ವಿಂಬಲ್ಡನ್: ಬಾರ್ಟಿಗೆ ಮಹಿಳಾ ಸಿಂಗಲ್ಸ್ ಕಿರೀಟ
ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ, ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಹಿರಿಮೆ ಮೆರೆದಿದ್ದಾರೆ."

ಲಂಡನ್: ಅಗ್ರ ಶ್ರೇಯಾಂಕಿತೆ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ, ಇಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಹಿರಿಮೆ ಮೆರೆದಿದ್ದಾರೆ."
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಶ್ಲೀ ಬಾರ್ಟಿ,ಎಂಟನೇ ಶ್ರೇಯಾಂಕದ ಆಟಗಾರ್ತಿ ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವಾ ಅವರನ್ನು 6-3, 6-7 (4), 6-3 ರಿಂದ ಸೋಲಿಸಿ 41 ವರ್ಷಗಳ ನಂತರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಂಡ ಆಸ್ಟೇಲಿಯಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಸೆಟ್ ನಲ್ಲಿ ಆರಂಭದಲ್ಲಿ ಉಭಯ ಆಟಗಾರ್ತಿಯರು ಸಮಬಲದ ಹೋರಾಟ ನಡೆಸಿದ್ದರಿಂದ ಪಂದ್ಯ ಒಂದು ಹಂತದಲ್ಲಿ ಪಂದ್ಯ 3-3 ರಿಂದ ಸಮಸ್ಥಿತಿಯಲ್ಲಿತ್ತು. ನಂತರ ಸೆಟ್ ಮೇಲೆ ಹಿಡಿತ ಸಾಧಿಸಿದ ಆಶ್ಲೀ ಬಾರ್ಟಿ, ಸತತ ಮೂರು ಅಂಕ ಪಡೆಯುವ ಮೂಲಕ ಎರಡನೇ ಸೆಟ್ ಆಡಲು ಸಜ್ಜಾದರು.
ಎರಡನೇ ಸೆಟ್ ನ ಮೇಲೆ ಆರಂಭದಿಂದಲೇ ಹಿಡಿತ ಸಾಧಿಸಿದ ಆಶ್ಲೀ ಬಾರ್ಟಿ, 4-0 ರ ಮುನ್ನಡೆ ಸಾಧಿಸಿ ಸುಲಭ ಗೆಲುವಿನತ್ತ ದಾಪುಗಾಲು ಇಟ್ಟರು. ಆದರೆ ತೀವ್ರ ಹಿನ್ನೆಡಯಾದರೂ ಎದೆಗುಂದದ ಕರೋಲಿನಾ ಪ್ಲಿಸ್ಕೋವಾ ಸತತ ನಾಲ್ಕು ಅಂಕಗಳನ್ನು ಸೇರಿಸಿ ಪಂದ್ಯ ಟೈಬ್ರೇಕರ್ ವರೆಗೂ ಬೆಳೆಯುವಂತೆ ಮಾಡಿದ್ದಲ್ಲದೇ ಸೆಟ್ ನ್ನು ಗೆದ್ದು ಬೀಗಿದರು.
ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್ ನಲ್ಲಿ ಉತ್ತಮ ಆಟದ ಪ್ರದರ್ಶಿಸಿದ ಆಶ್ಲೀ ಬಾರ್ಟಿ, ಸೆಟ್ ನ್ನು ಸಮಯೋಚಿತ ಆಟದ ಪ್ರದರ್ಶನ ನೀಡಿ ಗಮನ ಸೆಳೆದರು.
1980 ರಲ್ಲಿ ಇವಾನೆ ಗೂಲಗಾಂಗ್ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಂಡ ನಂತರ ಆಸ್ಟ್ರೇಲಿಯಾದ ಯಾವ ಆಟಗಾರ್ತಿಯರು ಪ್ರಶಸ್ತಿ ಗೆಲ್ಲುವ ಮಾತಿರಲಿ, ಫೈನಲ್ ಹಂತವನ್ನು ಕೂಡ ಕಂಡಿರಲ್ಲಿಲ್ಲ. 41 ವರ್ಷಗಳ ನಂತರ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್ ಪ್ರವೇಶಿಸಿದ್ದಲ್ಲದೇ ಪ್ರಶಸ್ತಿಯನ್ನು ಕೂಡ ಬಾಚಿಕೊಂಡ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


