ಅಟ್ಟಕ್ಕಲರಿ ಉತ್ಸವ

ಸಮಕಾಲೀನ ನೃತ್ಯಕಲೆಯನ್ನು ಇಷ್ಟಪಡುವ ಎಲ್ಲರಿಗೂ 'ಅಟ್ಟಕ್ಕಲರಿ' ಗೊತ್ತಿರುತ್ತದೆ. ನೃತ್ಯಕ್ಕೆ ಮೀಸಲಾಗಿರುವ 'ಅಟ್ಟಕ್ಕಲರಿ ಸೆಂಟರ್ ಫಾರ್ ಮೂವ್‌ಮೆಂಟ್ ಆರ್ಟ್ಸ್' ಎರಡು ವರ್ಷಕ್ಕೊಮ್ಮೆ ನಡೆಸುವ ಉತ್ಸವಕ್ಕಾಗಿ ಕಲಾರಸಿಕರು ಕುತೂಹಲದಿಂದ ಕಾಯುತ್ತಿರುತ್ತಾರೆ. ಈ ಬಾರಿಯ ದ್ವೈವಾರ್ಷಿಕ ಅಟ್ಟಕ್ಕಲರಿ ಉತ್ಸವ ಬೆಂಗಳೂರಿನಲ್ಲಿ ರ.25ರಿಂದ ಆರಂಭಗೊಂಡಿದ್ದು ಫೆ.3ರವರೆಗೆ ನಡೆಯುತ್ತಿದೆ. ಈ ಸಲದ ಉತ್ಸವದ ವಿಷಯ 'ನೃತ್ಯದ ಚೌಕಟ್ಟು'. 10 ದಿನಗಳ ಈ ಅಂತಾರಾಷ್ಟ್ರೀಯ ಉತ್ಸವದಲ್ಲಿ ಜಾಗತಿಕ ಮಟ್ಟದ ನೃತ್ಯ ಸಂಯೋಜಕರು, ಚಿಂತಕರು ಮತ್ತು ಕಲಾವಿದರು ಭಾಗಿಯಾಗಲಿದ್ದಾರೆ. ರಂಗಶಂಕರ, ಚೌಡಯ್ಯ ಹಾಲ್, ಜಯಮಹಲ್ ಪ್ಯಾಲೇಸ್, ಎಡಿಎ ರಂಗಮಂದಿರ ಮುಂತಾದೆಡೆ ನಡೆಯುವ ಈ ಉತ್ಸವಗಳ ಈ ಬಾರಿಯ ಪ್ರಮುಖ ಆಕರ್ಷಣೆಗಳು: ರಾಜಸ್ತಾನದ ಮಂಗನಿಯಾರ್ ನೃತ್ಯ, ಅರ್ಬನ್ ಬ್ಯಾಲೆ, ಟೈಮ್ ಫ್ರೇಮ್ಸ್ ಇತ್ಯಾದಿಗಳು. ಕಾರ್ಯಕ್ರಮ ಪಟ್ಟಿ, ಪಾಸ್ ಮತ್ತಿತರ ವಿವರಗಳಿಗೆ
www.attakkalari.org, attakkalari.biennial@gmail.com, 080-42039291/22123684
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


