ಅಟ್ಟಿನಳಗೆ ಅರಳಿದ ಹವ್ಯಕ ನುಡಿ
ಹವ್ಯಕ ಬ್ರಾಹ್ಮಣ ಸಮುದಾಯ ಸಾಮಾನ್ಯವಾಗಿ ನೆಲೆಸಿರುವುದು ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರಗಳಲ್ಲಿ. ಪ್ರಾದೇಶಿಕವಾಗಿ ಹವ್ಯಕ ಭಾಷೆಯಲ್ಲಿ ಬಹಳಷ್ಟು ಭಿನ್ನತೆಗಳಿವೆ. 'ಅಟ್ಟಿನಳಗೆ- ಇದು ಅಡುಗೆ ಪುಸ್ತಕ ಅಲ್ಲ...' ಕೃತಿಯಲ್ಲಿ ಬರೆಯಲಾಗಿರುವ ಲೇಖನದಲ್ಲಿ ಢಿಢಿಢಿ.್ಟಠಠಛಟಿಟಿಛ.್ಛ್ಟಟ ಎಂಬ ಹವ್ಯಕ ಬ್ಲಾಗ್ನಲ್ಲಿ ಬರೆದ ಲೇಖನಗಳು, ಲಘು ಪ್ರಬಂಧ, ಆರೋಗ್ಯ ವಿಚಾರ, ಪ್ರವಾಸ, ಹಳೆಯ ದಶಕಗಳಲ್ಲಿದ್ದ ಜೀವನ ಕ್ರಮ ಮತ್ತು ಹೊಸ ದಿನಮಾನಗಳಲ್ಲಿನ ಮೌಲ್ಯಗಳ ಸಂಘರ್ಷಗಳ ಬಗೆಯನ್ನು ಆತ್ಮೀಯವಾಗಿ ವಿವರಿಸಲಾಗಿದೆ. ಈ ಮೂಲಕ ಸಾಮುದಾಯಿಕ ಭಾಷೆಗಳಲ್ಲೂ ಸಾಹಿತ್ಯಾಸಕ್ತಿ ಬೆಳೆಸುವ ಯತ್ನ ಇದಾಗಿದೆ.
'ಅಟ್ಟಿನಳಗೆ' ಪುಸ್ತಕದಲ್ಲಿ ಒಟ್ಟು 19 ಶೀರ್ಷಿಕೆಗಳಲ್ಲಿ ಜೀವನದ ವಿವಿಧ ಅಂಶಗಳ ಬಗ್ಗೆ ಲೇಖಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೊಡ್ಡಮಾಣಿ ರಾಮಭಟ್ಟರು ಬರೆದ 'ತಾಳಮದ್ದಳೆ, ಮತ್ತೆ ಬೇರೆ ಶುದ್ಧಿಗೊ' ಎಂಬ ಲೇಖನದಲ್ಲಿ ಊರಿನವರೆಲ್ಲ ಸೇರಿಕೊಂಡು ಯಾವ ರೀತಿ ಯಕ್ಷಗಾನ ತಾಳಮದ್ದಳೆ ಮಾಡಲು ಉತ್ಸಾಹದಿಂದ ಮುಂದೆ ಬರುತ್ತಾರೆ, ವಿಶೇಷವಾಗಿ ನವರಾತ್ರಿಯಂಥ ಹಬ್ಬಹರಿದಿನಗಳ ಸಂದರ್ಭಗಳಲ್ಲಿ ಮನರಂಜನೆಯ ಜತೆಗೆ ಪೌರಾಣಿಕ ಕಥೆಗಳಿಂದ ಆಯ್ದ ಭಾಗಗಳನ್ನು ವೇದಿಕೆಗೆ ತರುತ್ತಾರೆ. ಅದಕ್ಕಾಗಿ ಹಗಲಿನ ವೇಳೆ ಅಭ್ಯಾಸ, ಆ ಸಮಯದಲ್ಲಿನ ವಿನೋದಗಳ ಬಗ್ಗೆ ನವಿರಾಗಿ ವಿವರಿಸಿದ್ದಾರೆ. ಡಾ. ಶಾಮರಾಜ್ ಕಿದೂರು ಅವರ ಬರವಣಿಗೆ ಬಗೆಗಿನ ಲೇಖನದಲ್ಲಿ ಮಗುವೊಂದು ಪೆನ್/ಪೆನ್ಸಿಲ್ ಸಿಕ್ಕಿದರೆ ಮನೆಯ ಗೋಡೆ, ನೆಲದಲ್ಲಿ ಗೀಚುವ ಬಗೆಯನ್ನು ಆಕರ್ಷಕವಾಗಿ ವಿವರಿಸಿದ್ದಾರೆ. ಶಾಲೆಗಳಲ್ಲಿ ಕಲಿಯುವ ವೇಳೆ ಮಕ್ಕಳಿಗೆ ಬಾಲ್ ಪೆನ್ನಲ್ಲಿ ಬರಯಲೇ ಬಾರದು. ಬದಲಾಗಿ ಶಾಯಿ ಪೆನ್ನಲ್ಲಿ ಬರೆಯತಕ್ಕದ್ದು ಎಂಬ ದಿನಗಳ ಬಗೆಯನ್ನು ಮನಸ್ಸಿಗೆ ಮುದವಾಗುವಂತೆ ವಿವರಿಸಿದ್ದಾರೆ.
