ಸಾಪ್ತಾಹಿಕಪ್ರಭ

ರಾವೂರಿಗೆ ಪೀಠ

ತೆಲುಗಿನ ಪ್ರಸಿದ್ಧ ಕವಿ, ಕಾದಂಬರಿಕಾರ ರಾವೂರಿ ಭಾರದ್ವಾಜ ಅವರಿಗೆ ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. 'ಬೆಳಕಿನ ಹನಿಗಳು' ಕೃತಿ...

ರಾವೂರಿಗೆ ಪೀಠ
Published On :

ತೆಲುಗಿನ ಪ್ರಸಿದ್ಧ ಕವಿ, ಕಾದಂಬರಿಕಾರ ರಾವೂರಿ ಭಾರದ್ವಾಜ ಅವರಿಗೆ ಕಳೆದ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. 'ಬೆಳಕಿನ ಹನಿಗಳು' ಕೃತಿಯಿಂದ ಆಯ್ದ ಅವರ ಮೂರು ಹನಿಗಳು ಇಲ್ಲಿವೆ:
-1-
ನೀರಿನ ದಾರಗಳನೆಸೆದು
ಭೂಮಿಯ ತಮ್ಮೆಡೆಗೆ
ಸೆಳೆಯಲು ಕರಿಮೋಡಗಳು
ಅದೇ ದಾರಗಳಲ್ಲೆ
ಮೋಡವ ಸೆಳೆಯಲು ಭೂಮಿ
ಮಳೆಗಾಲದುದ್ದಕೂ ಹವಣಿಸಿವೆ.
-2-
ಎಷ್ಟು ಬಿಳಿದಾಗಿ, ಚೊಕ್ಕವಾಗಿದ್ದೆ!
ಆ ಬಾನಿನ ಹೆಣ್ಣು
ನೀಲಿಯ ಕೊಳೆಯೆಸೆದು
ಮಾಡಿದಳೆನ್ನನು ಈ ಥರ
ಎಂಬುದು ಕೊಳದ ಗೋಳು.

ಚೆಕಾವ್‌ನ ಪಾಯಿಂಟ್
'ಕತೆಯ ಮೊದಲ ಭಾಗದಲ್ಲಿ ಗೋಡೆಯ ಮೇಲೆ ಒಂದು ಗನ್ ಕಾಣಿಸಿಕೊಂಡರೆ, ಕತೆಯ ಕೊನೆಗೆ ಅದು ಗುಂಡು ಉಗುಳಬೇಕು.'
'ನನಗೆ ಅನ್ನಿಸುವಂತೆ, ಪ್ರಕೃತಿಯ ವರ್ಣನೆಗಳು ಆದಷ್ಟೂ ಚಿಕ್ಕದಾಗಿ, ಸಂದರ್ಭಕ್ಕೆ ಒದಗುವಂತೆ ಬರಬೇಕು. ಅಸ್ತಮಿಸುತ್ತಿರುವ ಸೂರ್ಯ, ಕಪ್ಪಿಡುತ್ತಿರುವ ಸಮುದ್ರದ ಅಲೆಗಳ ನಡುವೆ ಮುಳುಗುತ್ತಿದ್ದ, ಹೊಂಬಣ್ಣದ ಕಿರಣಗಳು ಚೆಲ್ಲಾಡಿದ್ದವು... ಮುಂತಾದ ತೀರಾ ಸಾಮಾನ್ಯ, ಬಳಸಿ ಸವಕಲಾದ ವರ್ಣನೆಗಳನ್ನು ತಪ್ಪಿಸಿ. ನಿಸರ್ಗದ ಬಣ್ಣನೆಯ ಹೊತ್ತಿನಲ್ಲೂ ತುಂಬಾ ಸೂಕ್ಷ್ಮ ವಿವರಗಳನ್ನು ಬಳಸಬಹುದು. ಅದು ಹೇಗಿರಬೇಕೆಂದರೆ, ಓದಿ ಬದಿಗಿಟ್ಟು ಕಣ್ಮುಚ್ಚಿ ಕಲ್ಪಿಸಿಕೊಂಡರೆ ಅದು ಒಟ್ಟು ಸಂದರ್ಭ ನೆನಪಾಗಬಲ್ಲಂತಿರಬೇಕು. ಉದಾಹರಣೆಗೆ, ಬೆಳದಿಂಗಳ ರಾತ್ರಿಯ ಕಲ್ಪನೆಯನ್ನು ಈ ಬಗೆಯ ವಿವರಗಳಿಂದ ಕಟ್ಟಿಕೊಡಬಹುದು- ನೀರಿನ ಮೇಲೆ ತೇಲುತ್ತಿದ್ದ ಬಾಟಲಿಯ ಚೂರು ನಕ್ಷತ್ರದಂತೆ ಮಿನುಗಿತು, ದೂರದಲ್ಲಿ ತೋಳದ ಕಪ್ಪು ನೆರಳು ಚೆಂಡಿನಂತೆ ಉರುಳಿಹೋಯ್ತು... ಇತ್ಯಾದಿ. ಮನಶ್ಶಾಸ್ತ್ರದ ದೃಷ್ಟಿಯಿಂದಲೂ ವಿವರಗಳು ಬೇಕು. ದೇವರು ನಿಮ್ಮನ್ನು ಕ್ಲೀಷೆಗಳಿಂದ ಕಾಪಾಡಲಿ.'
'ಕತೆಯ ಪಾತ್ರಗಳ ಮಾನಸಿಕ, ಆಧ್ಯಾತ್ಮಿಕ ವಿವರಗಳನ್ನೇನೂ ನೀವು ನೀಡಬೇಕಾಗಿಲ್ಲ. ಅದು ಅವರ ವರ್ತನೆಗಳಿಂದಲೇ ಹೊರ ಹೊಮ್ಮುವಂತಿರಬೇಕು. ಒಮ್ಮೆಗೇ ಹಲವಾರು ಪಾತ್ರಗಳನ್ನು ತರುವುದೂ ಬೇಡ. ಎಲ್ಲ ಗುರುತ್ವಬಲವೂ ಈ ಎರಡರ ನಡುವೆಯೇ ಇರುತ್ತದೆ- ಅವನು ಮತ್ತು ಅವಳು.'
- ಇವು ರಷ್ಯದ ಖ್ಯಾತ ಕತೆಗಾರ ಆಂಟನ್ ಚೆಕಾಫ್ ತನ್ನ ಮಿತ್ರನೊಬ್ಬನಿಗೆ ಬರೆದ ಕಾಗದದಿಂದ ಆಯ್ದ ಸಾಲುಗಳು.



