ಸಾಪ್ತಾಹಿಕಪ್ರಭ

ಕುರುಡು ಹಾವು

ಕುರುಡು ಹಾವು
Published On :

ಇದರ ವೈಜ್ಞಾನಿಕ ಹೆಸರು ರಾಮ್ಫೊತಿಫ್ಲೊಪ್ಸ್‌ಬ್ರಾಮಿನುಸ್. ಇದರ ಮತ್ತೊಂದು ಹೆಸರು ಬ್ರಾಹ್ಮಿಣಿ ಬ್ಲೈಂಡ್ ಸ್ನೇಕ್. ಇದು ಕುರುಡು ಸರ್ಪದ ಪ್ರಭೇದಕ್ಕೆ ಸೇರಿದೆ. ಇವುಗಳು ಸಾಮಾನ್ಯವಾಗಿ ಆಫ್ರಿಕ ಮತ್ತು ಏಷಿಯಾ ಖಂಡಗಳಲ್ಲಿ ಕಂಡುಬರುತ್ತವೆ.
ಇವುಗಳ ಹೆಸರು ಲ್ಯಾಟಿನ್ ಪದವಾಗಿದ್ದು, ಈ ಹೆಸರನ್ನು ಹಿಂದೂ ಜಾತಿಯ ಪಂಗಡಗಳಲ್ಲಿ ಒಂದಾದ 'ಬ್ರಾಹ್ಮಣ' ಎಂಬ ಪದದಿಂದ ಉದ್ಭವವಾಗಿದೆ ಎನ್ನಬಹುದು. ಇದರ ಉಪಪ್ರಭೇದಗಳನ್ನು ಇನ್ನೂ ಗುರುತಿಸಿಲ್ಲ. ಇವುಗಳು ಪ್ರಬುದ್ಧಾವಸ್ಥೆಯಲ್ಲೂ ಚಿಕ್ಕದಾಗಿಯೂ ಹಾಗೂ ಸಣ್ಣದಾಗಿಯೂ ಇರುತ್ತವೆ. ಇವುಗಳ ಉದ್ದ ಸರಾಸರಿ 6.35- 16.5 ಸೆಂ.ಮೀ. ನಷ್ಟು ಇರುತ್ತದೆ. ಇವುಗಳ ಪುಟ್ಟದಾದ ಕಣ್ಣುಗಳು ತಿಳಿಯಾದ ಪೊರೆಗಳಿಂದ ತುಂಬಿಕೊಂಡಿದ್ದು, ಇದರಿಂದ ಈ ಸರ್ಪಗಳಿಗೆ ಕಣ್ಣೇ ಕಾಣಸುವುದಿಲ್ಲ.
ಇವು ಸಾಮಾನ್ಯವಾಗಿ, ನಗರ ಪ್ರದೇಶಗಳಲ್ಲಿ ಮತ್ತು ಬೇಸಾಯ ಭೂಮಿಗಳ ಹತ್ತಿರದಲ್ಲಿ ಕಾಣಿಸುತ್ತವೆ. ಈ ಸರ್ಪಗಳು ಗೊದ್ದಗಳ ಹಾಗೂ ಗೆದ್ದಲು ಹುಳಗಳ ಗೂಡುಗಳಲ್ಲಿ ವಾಸಿಸುತ್ತವೆ. ಇವು ಮರದ ಕೊರಡುಗಳು, ಒದ್ದೆಯಾದ ಎಲೆಗಳು ಮತ್ತು ಹ್ಯೂಮಸ್ ಗೊಬ್ಬರ)ದ ಕೆಳಭಾಗದಲ್ಲಿ ವಾಸಿಸುತ್ತವೆ. ಇವು ಶುಷ್ಕ ಮತ್ತು ಮಳೆಗಾಡುಗಳಲ್ಲಿ ಹಾಗೂ ನಗರ ಪ್ರದೇಶಗಳ ತೋಟಗಳಲ್ಲೂ ಕಂಡುಬರುತ್ತವೆ.
ಇವು ವಿಷ ರಹಿತ ಹಾವುಗಳು. ಇರುವೆ ಮರಿಗಳನ್ನು ಮತ್ತು ಗೆದ್ದಲು ಹುಳಗಳನ್ನು ತಿಂದು ಜೀವಿಸುತ್ತವೆ.

- ಆನಂದ್ ಎಸ್. ಜೋಶಿ    
   ananda.s.joshi@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.