ಕ್ರೀಡೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮೊದಲ ಪಂದ್ಯದಲ್ಲೇ 3 ಗೋಲುಗಳಿಂದ ಚೀನಾ ಸೋಲಿಸಿದ ಭಾರತ!

ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರೆ, ಚೀನಾ ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು.

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಮೊದಲ ಪಂದ್ಯದಲ್ಲೇ 3 ಗೋಲುಗಳಿಂದ ಚೀನಾ ಸೋಲಿಸಿದ ಭಾರತ!
ಭಾರತದ ಪುರುಷರ ಹಾಕಿ ತಂಡ
Published On :

ಹುಲುನ್‌ಬುಯಿರ್: ಭಾನುವಾರ ಇಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಚೀನಾ ವಿರುದ್ಧ ಹಾಲಿ ಚಾಂಪಿಯನ್ ಭಾರತದ ಪುರುಷರ ಹಾಕಿ ತಂಡ 3-0 ಗೋಲುಗಳಿಂದ ಗೆಲುವು ಪಡೆದು ಶುಭಾರಂಭ ಮಾಡಿತು.

ಭಾರತದ ಪರ ಸುಖ್ ಜೀತ್ ಸಿಂಗ್ (14ನೇ ನಿಮಿಷ), ಉತ್ತಮ್ ಸಿಂಗ್ (27ನೇ), ಮತ್ತು ಅಭಿಷೇಕ್ (32ನೇ) ಗೋಲು ಗಳಿಸಿದರೆ, ಚೀನಾ ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು.

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿ ಕಂಚಿನ ಪದಕ ಗೆಲುವಿನೊಡನೆ ಈ ಟೂರ್ನಿಗೆ ಬಂದಿದ್ದ ಭಾರತ ತಂಡ ಉತ್ತಮ ಪ್ರದರ್ಶನ ನೀಡಿತು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿತು. ವಿಜೇತರಾಗಿ ಹೊರಹೊಮ್ಮುವಲ್ಲಿ ತಂಡದ ರಕ್ಷಣಾ ವಿಭಾಗ ಬಲಾಢ್ಯವಾಗಿತ್ತು.

ಮೊದಲ ಕ್ವಾರ್ಟರ್‌ನಲ್ಲಿ ಸುಖಜೀತ್ ಚೆಂಡನ್ನು ಗುರಿ ತಲುಪಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್ ನ ಅಂತ್ಯಕ್ಕೆ ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ಉತ್ತಮ್ ಗೋಲು ಭಾರಿಸುವ ಮೂಲಕ ಭಾರತಕ್ಕೆ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಇದಾದ ಕೇವಲ ಎರಡು ನಿಮಿಷಗಳ ನಂತರ, ಅಭಿಷೇಕ್ ಅದ್ಭುತವಾದ ರಿವರ್ಸ್ ಹಿಟ್‌ನೊಂದಿಗೆ ಚೆಂಡನ್ನು ಕರಾರುವಾಕ್ ಆಗಿ ಗುರಿ ತಲುಪಿಸಿ ಭಾರತ ಮುನ್ನಡೆಯನ್ನು 3-0ಕ್ಕೆ ಹೆಚ್ಚಿಸಿದರು.

ಸೋಮವಾರ ನಡೆಯಲಿರುವ ಗುಂಪಿನ ಎರಡನೇ ಪಂದ್ಯದಲ್ಲಿ ಭಾರತ ತಂಡ ಜಪಾನ್ ತಂಡವನ್ನು ಎದುರಿಸಲಿದೆ. ಇತರ ಪಂದ್ಯಗಳಲ್ಲಿ, ಮಲೇಷ್ಯಾ ಹೈ-ವೋಲ್ಟೇಜ್ ಸ್ಪರ್ಧೆಯಲ್ಲಿ ಪಾಕಿಸ್ತಾನವನ್ನು 2-2 ಡ್ರಾಗೆ ಹಿಡಿದಿಟ್ಟುಕೊಂಡಿತು, ಆದರೆ ಜಪಾನ್ ಮತ್ತು ಕೊರಿಯಾ 5-5 ಡ್ರಾಕ್ಕೆ ನೆಲೆಗೊಳ್ಳುವ ಮೊದಲು ಗೋಲು-ಸಂಭ್ರಮದಲ್ಲಿ ತೊಡಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.