ಯಾವುದೇ ಕುಟುಂಬವಿರಲಿ, ಉಳಿತಾಯ ಎಂಬ ವಿಚಾರ ಅಗತ್ಯವಾಗಿ ಪಾಲನೆ ಮಾಡಿಕೊಂಡು ಬರಬೇಕಾದ ವಿಚಾರ. ಅದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ತೆಕ್ಕುಂಜ ಹವ್ಯಕ ಭಾಷೆಯಲ್ಲಿ ಬರೆದ ಕುಟುಂಬದ ಕತೆ ನಿಜಕ್ಕೂ ಈಗಿನ ಯುವ ದಂಪತಿಗೆ ಬದುಕಿನ ಕನ್ನಡಿ.
ಮುಂಬೈ, ಚೆನ್ನೈನಂಥ ದೂರದ ಊರುಗಳಲ್ಲಿನ ಬದುಕು ಎಷ್ಟು ಕಷ್ಟ, ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತು ಯಾವ ರೀತಿ ಜೀವನ ಸಾಗಿಸಬೇಕೆಂಬ ಬಗ್ಗೆ ರಘುರಾಮ ಮುಳಿಯ 'ದಾದರ್ ಸೇ ದೊಂಬಿವಿಲೀ ತಕ್' ಎಂಬ ಶಿರೋನಾಮೆಯಲ್ಲಿರುವ ಬರಹದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.
ಈ ಪುಸ್ತಕದಲ್ಲಿ ಮತ್ತೊಂದು ಇಷ್ಟವಾಗುವ ಅಂಶವೆಂದರೆ, ಲೇಖಕರನ್ನು ಅಡ್ಡ ಹೆಸರಿನಿಂದ ಗುರುತಿಸಿರುವುದು. ಏಕೆಂದರೆ, ಹವ್ಯಕರಲ್ಲಿ ಇದೇ ಪದ್ಧತಿ ಚಾಲ್ತಿಯಲ್ಲಿದೆ. ಉದಾಹರಣೆಯಾಗಿ ದೊಡ್ಡಮಾಣಿ ರಾಮಭಟ್ಟ ಎಂಬ ಹೆಸರನ್ನು ಇಲ್ಲಿ 'ದೊಡ್ಡ ಬಾವ' ಎಂದೇ ಉಲ್ಲೇಖಿಸಲಾಗಿದೆ. ಈ ರೀತಿ ಪ್ರೀತಿಯಿಂದ ಕರೆಯುವಿಕೆ ಇತರೆ ಸಮುದಾಯದಲ್ಲೂ ಇದೆ. ಅದೇ ರೀತಿಯ ಅಡ್ಡಹೆಸರನ್ನೇ ಲೇಖನದ ಆರಂಭದಲ್ಲಿ ಕೊಡಲಾಗಿದೆ.
ಪುಸ್ತಕದ ಶೀರ್ಷಿಕೆ ಬಗ್ಗೆ
'ಅಟ್ಟಿನಳಗೆ' ಎಂದರೆ ಹವಕ್ಯ ಬ್ರಾಹ್ಮಣರ ಮನೆಗಳಲ್ಲಿ, ಕಡುಬು, ಅಕ್ಕಿ ಉಂಡೆ ಮೊದಲಾದ ಖಾದ್ಯ ತಯಾರಿಸುವ ಪಾತ್ರೆ. 'ಅಟ್ಟಿನ' ಅಂದರೆ ಅಡುಗೆಯ, 'ಅಳಗೆ' ಅಂದರೆ ಪಾತ್ರೆಯ ಎಂಬರ್ಥ. ಮೇಲ್ನೋಟಕ್ಕೆ ಇದು ಒಂದು ಸಮುದಾಯಕ್ಕೆ ಸೇರಿದ ಪುಸ್ತಕ ಎನಿಸಿದರೂ ಎಲ್ಲರೂ ಓದಿ ತಿಳಿದುಕೊಳ್ಳಬಹುದಾದ, ವೈವಿಧ್ಯಮಯ ಬರಹಗಳನ್ನು ಒಳಗೊಂಡ ಪುಸ್ತಕ. ಮಾತ್ರವಲ್ಲದೆ, ಹವ್ಯಕರ ಆಡು ನುಡಿಯನ್ನು ಸಾಹಿತ್ಯಾತ್ಮಕವಾಗಿ ಪ್ರಸ್ತುತಪಡಿಸುವ ಪ್ರಯತ್ನ ಇಲ್ಲಿದೆ.
ಕೃತಿ ಹೆಸರು: ಅಟ್ಟಿನಳಗೆ- ಇದು ಅಡುಗೆ ಪುಸ್ತಕ ಅಲ್ಲ...
ಪ್ರ: ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.)
ಅನುಗ್ರಹ, ಶಿವಗಿರಿನಗರ, ಕುಳಾಯಿ- ಹೊಸಬೆಟ್ಟು,
ಮಂಗಳೂರು-575 019
ಬೆಲೆ: ರು. 80
ಯಾಕೆ ಓದಬೇಕು?: ಸಮುದಾಯವೊಂದರ
ಭಾಷಾ ಪ್ರಯೋಗದ ಸೊಗಡು ಅರಿಯಲು....
-ಸದಾಶಿವ ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

