ಕ್ರೀಡೆ

Olympics 2024: ಪೋಲ್ ವಾಲ್ಟ್ ನಲ್ಲಿ ಗೆಲ್ಲುವ ಫ್ರೆಂಚ್ ಅಥ್ಲೀಟ್ ಕನಸಿಗೆ ಮರ್ಮಾಂಗ ಅಡ್ಡಿ!

ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸ್ಪರ್ಧಿಸಿದ್ದ ಫ್ರೆಂಚ್ ಅಥ್ಲೀಟ್, ಆಂಟನಿ ಅಮ್ಮಿರತಿ (21) ಅವರು ಬಹುತೇಕ ಗೆದ್ದಿದ್ದರಾದರೂ, ವಿಲಕ್ಷಣ ಎಂಬಂತೆ ಸೋತಿದ್ದಾರೆ.

Olympics 2024: ಪೋಲ್ ವಾಲ್ಟ್ ನಲ್ಲಿ ಗೆಲ್ಲುವ ಫ್ರೆಂಚ್ ಅಥ್ಲೀಟ್ ಕನಸಿಗೆ ಮರ್ಮಾಂಗ ಅಡ್ಡಿ!
ಫ್ರೆಂಚ್ ಅಥ್ಲೀಟ್
Published On :

ಪ್ಯಾರಿಸ್: ಭಾರತದ ಕುಸ್ತಿ ಪಟು ವಿನೇಶ್ ಫೋಗಟ್ ದೇಹದ ತೂಕ ಕೇವಲ 100 ಗ್ರಾಮ್ ಹೆಚ್ಚಳವಾಗಿದ್ದಕ್ಕೆ ಒಲಿಂಪಿಕ್ಸ್ ನಲ್ಲಿ ಅನರ್ಹರಾಗಿರುವ ಸುದ್ದಿ ಎಲ್ಲೆಡೆ ಚರ್ಚೆಯಾಗತೊಡಗಿದೆ.

ಈ ಮಧ್ಯೆ ಪ್ಯಾರಿಸ್ ಒಲಂಪ್ಪಿಕ್ಸ್ ನಲ್ಲಿ ದುರದೃಷ್ಟದಿಂದ ಫ್ರೆಂಚ್ ನ ಕ್ರೀಡಾಪಟು ಓರ್ವನ ಪದಕದ ಕನಸು ಭಗ್ನಗೊಂಡಿದೆ.

ಪೋಲ್ ವಾಲ್ಟ್ ಕ್ರೀಡೆಯಲ್ಲಿ ಸ್ಪರ್ಧಿಸಿದ್ದ ಫ್ರೆಂಚ್ ಅಥ್ಲೀಟ್, ಆಂಟನಿ ಅಮ್ಮಿರತಿ (21) ಅವರು ಬಹುತೇಕ ಗೆದ್ದಿದ್ದರಾದರೂ, ವಿಲಕ್ಷಣ ಎಂಬಂತೆ 5.70 ಮೀಟರ್ ಇದ್ದ ಹೈಟ್ ಬಾರ್ ಗೆ ಅವರ ಮರ್ಮಾಂಗ ತಾಗಿದ್ದರ ಪರಿಣಾಮ ಮೂರನೇ ಯತ್ನದಲ್ಲಿ ಪಂದ್ಯ ಸೋತಿದ್ದಾರೆ.

ಆಂಟನಿ ಅಮ್ಮಿರತಿ ಅವರ ಪೋಲ್ ವಾಲ್ಟ್ ಸ್ಪರ್ಧೆಯ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ. ವಿಡಿಯೋಗಳಿಗೆ ಹಲವರು ತರಹೆವಾರಿ ಕಾಮೆಂಟ್ ಮಾಡುತ್ತಿದ್ದು ಲಘು ಧಾಟಿಯಲ್ಲೂ ಕಾಮೆಂಟ್ ಗಳು ಬಂದಿವೆ.

2016 ರಲ್ಲಿ ರಿಯೋ ಒಲಂಪಿಕ್ಸ್ ನಲ್ಲಿ ಜಪಾನ್ ಪೋಲ್ ವಾಲ್ಟರ್ ಹಿರೊಕಿ ಒಗಿತಾ ಅವರೂ ಇದೇ ಮಾದರಿಯಲ್ಲಿ ಸೋತಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.