ನಾಭಿ ಕಮಲ

ಇದು ಬ್ರಹ್ಮ ಸೃಷ್ಟಿಸಿದ ಕಮಲವೋ ಬ್ರಹ್ಮನಿಗಾಗಿ ಸೃಷ್ಟಿಯಾದ ಕಮಲವೋ ಯಾರಿಗೂ ತಿಳಿಯದು. ಈ ಹೂವಿನೊಂದಿಗೆ ಪುರಾಣಗಳ ನಂಟು ಇದೆ. ಪವಿತ್ರ ಭಾವನೆಯಿದೆ. ಸೃಷ್ಟಿಕರ್ತ ಬ್ರಹ್ಮ ವಿಷ್ಣುವಿನ ನಾಭಿಯಿಂದ ಹೊರಬರುವಾಗ ಶ್ವೇತವರ್ಣದ ಕಮಲದ ಮೇಲೆ ಕುಳಿತಿದ್ದ. ಆ ಹೂವೇ ಈ ಬ್ರಹ್ಮ ಕಮಲ ಎಂಬ ಕತೆಯೂ ಇದೆ. ಏನೇ ಇರಲಿ ಈ ಹೂವಿನ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.
ಹಿಮಾಲಯ, ಉತ್ತರಾಖಂಡ, ಚೀನಾ ಮತ್ತು ಬರ್ಮಾಗಳಲ್ಲಿ ಹೆಚ್ಚಾಗಿ ಬೆಳೆಯುವ ಈ ಹೂ ಈಗ ಇತರ ಭಾಗಗಳಲ್ಲೂ ಕಂಡುಬರುತ್ತದೆ. ಇದನ್ನು ಕುಂಡಗಳಲ್ಲಿ ಹಾಕಿ ಬೆಳೆಸುತ್ತಾರೆ. 2ರಿಂದ 3 ಅಡಿ ಎತ್ತರ ಬೆಳೆಯುತ್ತದೆ. ಹೂ ಬಿಡುವುದು ವರ್ಷದಲ್ಲಿ ಒಂದೇ ಬಾರಿ. ಕ್ರಿಮಿ ಕೀಟಗಳಿಂದ ಪರಾಗಸ್ಪರ್ಶವಾಗುತ್ತದೆ. ಗಿಡ ಔಷಧಿಯ ಗುಣಗಳನ್ನೂ ಹೊಂದಿದ್ದು ನರ ಸಂಬಂಧಿ ಸಮಸ್ಯೆಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.
ಹಾಲು ಬಿಳುಪಿನ ಬಣ್ಣ, ಮತ್ತೇರಿಸುವ ಸುವಾಸನೆ ಈ ಹೂವಿನ ವೈಶಿಷ್ಟ್ಯ. ಪೂರ್ತಿ ಕತ್ತಲಾದ ಮೇಲೆ ಅರಳಲು ಪ್ರಾರಂಭವಾಗುತ್ತದೆ. ಈ ಹೂವು ಅರಳುವುದನ್ನು ನೋಡುವುದು ಕೂಡಾ ಒಂದು ವಿಶಿಷ್ಟ ಅನುಭವ. ಅರಳುವ ಈ ಪ್ರಕ್ರಿಯೆಯನ್ನು ಅಲ್ಲೇ ಕುಳಿತು ನೋಡಬಹುದು. ಅರಳಿದ ಹೂ 3-4 ಗಂಟೆಗಳಲ್ಲಿ ಮುಚ್ಚಿಬಿಡುತ್ತದೆ. ಬೆಳಗಾದ ಮೇಲೆ ನೋಡಬೇಕೆಂದರೆ ಸಾಧ್ಯವಿಲ್ಲ. ಇದರ ಸೌಂದರ್ಯ ಮತ್ತು ವೈಶಿಷ್ಟ್ಯಗಳಿಂದ ಈ ಹೂ ತುಂಬಾ ಅಪೂರ್ವವೆನಿಸಿದೆ. ಅರಳಿದ ಹೂವನ್ನು ನೋಡುವುದು ದೈವಿಕ ಅನುಭವ, ಅದು ದೇವರ ಆಶೀರ್ವಾದ ಎಂಬ ಭಾವನೆಗಳಿವೆ.
ಸಸ್ಯ ಶಾಸ್ತ್ರದ ಹೆಸರು ಡಛ್ಡಡಡಢ್ಠಜಛ ್ಟಛಿಢಛಟಟಛಡಿಛ. ಉತ್ತರಾಖಂಡ ರಾಜ್ಯ ಈ ಹೂವನ್ನು ರಾಜ್ಯದ ಹೂವಾಗಿ ಪರಿಗಣಿಸಿದೆ. ಆ ಬ್ರಹ್ಮ ಈ ರಾತ್ರಿ ರಾಣಿಗೆ ಯಾಕಿಷ್ಟು ಕ್ಷಣಿಕ ಸೌಂದರ್ಯ ಕೊಟ್ಟನೋ? ಇದರ ಹಿಂದೆ ಪ್ರಕೃತಿಯ ಯಾವ ರಹಸ್ಯವಿದೆಯೋ?
-ವೀಣಾ ಅನಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


