ಏಷ್ಯನ್ ಗೇಮ್ಸ್: ಕ್ರೀಡಾ ಸಚಿವಾಲಯದಿಂದ ಅಥ್ಲೀಟ್ ಗಳ ಹೆಸರು ಘೋಷಣೆ
ಚೀನಾದಲ್ಲಿ ಸೆ.23 ರಿಂದ ಅ.08 ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೊನೆಗೂ ಕ್ರೀಡಾ ಸಚಿವಾಲಯ 634 ಅಥ್ಲೀಟ್ ಗಳ ಹೆಸರುಗಳನ್ನು ಅಂತಿಮಗೊಳಿಸಿದೆ.

ನವದೆಹಲಿ: ಚೀನಾದಲ್ಲಿ ಸೆ.23 ರಿಂದ ಅ.08 ವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್ ಗೆ ಕೊನೆಗೂ ಕ್ರೀಡಾ ಸಚಿವಾಲಯ 634 ಅಥ್ಲೀಟ್ ಗಳ ಹೆಸರುಗಳನ್ನು ಅಂತಿಮಗೊಳಿಸಿದೆ.
ಎನ್ಎಸ್ಎಫ್ ನಿಂದ ಒಟ್ಟು 850 (440 ಪುರುಷ 410 ಮಹಿಳೆ ಕ್ರೀಡಾಪಟುಗಳು) ಹೆಸರುಗಳ ಪೈಕಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿತ್ತು.
ಫುಟ್ಬಾಲ್ ನ್ನು ಸೇರಿಸಲಾಗಿತ್ತು. ಹಲವು ಫೆಡರೇಷನ್ ಗಳು ಅನುಮೋದನೆಗಾಗಿ ಕಾಯುತ್ತಿದ್ದವು. ಆದರೆ ಕ್ರೀಡಾ ಸಚಿವಾಲಯದಿಂದ ನಿಗದಿಪಡಿಸಲಾಗಿದ್ದ ಮಾನದಂಡಗಳಿಗೆ ಅನುಸಾರವಾಗಿರದ ಕಾರಣ ಅನುಮೋದನೆ ಲಭ್ಯವಾಗಲಿಲ್ಲ.
ಅಥ್ಲೀಟ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಹ್ಯಾಂಗ್‌ಝೌ ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾಗವಹಿಸುವ ಕನಸು ಭಗ್ನಗೊಂಡಿದೆ. ಜಿಮ್ನಾಸ್ಟಿಕ್ಸ್ ಫೆಡರೇಶನ್ ನಡೆಸಿದ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದರೂ ಆಕೆಯನ್ನು ಕೈಬಿಡುವ ನಿರ್ಧಾರದಿಂದ ಆಕೆಯ ಕೋಚ್ ಬಿಶ್ವೇಶ್ವರ್ ನಂದಿ ಅವರಿಗೂ ನಿರಾಶೆಯುಂಟಾಗಿದೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
"ಹಿಂದಿನ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ಆಯ್ಕೆ ಮಾಡಲಾಗುತ್ತಿರುವುದನ್ನು ನಾನು ನೋಡುತ್ತಿರುವುದು ಇದೇ ಮೊದಲು. ತರಬೇತುದಾರರಾಗಿ ಮತ್ತು ಆಟಗಾರರಾಗಿ ನಾವು ಯಾವಾಗಲೂ ಪ್ರಸ್ತುತ ಪ್ರದರ್ಶನ ಮತ್ತು ಫಾರ್ಮ್ ಅನ್ನು ಆಧರಿಸಿ ಕ್ರೀಡಾಪಟುಗಳನ್ನು ಆಯ್ಕೆ ಮಾಡುತ್ತೇವೆ. ಆದರೆ ಈ ಬಾರಿ ಹಿಂದಿನ ಪ್ರದರ್ಶನಗಳನ್ನು ಆಧರಿಸಲಾಗಿದೆ. ಇದು ಭಾರತೀಯ ಜಿಮ್ನಾಸ್ಟಿಕ್ಸ್‌ಗೆ ಒಳ್ಳೆಯದಲ್ಲ ಮತ್ತು ಕ್ರೀಡೆಯನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ. ಪುರುಷರ ತಂಡವನ್ನು ಪರಿಗಣಿಸಬಹುದಿತ್ತು. ಒಬ್ಬ ಜಿಮ್ನಾಸ್ಟ್ ಅನ್ನು ಮಾತ್ರ ಅಂತಿಮಗೊಳಿಸಲಾಗಿದೆ" ಎಂದು ಬಿಶ್ವೇಶ್ವರ್ ನಂದಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


