ಮುಂದಿನ ಜನ್ಮದಲ್ಲಿ ಯಡ್ಡಿ ಮಗನಾಗಿ ಹುಟ್ತೀನಿ ಅಂತ ರೇಣುಕಾಚಾರ್ಯ ರಚ್ಚೆ ಹಿಡಿದಿದ್ದಾರಂತೆ?
ಬಿ.ಜಿ. ರವಿಕುಮಾರ್, ಬೆಂಗಳೂರು
ವೀರಪ್ಪನ್, ದಂಡುಪಾಳ್ಯ, ಉಮೇಶ್ ರೆಡ್ಡಿ ಇಂಥ ಚಿತ್ರಗಳನ್ನೇ ಏಕೆ ತೆಗೆಯುತ್ತಾರೆ?
-ಬಾಕ್ಸ್ ಆಫೀಸ್ 'ಕೊಳ್ಳೆ ಹೊಡೆಯಲಿ' ಅಂತ!
ಫ್ಯಾಷನ್ ಡಿಸೈನರ್ ಮಧು, ಹಾಸನ
ಮುಂದಿನ ಜನ್ಮದಲ್ಲಿ ಯಡ್ಡಿ ಮಗನಾಗಿ ಹುಟ್ತೀನಿ ಅಂತ ರೇಣುಕಾಚಾರ್ಯ ರಚ್ಚೆ ಹಿಡಿದಿದ್ದಾರಂತೆ?
-ಈಶ್ವರಪ್ಪ ಶಿವಮೊಗ್ಗದ ಮೀನಾಕ್ಷಿ ಭವನದಲ್ಲಿ ದೋಸೆ ತಿನ್ನಿಸಿದ ಮೇಲೆ ಸುಮ್ಮನಾಗಿದ್ದಾರಂತೆ!
ಉಜ್ಜನಿ ಜಲೇಂದ್ರ, ಪಾಂಡವಪುರ
ಸಿನಿಮಾ ಥಿಯೇಟರ್‌ಗೂ ಆಪರೇಷನ್ ಥಿಯೇಟರ್‌ಗೂ ವ್ಯತ್ಯಾಸವೇನು?
-ಸಿನಿಮಾ ಥಿಯೇಟರ್‌ನಲ್ಲಿ ನಿಮ್ಮ ಪರ್ಸ್ ಬಿಚ್ಚಿದ್ರೆ ಸಾಕು, ಆಪರೇಷನ್ ಥಿಯೇಟರ್‌ನಲ್ಲಿ ನಿಮ್ಮ ಬಾಡಿನೇ ಬಿಚ್ಚಬೇಕು!
ಓಂ. ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ರಾಜ್ಯದಲ್ಲಿ ಮಿಲಿಟರಿ ಆಡಳಿತ ಬಂದರೆ ಹೇಗಿರುತ್ತೆ?
-ನೀವು ಗಲಾಟೆ ಮಾಡಿದ್ರೆ ಜಲಪಿರಂಗಿ ಬದಲು ನಿಜವಾದ ಪಿರಂಗಿನೇ ಬರುತ್ತೆ!
ವಿ. ಹೇಮಂತ್ ಕುಮಾರ್, ಬೆಂಗಳೂರು
ದೇವರ ಮುಂದೆ ನಿಂತು ಕೆಲವರು ಕೆನ್ನೆಗೆ ಹೊಡೆದುಕೊಳ್ಳುತ್ತಾರೆ ಏಕೆ?
-ಮುಂದೆ ಬೆನ್ನ ಮೇಲೆ ಹೊಡೆಸಿಕೊಳ್ಳುವುದು ತಪ್ಪಲಿ ಅಂತ!
ಎಚ್. ಆನಂದಕುಮಾರ್, ಚಿತ್ರದುರ್ಗ
ಜಯಲಲಿತಾರಿಗೆ ನಿಮ್ಮ ಘ್ನಾನಪೀಠ ಕಮಿಟಿಯವರು ಬಿರುದುಕೊಟ್ಟರೆ ಹೇಗಿರಬಹುದು?
-ಜಲತರಂಗಿಣಿ! ಕರುಣಾನಿಧಿ!
ಸ್ವಾಮಿ ನಿರ್ಮಲಾ, ಉಡಿಗಾಲ
ಕೆಲವರು ಆತ್ಮೀಯವಾಗಿ ಹೆಗಲ ಮೇಲೆ ಕೈ ಹಾಕುತ್ತಾರೆ, ಅದರರ್ಥ?
-ಮುಂದೆ ತಲೆ ಮೇಲೆ ಕೈ ಇಡುವ ಸೂಚನೆ!
ಕೋಲ್ಯ ಅಪರಿಚಿತ ಹುಡುಗಿಗೆ ಕಾಲ್ ಮಾಡಿದ.
ಕೋಲ್ಯ: ಹಾಯ್, ನಿನ್ನ ಹೆಸರೇನು?
ಹುಡುಗಿ: ಹೇಳಲ್ಲ.
ಕೋಲ್ಯ: ಹೋಗ್ಲಿ ಬಿಡು, ನಾನೀಗ ಫೆರಾರಿ ಕಾರ್‌ನಲ್ಲಿ ಕೂತಿದ್ದೀನಿ.
ಹುಡುಗಿ: ಅರ್ಚನಾ, ಬಿ.ಕಾಂ. ಸೆಕೆಂಡ್ ಇಯರ್, ಬನಶಂಕರಿ ದೇವಸ್ಥಾನದಿಂದ ಕೆಳಗೆ ಬಂದು, ಅಲ್ಲಿನ ಕೆನರಾ ಬ್ಯಾಂಕಿನ ಪಕ್ಕವೇ ನಮ್ಮನೆ ಇರೋದು. ಮನೆ ನಂ.32/ಬಿ, ಮನೇಲಿ ಯಾವಾಗ್ಲೂ ಅಪ್ಪ-ಅಮ್ಮ ಇರ್ತಾರೆ. ಟ್ಯೂಶನ್ ಟೈಮ್ ಸಂಜೆ 6-8.
ಹೆಣ್ಣು ನೋಡೋಕೆ ಹೋಗಿದ್ಯಲ್ಲಾ, ಏನಾಯ್ತು?
ಪ್ರೆಶರ್ ಕುಕ್ಕರ್‌ಗೂ, ರೈಸ್ ಕುಕ್ಕರ್‌ಗೂ ಏನು ವ್ಯತ್ಯಾಸಾಂತ ಕೇಳಿದ್ರು, ನಂಗೊತ್ತಿಲ್ಲ ಅಂದೆ. ರಿಜೆಕ್ಟ್ ಮಾಡಿಬಿಟ್ರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

