ಸಾಪ್ತಾಹಿಕಪ್ರಭ

ಕಲಾಸಂಪದ

ಕಲಾಸಂಪದ
Published On :

ಪ್ರಕೃತಿ, ವಿಕೋಪವನ್ನು ಪ್ರದರ್ಶಿಸಿ ಮಾನವನನ್ನು ನಾಶಗೊಳಿಸುತ್ತೇನೆಂದು ಹೆದರಿಸುತ್ತಾಳೆ. ಮನುಷ್ಯ, ಪ್ರಕೃತಿಯ ಚಿತ್ರಗಳನ್ನೇ ಬರೆದು ಪ್ರದರ್ಶಿಸಿ, ತಾನು ಅಂಥ ಅನಾಹುತಗಳಿಂದ ಜೀವನಪ್ರೀತಿ ಕಳೆದುಕೊಳ್ಳುವುದಿಲ್ಲವೆಂದು ಸಾರುತ್ತಾನೆ. ಇಂಥದೊಂದು ಕಲಾಪ್ರದರ್ಶನ ನಡೆದಿರುವುದು ಧಾರವಾಡದಲ್ಲಿ.
ಉತ್ತರಾಖಂಡದಲ್ಲಿ ಜಲಪ್ರಳಯದಿಂದ ಘನಘೋರ ದುರಂತವಾಗಿದೆ. ಇಂಥ ಘಟನೆಗೆ ಧಾರವಾಡದ  ಕಲಾಮಂಡಳ ಸಂಸ್ಥೆ ಸ್ಪಂದಿಸಿದ ರೀತಿ ವಿಶಿಷ್ಟ. ಇದೇ ಜುಲೈ 3ರಿಂದ 7ರವರೆಗೆ ನಗರದ ಮಯೂರ ಆದಿತ್ಯ ರೆಸಾರ್ಟ್‌ನಲ್ಲಿ ವಿವಿಧ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಿ ಅವುಗಳು ಮಾರಾಟವಾಗಿ ಬಂದ ಹಣವನ್ನು ಉತ್ತರಾಖಂಡದ ಸಂತ್ರಸ್ತರ ಪರಿಹಾರ ನಿಧಿಗಾಗಿ ಅರ್ಪಿಸಿತು. 'ಆರ್ಟ್ ಫಾರ್ ಹ್ಯುಮಾನಿಟಿ' ಶೀರ್ಷಿಕೆಯಲ್ಲಿ ಪ್ರದರ್ಶನ ನಡೆಯಿತು. ಜೆ.ಎಂ.ಎಸ್. ಮಣಿ, ಪ್ರೊ.ವಿ.ಜಿ. ಅಂದಾನಿ, ಪಿ.ಎಸ್.ಕಡೆಮನಿ, ಮಧು ದೇಸಾಯಿ, ಬಿರಾದಾರ ಬಿಂದುರಾವ್, ಬಸುರಾಜ ಮೊಸಳಗಿ, ರಾಮದಾಸ್ ಅಡ್ಯಂತಾಯ, ರಾಜಶ್ರೀ, ಗಾಯಿತ್ರಿ ದೇಸಾಯಿ, ಎಂ.ಆರ್. ಬಾಳಿಕಾಯಿ, ಎನ್.ಕೆ. ಹಾಲಕೇರಿ, ಆರ್ಯ ಆಚಾರ್ಯ ಮುಂತಾದವರ ಕೃತಿಗಳು ಪ್ರದರ್ಶಿತಗೊಂಡವು. ಈ ಹಿಂದೆ ಭೂಕಂಪ, ಕಾರ್ಗಿಲ್ ಯುದ್ಧಗಳಾದಾಗಲೂ ಸಂಸ್ಥೆ ಹೀಗೇ ಸಂತ್ರಸ್ತರಿಗೆ ನೆರವಾಗಿತ್ತು.

- ವಿಜಯಾನಂದ ಬಿ. ಕಾಲವಾಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.