ಝೆನ್ ಟೀಮ್

ರಂಗಭೂಮಿ ಮೂಲಕ ತುಮಕೂರಿನಲ್ಲಿ ಪರ್ಯಾಯ ಚಳವಳಿ ರೂಪಿಸಿರುವ 'ಝೆನ್ ಟೀಮ್'ಗೆ ಈಗ 8ನೇ ವರ್ಷದ ಸಂಭ್ರಮ. 'ಕನ್ನಡಪ್ರಭ' ಪ್ರಧಾನ ವರದಿಗಾರ ಉಗಮ ಶ್ರೀನಿವಾಸ್ ನೇತೃತ್ವದಲ್ಲಿ 'ರಾಮಾಯಣ' ನಾಟಕದ ಮೂಲಕ ರಂಗಯಾತ್ರೆ ನಡೆಸಿದ ಝೆನ್ ಟೀಮ್, ಇದುವರೆಗೆ ಒಟ್ಟು 100 ನಾಟಕಗಳನ್ನು ಆಯೋಜಿಸಿದೆ.
ಪ್ರಯೋಗಾತ್ಮಕ ರಂಗಭೂಮಿಗೆ ಇಲ್ಲಿ ಆದ್ಯತೆ ಹೆಚ್ಚು. ತುಮಕೂರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳಿಂದಲೂ ಕೂಡ ಪ್ರೇಕ್ಷಕರು ಝೆನ್ ಟೀಮ್‌ನ ನಾಟಕಕ್ಕೆ ಬರುವುದು ವಿಶೇಷ. ಸಮುದಾಯ, ಮಳೆಗಾಲ, ದೇಸಿ ನಾಟಕೋತ್ಸವ ಹಾಗೂ ಚಳಿಗಾಲದ ನಾಟಕಗಳು ಈ ತಂಡದ ಖ್ಯಾತಿಯನ್ನು ಎತ್ತಿಹಿಡಿದಿವೆ. ಇನ್ನು ಮುಂದೆ ಝೆನ್ ಟೀಮ್ ಸ್ವತಂತ್ರವಾಗಿ ತುಮಕೂರಿನ ನಟರನ್ನೇ ಬಳಸಿಕೊಂಡು ಹೊಸ ಪ್ರಯೋಗಗಳಿಗೆ ಮುಂದಾಗಲಿದೆ. ಅದರ ಮೊದಲ ಭಾಗವಾಗಿ ಪಿ. ಲಂಕೇಶರ 'ಸಹಪಾಠಿ' ಕಥೆಯನ್ನು ರಂಗಕ್ಕೆ ಇಳಿಸಲಿದೆ.
ಅಲ್ಲದೆ, ನವೀನ ಮಾದರಿಯ ತೊಗಲುಗೊಂಬೆಯಾಟವನ್ನೂ ಪರಿಚಯಿಸಲು ಟೀಮ್ ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನ ಪ್ರದರ್ಶನ, ಹೊಸ ಅಲೆಯ ಚಿತ್ರಗಳನ್ನು ಇಂಟಿಮೇಟ್ ಆದ ಜಾಗದಲ್ಲಿ ಪ್ರದರ್ಶಿಸಲು ಕಾರ್ಯಕ್ರಮ ರೂಪಿಸಿದೆ. ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನೂ ಆಯೋಜಿಸಲಿದೆ. ಮಕ್ಕಳಿಂದಲೇ ನಾಟಕವಾಡಿಸುವ ಉದ್ದೇಶವೂ ಇದೆ.
'ಶೀಘ್ರದಲ್ಲೇ ಬಯಲುಸೀಮೆ ನಾಟಕೋತ್ಸವವನ್ನು ಆಯೋಜಿಸಿ, ಸೀತಾ ಪರಿಣಯ, ಗಾಂಧಿ ವರ್ಸಸ್ ಗಾಂಧಿ ಹಾಗೂ ಶೇಕ್ಸ್‌ಪಿಯರ್ ಮನೆಗೆ ಬಂದ- ನಾಟಕವನ್ನು ಪ್ರದರ್ಶಿಸಲಿದೆ' ಎನ್ನುತ್ತಾರೆ ಉಗಮ.
'ಏನನ್ನೂ ಮುಚ್ಚಿಡುವುದಿಲ್ಲ, ಏನನ್ನೂ ಬಿಚ್ಚಿಡುವುದಿಲ್ಲ' ಎಂಬ ಘೋಷವಾಕ್ಯದೊಂದಿಗೆ ಆರಂಭವಾದ ಝೆನ್ ಟೀಮ್, ರಂಗಭೂಮಿ ಮೂಲಕ ಮನುಷ್ಯ ಸಂಬಂಧಗಳನ್ನು ಹುಡುಕಲೆತ್ನಿಸುತ್ತಿದೆ.
'ನಾಟಕದಿಂದ ನಮ್ಮೊಳಗಿನ ವಿಕಾರಗಳು ಕಡಿಮೆಯಾಗಿ ಮಾನವೀಯತೆ ಕಡೆ ಪ್ರತಿಯೊಬ್ಬರು ಯೋಚಿಸುವಂತೆ ಮಾಡುವುದು ಮುಖ್ಯ ಉದ್ದೇಶ' ಎಂಬುದು ಉಗಮ ನುಡಿ.
- ಶಿವಣ್ಣ ವೆಂಕಟಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


