ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿಗೆ 12 ವರ್ಷ ನಿಷೇಧ!
ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ.

ನವದೆಹಲಿ: ಉದ್ದೀಪನ ಮದ್ದು ಸೇವನೆ ಆರೋಪಕ್ಕೊಳಗಾಗಿದ್ದ ಭಾರತದ ಖ್ಯಾತ ಹ್ಯಾಮರ್ ಎಸೆತಗಾರ್ತಿ ರಚನಾ ಕುಮಾರಿ ಅವರು ಅಂತಾರಾಷ್ಟ್ರೀಯ ಫೆಡರೇಶನ್‌ನ ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ನ (ಎಐಯು) ಬಹು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಕ್ಕಾಗಿ ಮಂಗಳವಾರ 12 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ಪ್ರಮುಖವಾಗಿ ಅವರ ವೃತ್ತಿಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ.
ಏಷ್ಯನ್ ಗೇಮ್ಸ್ ಗೆ ಕೆಲವೇ ದಿನಗಳ ಮೊದಲು ಪರೀಕ್ಷೆಗಾಗಿ ಕುಮಾರಿ ಅವರಿಂದ ಮಾದರಿಗಳನ್ನು ಅಥ್ಲೆಟಿಕ್ಸ್ ಇಂಟಗ್ರಿಟಿ ಯೂನಿಟ್ ಪಡೆದಿತ್ತು. 30 ವರ್ಷದ ಕ್ರೀಡಾಪಟುವಿನ ಪರೀಕ್ಷಾ ಮಾದರಿಯಲ್ಲಿ ಸ್ಟನೊಝೊಲೋಲ್, ಮೆಟಂಡಯನೋನ್ ಮತ್ತು ಡೀಹೈಡ್ರೋ ಕ್ಲೋರೋಮಿತೈಲ್ಟೆಸ್ಟಾಸ್ಟಿರೋನ್ ಎಂಬ ಸ್ಟೀರಾಯ್ಡ್ ಗಳು ಪತ್ತೆಯಾಗಿದ್ದವು.
"ನಿಷೇಧಿತ ವಸ್ತುವಿನ ಇರುವಿಕೆ, ಬಳಕೆಗಾಗಿ ನವೆಂಬರ್ 24, 2023 ರಿಂದ 12 ವರ್ಷಗಳ ಕಾಲ ರಚನಾ ಕುಮಾರಿ ಅವರನ್ನು ನಿಷೇಧಿಸಲಾಗಿದೆ ಎಂದು ಎಐಯು ಟ್ವೀಟ್ ನಲ್ಲಿ ತಿಳಿಸಿದೆ. ಸೆಪ್ಟೆಂಬರ್ 24 ,2023 ರಿಂದ ಯಾವುದೇ ಟೈಟಲ್, ಪ್ರಶಸ್ತಿ, ಪದಕ, ಬಹುಮಾನ ಮತ್ತು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳವುದಾಗಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


