ಫಿಫಾ ವಿಶ್ವಕಪ್ 2022: ನಾಲ್ಕು ಬಾರಿ ಚಾಂಪಿಯನ್ ಜರ್ಮನಿಗೆ ಶಾಕ್ ನೀಡಿದ ಜಪಾನ್; 2-1 ಗೋಲುಗಳೊಂದಿಗೆ ಗೆಲುವು
ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು.

ದೋಹಾ: ಖಲೀಫಾ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ನ್ನು ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್, ಅದ್ಭುತವಾಗಿ ಕಾಂಬ್ಯಾಕ್ ಮಾಡಿತು.
ಪಂದ್ಯದ ಮೊದಲಾರ್ಧದ ಕೊನೆಯಲ್ಲಿ ಜರ್ಮನಿ ಮುನ್ನಡೆಯಲ್ಲಿತ್ತು. ಆದರೆ, ಜಪಾನ್ ತಂಡ 75ನೇ ನಿಮಿಷ ಹಾಗೂ 83ನೇ ನಿಮಿಷದಲ್ಲಿ ಗೋಲು ಸಿಡಿಸುವ ಮೂಲಕ ತನ್ನ ಈವರೆಗಿನ ಅತ್ಯಂತ ಸ್ಮರಣೀಯ ಗೆಲುವು ದಾಖಲಿಸಿತು. ಈ ಎರಡೂ ಗೋಲುಗಳನ್ನು ಸೂಪರ್ ಸಬ್‌ಗಳಾದ ರಿಟ್ಸು ಡೋನ್ ಹಾಗೂ ಟಕುಮಾ ಅಸಾನೋ ಬಾರಿಸಿದರು.
57 ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಟಕುಮಾ ಅಸಾನೊ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಪಂದ್ಯದ 33ನೇ ನಿಮಿಷದಲ್ಲಿ ಜಪಾನ್‌ನ ವಿಂಗ್ ಬ್ಯಾಕ್ ಡೇವಿಡ್ ರೌಮ್ ಅವರ ಮೇಲೆ ಜಪಾನ್‌ನ ಗೋಲ್ ಕೀಪರ್ ಶೈಚು ಗೊಂಡಾ ಫೌಲ್ ಮಾಡಿದ್ದ ಕಾರಣಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗುಂಡೋಗನ್ ಗೋಲು ಬಾರಿಸಿದ್ದರು.
ಈ ಗೆಲುವಿನೊಂದಿಗೆ, ಜರ್ಮನಿ, ಕೋಸ್ಟರಿಕಾ ಮತ್ತು ಸ್ಪೇನ್ ಒಳಗೊಂಡಿರುವ ಇ ಗುಂಪಿನಲ್ಲಿ ಜಪಾನ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