ಏಟು ಝಡ್
ಪುಸ್ತಕಗಳು ಮನುಷ್ಯನ ದಾರಿದೀಪ ಅಂತಲೋ, ಮನುಷ್ಯನ ಬೆಸ್ಟ್ ಫ್ರೆಂಡ್ ಅಂತಲೋ ಹೇಳುವುದನ್ನು ಕೇಳಿರುತ್ತೀರಿ. ಪುಸ್ತಕಗಳ ಬಗ್ಗೆ ಗೌರವ ಇರುವುದು ಒಳ್ಳೆಯದೇ. ಆದರೆ ಗೌರವಾರ್ಹರಾದ ಒಂದಷ್ಟು ಹಿರಿಯರು ಪುಸ್ತಕಗಳ ಬಗ್ಗೆ ಹೇಳಿರುವ ಈ ಮಾತುಗಳನ್ನೂ ಒಮ್ಮೆ ಓದಿ.
-    ಕ್ಲಾಸಿಕ್ ಅಂದ್ರೆ, ಎಲ್ಲರೂ ಹೊಗಳುವಂಥದು, ಆದ್ರೆ ಯಾರೂ ಓದಿರದಂಥದು. (ಮಾರ್ಕ್ ಟ್ವೇನ್)
-    ಪುಸ್ತಕಗಳು ಜಗತ್ತನ್ನು ಬೆಳಗುತ್ತವೆ, ಅವನ್ನು ಸುಟ್ಟಾಗ! (ರಾಲ್ಫ್ ವಾಲ್ಡೋ ಎಮರ್ಸನ್)
-    ಕಂಪ್ಯೂಟರ್ ಮತ್ತು ಪುಸ್ತಕಗಳಲ್ಲಿ ನನಗಿಷ್ಟವಾಗುವುದು ಪುಸ್ತಕಾನೇ. ಯಾಕಂದ್ರೆ ಅವನ್ನು ನಾನು ಹಾಸಿಗೆಗೂ ಒಯ್ಯಬಹುದು. (ಡೇನಿಯಲ್ ಜೆ.ಬೋರ್‌ಸ್ಟಿನ್)
-    ಪುಸ್ತಕ ಕೊಳ್ಳುವುದು ಒಳ್ಳೆಯದು, ಅದನ್ನು ಓದಲು ಸಮಯವನ್ನೂ ಕೊಳ್ಳಬಹುದಾದರೆ. (ಆರ್ಥರ್ ಶೋಪೆನ್‌ಹಾವರ್)
-    ಹೆಚ್ಚಿನ ಪುಸ್ತಕಗಳು ಓದುಗರನ್ನು ಯೋಚನೆಗೆ ಹಚ್ಚುವುದಿಲ್ಲ. ಯಾಕೆಂದರೆ ಅದನ್ನು ಬರೆದವರೂ ಯೋಚಿಸಿರುವುದಿಲ್ಲ. (ಕ್ಲಾರೆಂಡನ್)


- ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.