Paralympics 2024: ಇತಿಹಾಸ ಬರೆದ ಭಾರತ; ಓಟದ ಸ್ಪರ್ಧೆಯಲ್ಲಿ Preethi Pal ಗೆ ಕಂಚು, ಹೈಜಂಪ್ ನಲ್ಲಿ Nishad Kumar ಗೆ ಬೆಳ್ಳಿ ಪದಕ!
ಭಾರತದ ಮಹಿಳಾ ಅಥ್ಲೀಟ್ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದು, ಪ್ರೀತಿಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರೀತಿಗೆ ಇದು ಎರಡನೇ ಕಂಚಿನ ಪದಕವಾಗಿದೆ.

ಪ್ಯಾರಿಸ್: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ ನಾಲ್ಕನೇ ದಿನ ಅಂದರೆ ಸೆಪ್ಟೆಂಬರ್ 1 ರಂದೂ ಕೂಡ ಭಾರತದ ಪದಕ ಬೇಟೆ ಮುಂದುವರೆದಿದ್ದು, ಭಾರತೀಯ ಅಥ್ಲೀಟ್‌ಗಳು ತಮ್ಮ ಶಕ್ತಿ ಪ್ರದರ್ಶಿಸಿ ದೇಶಕ್ಕೆ ಆರನೇ ಪದಕವನ್ನು ಗೆದ್ದಿದ್ದಾರೆ.
ಭಾರತದ ಮಹಿಳಾ ಅಥ್ಲೀಟ್ ಪ್ರೀತಿ ಪಾಲ್ ಮಹಿಳೆಯರ 200 ಮೀಟರ್ ಓಟದ (ಟಿ35) ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದು, ಪ್ರೀತಿಪಾಲ್ 30.01 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪ್ರೀತಿಗೆ ಇದು ಎರಡನೇ ಕಂಚಿನ ಪದಕವಾಗಿದೆ.
ಇದಕ್ಕೂ ಮುನ್ನ 100 ಮೀಟರ್ ಓಟದಲ್ಲಿ ಪ್ರೀತಿ ಕಂಚಿನ ಪದಕ ಜಯಿಸಿದ್ದರು. ಇದರೊಂದಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತದ ಪದಕಗಳ ಸಂಖ್ಯೆ ಈಗ 7 ಕ್ಕೆ ತಲುಪಿದೆ. ಭಾರತ ಇದುವರೆಗೆ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ಮೂರನೇ ದಿನವಾದ ಆಗಸ್ಟ್ 31 ರಂದು, ಮಹಿಳಾ ಶೂಟರ್ ರುಬಿನಾ ಫ್ರಾನ್ಸಿಸ್ ಐದನೇ ಪದಕವನ್ನು ಗೆದ್ದಿದ್ದರು. ಇದು ಕಂಚಿನ ಪದಕವಾಗಿತ್ತು. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ (SH1)ನಲ್ಲಿ ರುಬಿನಾ ಕಂಚಿನ ಪದಕ ಗೆದ್ದರು. ಅವರು ಫೈನಲ್‌ನಲ್ಲಿ 211.1 ಅಂಕ ಗಳಿಸಿದ್ದರು.
ಹೈಜಂಪ್ ನಲ್ಲಿ ನಿಷಾದ್ ಕುಮಾರ್ ಗೆ ಬೆಳ್ಳಿ
ಭಾರತದ ನಿಶಾದ್ ಕುಮಾರ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಹೈ ಜಂಪ್ T47 ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದಿದ್ದು, ಮೂರು ವರ್ಷಗಳ ಹಿಂದೆ ಟೋಕಿಯೊದಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶಾದ್ ಅವರು ಹಾಲಿ ಋತುವಿನಲ್ಲಿ 2.04 ಮೀ.ದೂರಕ್ಕೆ ಜಿಗಿಯುವ ಮೂಲಕ ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಂಡರು. ಅಲ್ಲದೆ 2ನೇ ಸ್ಥಾನಕ್ಕೇರಿ ಬೆಳ್ಳಿ ಪದಕಕ್ಕೆ ಭಾಜನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



