ಸಾಪ್ತಾಹಿಕಪ್ರಭ

ನೀನೆಂದರೆ...

Published On :

ಹಳದಿ ಹೂವಿನ ನಿರಿಗೆ ಚಿಮ್ಮಿಸುವ
ಫ್ರಾಕಿನ ಪುಟ್ಟ ಕಾಲುಗಳನ್ನು
ಹರಿವ ಹೊಳೆಯಲ್ಲಿಳಿಸಿ ಹೊಳೆಸಿದ
ನೀರಪಾದವ ಮುತ್ತಿಟ್ಟು
ಕಚಗುಳಿಯಾಡಿಸಿ
ಬೆರಳ ಸಂದುಗಳ ನಡುವೆ ಬುಳಬುಳ
ಹರಿದಾಡಿದ್ದು ಅದೇನು ಮೀನಾ?
ನೀನಾ?

ಕ್ಲಾಸಲ್ಲಿ ಕೂತು ಬಗಲಿನ ಪಾಟೀಚೀಲ
ಬಿಡಿಸಿ ಪುಸ್ತಕ ತೆರೆದು
ಬರೆದ ಹಾಳೆಯೊಳಗೆ ಇರಿಸಿ
ಮುಚ್ಚಿಟ್ಟುಕೊಂಡು ದಿನದಿನವೂ
ಇಣುಕಿ ಕಣ್ಣಗಲಿಸಿ ಕುಡಿಯೊಡೆದ
ಕಾತರಕ್ಕೆ ಪಕ್ಕಾದದ್ದು ಅದೇನು
ನವಿಲುಗರಿಯಾ?
ನಿನ್ನ ಹೃದಯಾ?

ಅಜ್ಜಿ ಹೇಳಿದ ಕತೆಯೊಳಗೆ
ದಾಟಿ ಗೊಂಡಾರಣ್ಯ, ಸಮುದ್ರವೇಳು
ಆಚೆ ದ್ವೀಪದ ಘಟ್ಟ ಹತ್ತಿಳಿದು
ಸುತ್ತೇಳು, ಕಳೆದು ಕತ್ತಲೆ
ಸಹಸ್ರ ದಳದ ಕಮಲದ ನಡುವೆ
ಮಿರಿಮಿರಿ ಮಿಂಚಿದ್ದು
ಅದೇನು ಜ್ಯೋತಿರ್ಲಿಂಗದ ಬೆಳಕಾ?
ನನ್ನ ಸಖಾ?

ಬದುಕ ಬಳ್ಳಿ ಸುಳಿಸುಳಿದು ಸುತ್ತಿ
ನೇರ-ವಕ್ರಗತಿಯಲ್ಲೂ ರಾಗರತಿರಂಗಿನಾಟ
ಸರಸ-ವಿರಸದಲ್ಲೂ ಸಾಹಚರ್ಯ
ಮೈ-ಮನಸ್ಸುಗಳ ಸುಳಿಯಲ್ಲೂ
ಮಾಯ ವಿಸ್ಮಯದ ಮಾಟ

ನಕ್ಕಾಗ ನಕ್ಕು ಬಿಕ್ಕಾಗ ಬಿಕ್ಕಿ
ನನ್ನೊಳಗೇ ಒಳಗೆ ಒಳಗೆ
ಇರದೆಯೂ ಇರುವ ಆತ್ಮಸಂಗಾತವದೇನು?
ಏನು? ಏನದು? ನೀನಾ!
ಏನೆಂದೆ ಹೇಳು ದೊರೆ ಮತ್ತೆ
ನೀನೆಂದರೆ ಅದು ನಾನಾ?
ಆಹಾ!


- ಕೆ.ಎನ್. ಲಾವಣ್ಯಪ್ರಭಾ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.