ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಫೈನಲ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿ ವಿ ಸಿಂಧು
ಚೀನಾದ ಆಟಗಾರ್ತಿ ವಾಂಗ್ ಝಿ ಯಿ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸುವ ಮೂಲಕ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಸಿಂಗಾಪುರ ಓಪನ್ ಸೂಪರ್ 500 ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಿಂಗಾಪುರ: ಚೀನಾದ ಆಟಗಾರ್ತಿ ವಾಂಗ್ ಝಿ ಯಿ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸುವ ಮೂಲಕ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು (P V Sindhu) ಸಿಂಗಾಪುರ ಓಪನ್ ಸೂಪರ್ 500 ಮಹಿಳೆಯರ ಸಿಂಗಲ್ಸ್ ನಲ್ಲಿ (Singapur open 2022) ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂದು ಸಿಂಗಾಪುರದಲ್ಲಿ ಮುಕ್ತಯವಾದ ತೀವ್ರ ಪೈಪೋಟಿಯ ಅಂತಿಮ ಪಂದ್ಯದಲ್ಲಿ ಸಿಂಧು ಅವರು ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು 22 ವರ್ಷದ ವಾಂಗ್ ಝಿ ಯಿ ಅವರನ್ನು 21-9, 11-21, 21-15 ಸೆಟ್ ಗಳಿಂದ ಮಣಿಸಿದ್ದಾರೆ.
ಇದೇ ಜುಲೈ 28ರಂದು ಬಿರ್ಮಿಂಗ್ಯಾಮ್ ನಲ್ಲಿ ಆರಂಭವಾಗಲಿರುವ ಕಾಮನ್ ವೆಲ್ತ್ ಗೇಮ್ ನಲ್ಲಿ ಪಿ ವಿ ಸಿಂಧು ಅವರಿಗೆ ಈ ಗೆಲುವು ಇನ್ನಷ್ಟು ಹುರುಪು ನೀಡಲಿದೆ. ಈ ವರ್ಷದಲ್ಲಿ ಸಿಂಧು ಅವರು ಪ್ರಶಸ್ತಿ ಗೆಲ್ಲುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಸೈಯದ್ ಮೋದಿ ಇಂಟರ್ನಾಷನಲ್ ಮತ್ತು ಸ್ವಿಸ್ ಓಪನ್ ನಲ್ಲಿ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು. ಎರಡು ಒಲಿಂಪಿಕ್ ಪದಕಗಳು ಮಾತ್ರವಲ್ಲದೆ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಸಿಂಧು ಗೆದ್ದುಕೊಂಡಿದ್ದಾರೆ.
ಪ್ರಧಾನಿ ಸೇರಿ ಹಲವರು ಅಭಿನಂದನೆ: ಪಿ ವಿ ಸಿಂಧು ಅವರ ಗೆಲುವಿಗೆ ಪ್ರಧಾನಿ ಮೋದಿ ಸೇರಿ ದೇಶಾದ್ಯಂತ ಗಣ್ಯರು, ಸೆಲೆಬ್ರಿಟಿಗರು, ಕ್ರೀಡಾಪ್ರೇಮಿಗಳು, ದೇಶಪ್ರೇಮಿಗಳಿಂದ ಸಿಂಧುಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತನ್ನ ಮೊದಲ ಸಿಂಗಾಪುರ್ ಓಪನ್ ಪ್ರಶಸ್ತಿಯನ್ನು ಗೆದ್ದ ಸಿಂಧು ಅವರು ಮತ್ತೊಮ್ಮೆ ತಮ್ಮ ಅಸಾಧಾರಣ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಮುಂಬರುವ ಆಟಗಾರರಿಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


