅರಣ್ಯ ಯೋಜನೆಯಲ್ಲಿ ಈ ಮರಗಳನ್ನು ಬಹುಸಂಖ್ಯೆಯಲ್ಲಿ ಬೆಳೆಸಲಾಗಿದೆ. ಈ ಮರವನ್ನು ಬೋನ್ಸಾಯ್ ರೀತಿಯಲ್ಲೂ ಬೆಳೆಸಬಹುದೆಂಬ ಮಾಹಿತಿಯಿದೆ. ಇನ್ನೂ ಈ ಮರಗಳನ್ನು ಬೆಳೆಸೋಣ, ಉಳಿಸೋಣ, ಹೂಗಳನ್ನು ನೋಡಿ ಆನಂದಿಸೋಣ. ನಿತ್ಯದ ಜಂಜಾಟ ಮರೆತು ರಿಲ್ಯಾಕ್ಸ್ ಆಗೋಣ...

= ವೀಣಾ ಅನಂತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.