ನೀವು ಕಾನೂನು
'ಜೇಷ್ಠತೆ' ವಂಚನೆ
ಸ್ವಾಮಿಶೆಟ್ಟಿ, ದ.ಕ. ಹಾಲು ಒಕ್ಕೂಟ, ಮಣಿಪಾಲ
ಮಾರುಕಟ್ಟೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದು, ನ್ಯಾಯಾಲಯದ ಆದೇಶವಿದ್ದರೂ ಜೇಷ್ಠತೆಯಲ್ಲಿ ವಂಚನೆ ಹಾಗೂ ಮುಂಬಡ್ತಿ ನೀಡದೆ ವಂಚನೆ ಬಗ್ಗೆ.
-ಈಗಾಗಲೇ ಕೆಎಟಿಯಲ್ಲಿ ತೀರ್ಮಾನವಾಗಿರುವಂತೆ ನಿಮಗೆ ಬಡ್ತಿ ಹಾಗೂ ಜೇಷ್ಠತೆ ನೀಡದೆ ಕೆಎಟಿಯ ಆದೇಶ ಉಲ್ಲಂಘನೆ ಮಾಡಿರುವುದಕ್ಕೆ ನೀವು ಕೆಎಟಿಗೆ ಕೋರ್ಟ್ ನಿಂದನೆ ಪ್ರಕರಣವನ್ನು ದಾಖಲಿಸಬಹುದು. ಅಗತ್ಯಬಿದ್ದರೆ ಹೈಕೋರ್ಟ್‌ನಲ್ಲೂ ರಿಟ್ ಅರ್ಜಿ ಸಲ್ಲಿಸಬಹುದು.
ಹುದ್ದೆ ಖಾಲಿ
ಊರು ಹೆಸರಿಲ್ಲ
ಮಾನವ ಹಕ್ಕು ಆಯೋಗದ ಅಧ್ಯಕ್ಷರ ಹುದ್ದೆ ನಾಲ್ಕು ತಿಂಗಳು ಖಾಲಿ ಇದ್ದೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಈ ನೇಮಕಕ್ಕೆ ಯಾರ ಮೊರೆ ಹೋಗಬೇಕು?
-ಸಮಾಜದ ಎಲ್ಲ ತೊಂದರೆ ಸರಿಪಡಿಸಲು ಮಾನವ ಹಕ್ಕು ಆಯೋಗಕ್ಕೆ ಯಾವ ಅಧಿಕಾರವೂ ಇಲ್ಲ. ಇದು ನಿಮ್ಮ ಭ್ರಮೆ. ಅಷ್ಟು ಕಾಳಜಿಯಿದ್ದರೆ ನೀವು ಹೈಕೋರ್ಟ್‌ನ ಮೆಟ್ಟಿಲೇರಬಹುದು.
ಸೈಟು ಸಮಸ್ಯೆ
ಹೆಸರು, ಊರಿಲ್ಲ
ಖಾಸಗಿಯವರಿಂದ ಹೆಂಡತಿ ಹೆಸರಿನಲ್ಲಿ 30್ಢ40 ಸೈಟು ಖರೀದಿಸಿ ನೋಂದಾವಣೆ ಮಾಡಿಸಲಾಗಿದೆ. ಆತ ಒಪ್ಪಿಕೊಂಡಂತೆ ಇಲ್ಲಿಯವರೆಗೂ ಲೇಔಟ್‌ಗೆ ರಸ್ತೆ, ಚರಂಡಿ, ವಗೈರೆ ಮಾಡಿಸಿಲ್ಲ. ಪರಿಹಾರವೇನು?
-ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ನೀಡಬಹುದು. ಜೊತೆಗೆ ಸಿವಿಲ್ ನ್ಯಾಯಾಲಯದಲ್ಲೂ ದಾವೆ ಹೂಡಬಹುದು.
ಒಪ್ಪಿಗೆ ಬೇಕಾ?
ಹೆಸರು ಬೇಡ, ಕಡೂರು
ತಂದೆಯಿಂದ ನಾನು ಮೈನರ್ ಆಗಿದ್ದಾಗಲೇ ಸೈಟೊಂದನ್ನು ನನ್ನ ಹೆಸರಿಗೆ ಮಾಡಿಸಿ ಅಲ್ಲಿ ಮನೆಕಟ್ಟಿ ಬಾಡಿಗೆ ಬರುತ್ತಿದೆ. ಅದನ್ನು ಮಾರಿ ಮಕ್ಕಳ ಮದುವೆ ಮಾಡಬೇಕಾಗಿದೆ. ಒಬ್ಬ ತಮ್ಮ ಒಪ್ಪುತ್ತಿಲ್ಲ. ಇದನ್ನು ಮಾರಲು ತಮ್ಮ, ತಂಗಿಯವರ ಒಪ್ಪಿಗೆ ಅಗತ್ಯವಿದೆಯೇ?
-ನಿಮ್ಮ ತಂದೆಯವರು ಸ್ವಂತ ಗಳಿಕೆಯಿಂದ ಸೈಟಿಗೆ ಹಣ ಕೊಟ್ಟಿದ್ದರೆ ಅದನ್ನು ಯಾರೂ ಪ್ರಶ್ನಿಸಲಾರರು. ಅದನ್ನು ಮಾರಲು ನಿಮ್ಮ ತಮ್ಮಂದಿರ ಅಥವಾ ತಂಗಿಯರ ಒಪ್ಪಿಗೆ ಬೇಕಿಲ್ಲ. ಆದರೆ ನಿಮ್ಮ ತಂದೆ ಪಿತ್ರಾರ್ಜಿತ ಹಣದಿಂದ ಅದನ್ನು ಖರೀದಿಸಿದ್ದರೆ ಆಗ ಎಲ್ಲ ಗಂಡು ಹಾಗೂ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

