ಬೈಟುಕಾಫಿ

ಪೂರ್ಣ ಫಲ

ಅಂದು ತ್ರೇತಾಯುಗದಲ್ಲಿ ರಾಮನಿಗೆ ಸೀತೆ ಸಜೀವವಾಗಿರುವ ಮಾಹಿತಿ ನೀಡಿದ ಹನುಮ, ದ್ವಾಪರ ಯುಗದಲ್ಲಿ ಭೂಮನ ಗರ್ವಭಂಗ ಮಾಡಿ ಅವನ..

ಪೂರ್ಣ  ಫಲ
Published On :

ಅಂದು ತ್ರೇತಾಯುಗದಲ್ಲಿ ರಾಮನಿಗೆ ಸೀತೆ ಸಜೀವವಾಗಿರುವ ಮಾಹಿತಿ ನೀಡಿದ ಹನುಮ, ದ್ವಾಪರ ಯುಗದಲ್ಲಿ ಭೂಮನ ಗರ್ವಭಂಗ ಮಾಡಿ ಅವನ ನಿಜಕಾರ್ಯದ ಅರಿವು ಮೂಡಿಸಿದ ಆಂಜನೇಯ, ಈಗ, ಈ ಕಲಿಯುಗದಲ್ಲಿ ಸಹ ಭಕ್ತಾದಿಗಳ ಇಷ್ಟಾರ್ಥ ಸಿದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾನೆ. ಬೆಂಗಳೂರಿನ ಗಿರಿನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಕಾರ್ಯಸಿದ್ಧಿ ಆಂಜನೇಯನಿಗೆ ಇಂಥ ಮಹಿಮೆಯಿದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ.
ಈ ಕ್ಷೇತ್ರವನ್ನು ಸ್ಥಾಪಿಸಿದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮಾಸೂರು ಅವಧೂತ ದತ್ತಪೀಠ ಸ್ಥಾಪಿಸಿದ ನಂತರ, ದೇಶ- ವಿದೇಶಗಳಲ್ಲಿ 60ಕ್ಕೂ ಹೆಚ್ಚು ಆಶ್ರಮಗಳನ್ನು ಸ್ಥಾಪಿಸಿದ್ದಾರೆ. ಸ್ವಾಮೀಜಿಯವರಿಗೆ ಆಂಜನೇಯನಲ್ಲಿ ಅಪಾರ ಒಲವು. ಅವರು ಆರಂಭಿಸಿದ 'ಪೂರ್ಣ ಫಲ ಸಮರ್ಪಣೆ' ಎಂಬ ವ್ರತ ವಿಶಿಷ್ಟವಾಗಿದೆ.
ಗಿರಿನಗರದ ದೇವಾಲಯದೊಳಹೊಕ್ಕರೆ, ಆಂಜನೇಯನ ಬೃಹತ್ ವಿಗ್ರಹ ಒಂದು ಕ್ಷಣ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸದಿರದು. ಶುಭ್ರ ಸ್ವಚ್ಛ ಒಳಾಂಗಣ, ದೊಡ್ಡ ಟ್ರಾಲಿಗಳಲ್ಲಿ ರಾಶಿ ತೆಂಗಿನಕಾಯಿ, ಸಾಲು ಸಾಲು ಸ್ಟೀಲ್ ರಾಡ್‌ಗಳು, 41 ಪ್ರದಕ್ಷಣೆ ಹಾಕುತ್ತಿರುವ ಭಕ್ತ ವೃಂದ... ಇದೇನು ಎಂಬ ಪ್ರಶ್ನೆ ಮೂಡಿಸದಿರದು.

ಪೂರ್ಣಫಲ ಸಮರ್ಪಣೆ
16 ದಿನದ ಈ ವ್ರತಾರಂಭದ ದಿನ, ನಿಗದಿತ ಸಾಲಿನಲ್ಲಿ ತೆಂಗಿನಕಾಯಿ ಕಟ್ಟುತ್ತಾರೆ. ವ್ರತಾಚರಣೆಯ ಕಾಲದಲ್ಲಿ ಮದ್ಯಪಾನ, ಮಾಂಸಾಹಾರ ಸೇವನೆ ನಿಷಿದ್ಧ. ಮೊದಲ ದಿನ ದಾರ ಕಟ್ಟಿದ ತೆಂಗಿನಕಾಯಿ ಕೈಯಲ್ಲಿ ಹಿಡಿದು, ನಿಮ್ಮ ಗೋತ್ರ, ನಕ್ಷತ್ರ ಹೇಳಿ ಮನದಲ್ಲಿ ಸಂಕಲ್ಪ ಮಾಡಿಕೊಳ್ಳುವುದು. 16 ದಿನದಲ್ಲಿ 4 ದಿನ 41 ಪ್ರದಕ್ಷಿಣೆ ಹಾಕಬೇಕು. 108 ಬಾರಿ ಆಂಜನೇಯ ಸ್ತೋತ್ರ ಪಠಿಸಬೇಕು. 16ನೇ ದಿನ ಪೂರ್ಣಫಲ ಬಿಚ್ಚಿ, ಅದರಲ್ಲಿ ಸಿಹಿ ಮಾಡಿ, ಮನೆಮಂದಿಯೊಂದಿಗೆ ಪ್ರಸಾದ ಸೇವಿಸಬೇಕು.
ಇದಲ್ಲದೆ ನಮ್ಮ ಗಿರಿನಗರ ಆಶ್ರಮದ ವತಿಯಿಂದ, 44 ಉಚಿತ ವೈದ್ಯಕೀಯ ಶಿಬಿರ ನಡೆಸಲಾಗಿದೆ. ಸುಮಾರು 65 ಕಿವುಡು- ಮೂಕ ಮಕ್ಕಳಿಗೆ, ಶ್ರೀ ಗಣಪತಿ ಸಚ್ಚಿದಾನಂದ ವಾಗ್ದೇವಿ ಸಂಯುಕ್ತ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎನ್ನುತ್ತಾರೆ ಆಶ್ರಮದ ಕಾರ್ಯನಿರ್ವಾಹಕ ಟ್ರಸ್ಟಿ ಸಿ.ಎಸ್. ನರಸಿಂಹ.

- ಗೀತಾ ಶ್ರೀನಿವಾಸನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.