ಸಾಪ್ತಾಹಿಕಪ್ರಭ

ನಿಶ್ಶಬ್ದದ ಹಾಡು

Published On :

ಬಯಲ ಹಾದಿಯ ಹಿಡಿದು ಬದುವಿನಲಿ ಪಯಣ
ಎಡ ಬಲದುದ್ದಕೂ ಶಬ್ದಗಳ ಸಾಲು ಸಾಲು
ಒಂದೊಂದು ಶಬ್ದವೂ ನಿಶ್ಶಬ್ದದಲಿ ಸಾಗಿ
ಬಿಳಿಯ ಹಾಳೆಯ ತುಂಬಾ ಚೆಲ್ಲಾಪಿಲ್ಲಿ

ಕ್ಷಣ ಬೆದರಿದ ಕವಿ
ಸಾಲು ಸಾಲಿಗಿಡಲಾರ ಸಾಲು ಜೋಡಿಸಲಾರ
ತಾನೇ ಸೃಷ್ಟಿಸಿದ ಶಬ್ದಗಳ ಬಿಸುಡಲಾರ
ಸಿಕ್ಕೀತೇ ಒಂದೊಂದು ಶಬ್ದಕ್ಕು ಒಂದಿಷ್ಟು ಅರ್ಥ?

ಬರೆಯಬಹುದಿತ್ತು ಒಂದು ಪುಟ್ಟ ಕವಿತೆ
ಭಾವ ಭಕುತಿ ಸ್ವಲ್ಪವೂ ವಿಜೃಂಭಿಸದ ಹಾಗೆ
ಅಥವಾ
ಶಬ್ದಗಳ ಹಂಗೇ ಇರದ ಒಂದು ಚೆಂಗುಲಾಬಿಯ ಚಿತ್ರ.
ಬೇಡ.
ಅದರದೊಂದು ಪಕಳೆಯಾದರೂ...?
ತುಂಬಬಹುದಿತ್ತು ಒಂದಿಷ್ಟು ಬಣ್ಣ ರಾಡಿಯಾಗದಂತೆ
ಅಥವಾ
ಸುಮ್ಮನಿರಬಹುದಿತ್ತೆ?
-ಗೀತಾ ಡಿ.ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.