ಈ ವ್ಯಕ್ತಿ ಕೇವಲ 90 ನಿಮಿಷದಲ್ಲಿ 30 ಕೋಟಿ ರೂ ಗಳಿಸುತ್ತಾನೆ: ರೊನಾಲ್ಡೊ ಆದಾಯ ನೋಡಿ ಬೆಚ್ಚಿಬಿದ್ದ ಜಗತ್ತು!
ರೊನಾಲ್ಡೊ ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಅವರ ಈ ಭಾರೀ ಸಂಪಾದನೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

ಫುಟ್ಬಾಲ್ ದಿಗ್ಗಜ, ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಆದಾಯದ ಅಂಕಿ-ಅಂಶಗಳನ್ನು ನೋಡಿ ಇಡೀ ಜಗತ್ತು ಬೆಚ್ಚಿ ಬಿದ್ದಿದೆ.
ರೊನಾಲ್ಡೊ ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಿಂದಲೇ ಸುಮಾರು 30 ಕೋಟಿ ರೂ. ಆದಾಯ ಗಳಿಸುತ್ತಿದ್ದು, ಅವರ ಈ ಭಾರೀ ಸಂಪಾದನೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.
ರೊನಾಲ್ಡ್ ಪ್ರತಿ ಬಾರಿಯೂ ಫುಟ್ಬಾಲ್ ಮೈದಾನಕ್ಕೆ ಕಾಲಿಟ್ಟಾಗ, ಗಡಿಯಾರ ವಿಭಿನ್ನವಾಗಿ ಓಡಲು ಪ್ರಾರಂಭಿಸುತ್ತದೆ. ಅವರು ಕೇವಲ 90 ನಿಮಿಷಗಳ ಒಂದು ಪಂದ್ಯದಲ್ಲಿ ಸುಮಾರು 30 ಕೋಟಿ ರೂ. ಗಳಿಸುತ್ತಾರೆ. ಮತ್ತೊಂದೆಡೆ ವರ್ಷಕ್ಕೆ 12 ಲಕ್ಷ ರೂಪಾಯಿ ಸಂಬಳ ಪಡೆಯುವ ಭಾರತೀಯ ಉದ್ಯೋಗಿಯನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ರೊನಾಲ್ಡೊ ಒಂದು ಪಂದ್ಯದಲ್ಲಿ ಗಳಿಸುವ 30 ಕೋಟಿ ರೂಪಾಯಿ ಸಂಪಾದಿಸಲು ಸುಮಾರು 2,500 ವರ್ಷ ಕೆಲಸ ಮಾಡಬೇಕಾಗುತ್ತದೆ.
41 ವರ್ಷದ ರೊನಾಲ್ಡೊ ಸೌದಿ ಅರೇಬಿಯಾದ ಕ್ಲಬ್ ಜೊತೆಗಿನ ಒಪ್ಪಂದದ ಮೂಲಕ ವರ್ಷಕ್ಕೆ ಸುಮಾರು 1,700 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಒಂದು ವರ್ಷದಲ್ಲಿ ಕ್ಲಬ್ ಹಾಗೂ ದೇಶದ ಪರ ಸರಾಸರಿ 55 ಪಂದ್ಯಗಳನ್ನು ಆಡುತ್ತಾರೆ ಎಂದು ಲೆಕ್ಕ ಹಾಕಿದರೆ, ಪ್ರತಿ ಪಂದ್ಯಕ್ಕೆ ಸುಮಾರು 30 ಕೋಟಿ ರೂಪಾಯಿ ಆದಾಯ ಬರುತ್ತದೆ.
ಅಂದರೆ ಕೇವಲ 90 ನಿಮಿಷಗಳ ಆಟದಿಂದಲೇ ಅವರು ಗಳಿಸುವ ಮೊತ್ತ, ಅನೇಕ ಕಂಪನಿಗಳ ವಾರ್ಷಿಕ ವೇತನ ವೆಚ್ಚಕ್ಕೆ ಸಮಾನವಾಗಿದೆ.
ಇನ್ನು ರೊನಾಲ್ಡೊ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 10,000 ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಎರಡು ದಶಕಗಳಿಗಿಂತ ಹೆಚ್ಚು ಕಾಲದ ಫುಟ್ಬಾಲ್ ವೃತ್ತಿಜೀವನ, ಜಾಹೀರಾತು ಒಪ್ಪಂದಗಳು, ಬ್ರ್ಯಾಂಡ್ ಪ್ರಚಾರ, ಉದ್ಯಮ ಹೂಡಿಕೆಗಳು ಮತ್ತು ಸೋಷಿಯಲ್ ಮೀಡಿಯಾದಿಂದ ಈ ಸಂಪತ್ತು ನಿರ್ಮಾಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



