ಕ್ರೀಡೆ

ವಿಶ್ವಕಪ್ ಚೆಸ್ ಫೈನಲ್: ಪ್ರಗ್ನಾನಂದ - ಕಾರ್ಲ್‌ಸೆನ್ ನಡುವಿನ 2ನೇ ಪಂದ್ಯವೂ ಡ್ರಾನಲ್ಲಿ ಅಂತ್ಯ!

ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ವಿಶ್ವಕಪ್ ಚೆಸ್ ಫೈನಲ್: ಪ್ರಗ್ನಾನಂದ - ಕಾರ್ಲ್‌ಸೆನ್ ನಡುವಿನ 2ನೇ ಪಂದ್ಯವೂ ಡ್ರಾನಲ್ಲಿ ಅಂತ್ಯ!
ಪ್ರಗ್ನಾನಂದ
Published On :

ಬಾಕು: ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೂ ಡ್ರಾ ಸಾಧಿಸಿದ್ದ ಇಬ್ಬರು ಗ್ರ್ಯಾಂಡ್‌ಮಾಸ್ಟರ್ ಗಳು ಇಂದು ತಮ್ಮ ಆಟವನ್ನು ಮುಂದುವರೆಸಿ 90 ನಿಮಿಷಗಳ ನಂತರ 30 ಚಲನೆಗಳಲ್ಲಿ ಶಾಂತವಾಗಿ ಆಟವಾಡಿ ಡ್ರಾ ಸಾಧಿಸಿದರು.

ಇಂದೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಗುರುವಾರ ನಡೆಯುವ ಟೈ-ಬ್ರೇಕ್‌ನಲ್ಲಿ ಚಾಂಪಿಯನ್‌ ಯಾರು ಎಂಬುದು ನಿರ್ಧಾರವಾಗಲಿದೆ.

ಕಾರ್ಲ್‌ಸೆನ್ ಅವರು ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದರು. ಪ್ರಗ್ನಾನಂದ ಅವರು ಕಪ್ಪು ಕಾಯಿಗಳೊಂದಿಗೆ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ. ಇಬ್ಬರ ಸಮಬಲದ ಹೋರಟದಿಂದಾಗಿ 30 ಚಲನೆಗಳ ಬಳಿಕ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.