ಸೌಂದರ್ಯ Sea ಮೆ

ಆಕಾಶದ ನೀಲಿ ಬಣ್ಣ ಕೆಳಕ್ಕೆ ಸುರಿದು, ಅಲ್ಲಿ ಸಮುದ್ರವೂ ನೀಲಿಯಾಗಿದೆ. ಕೇರಳದ ಕೋವಲಂ ಪಟ್ಟಣದ ಆ ಕಿನಾರೆ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು ಹಲವು ಕಾರಣಗಳಿಂದ.
ರಾಜಧಾನಿ ತಿರುವನಂತಪುರಂನ ದಕ್ಷಿಣಕ್ಕೆ ಹದಿನಾರು ಕಿ.ಮೀ. ಕ್ರಮಿಸಿದರೆ ಈ ರಮ್ಯ ತಾಣವನ್ನು ತಲುಪಬಹುದು. ಅರಬ್ಬೀ ಸಮುದ್ರದ ಮಲಬಾರ್ ಕರಾವಳಿಯುದ್ದಕ್ಕೂ ಹರಡಿಕೊಂಡಿದೆ ಈ ತೀರ. ಕೋವಲಂ ಎಂಬ ಪುಟ್ಟ ಪಟ್ಟಣದ ಹತ್ತಿರದಿಂದ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ರೆಸಾರ್ಟುಗಳು, ಬಿಸಿಲ ಸ್ನಾನ, ಈಜು, ಬೋಟಿಂಗ್, ಯೋಗ ಹಾಗೂ ಆಯುರ್ವೇದ ಚಿಕಿತ್ಸೆಗಳಿಗೆ ಈ ಪ್ರದೇಶ ಹೆಸರುವಾಸಿ. ಪ್ರವಾಸಿಗರು ಇಲ್ಲಿ ತಮ್ಮ ಬೇಸರ, ಆಯಾಸಗಳನ್ನು ಕಳೆದು ಹೊಸ ಉಲ್ಲಾಸ, ಚೈತನ್ಯಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.
ಕೋವಲಂ ಕಡಲ ತೀರವನ್ನು ಈವ್ಸ್ ಹಾಗೂ ಲೈಟ್‌ಹೌಸ್ ಎಂದು ಎರಡು ಭಾಗಗಳಾಗಿ ಗುರುತಿಸಲಾಗಿದೆ. ಸಂಜೆಯ ಪ್ರಕೃತಿ ಸಹಜ ಚೆಲುವಿಗೆ ಜನಪ್ರಿಯಗೊಂಡಿರುವ ಈವ್ಸ್ ತೀರ ಅರ್ಧ ವರ್ತುಲಾಕಾರದಲ್ಲಿದೆ. ಈ ತೀರದುದ್ದಕ್ಕೂ ತಲೆಯೆತ್ತಿ ನಿಂತಿರುವ ತೆಂಗು ಹಾಗೂ ತಾಳೆ ಮರಗಳ ಸಾಲು ಇಲ್ಲಿನ ಚೆಲುವನ್ನು ಇಮ್ಮಡಿಗೊಳಿಸಿವೆ.
ಲೈಟ್ ಹೌಸ್ (ದೀಪ ಗೃಹ) ತೀರವು ಹಡಗುಗಳಿಗೆ, ಮೀನುಗಾರರಿಗೆ ಚಂಡಮಾರುತ, ಬಿರುಗಾಳಿಯ ಕುರಿತು ಮುನ್ಸೂಚನೆ ನೀಡುವ ಕೇಂದ್ರ ಹೊಂದಿದೆ. ಬ್ರಿಟಿಷರ ಕಾಲದಿಂದಲೂ ಈ ದೀಪದ ಮನೆ ಕಾರ್ಯನಿರ್ವಹಿಸುತ್ತಿದೆ ಎಂಬುದು ವಿಶೇಷ ಸಂಗತಿಯಾಗಿದೆ.
ಪ್ರವಾಸಿಗರ ವಿನೋದಾವಳಿಗಳನ್ನು ನೋಡುತ್ತಾ ಈ ತೀರದುದ್ದಕ್ಕೂ ಒಂದು ಸುದೀರ್ಘ ನಡಿಗೆ ಮಾಡುವುದು ನಮ್ಮೆಲ್ಲ ನೋವುಗಳನ್ನು ಮರೆಸುತ್ತದೆ. ಇಲ್ಲಿಯ ಸುಂದರ ಸೂರ್ಯಾಸ್ತವನ್ನು ನೋಡಿಯೇ ಆನಂದಿಸಬೇಕು.
-ಮಂಜುನಾಥ ಡಿ. ಡೊಳ್ಳಿನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


